ಪುತ್ತೂರು: ಕುಂಬ್ರದ ಪಿ ಕೆ ಪಿಶ್ ಲ್ಯಾಂಡ್ ನಲ್ಲಿ ಹಸಿ ಮೀನು ಭಾರೀ ಅಗ್ಗ ದರದಲ್ಲಿ ಮಾರಾಟವಾಗುತ್ತಿದೆ. ಕಳೆದ ಆರು ತಿಂಗಳಿಂದ ಮೀನಿನ ದರ ಏರುತ್ತಲೇ ಇದ್ದು ಇಂದು ಏಕಾಏಕಿ ಮೀನಿನ ದರ ಪಾತಾಳಕ್ಕೆ ಇಳಿದಿದೆ. 250 ರೂ ಇದ್ದ ಬಂಗುಡೆ ಮೀನು 50 ರೂ ಗೆ ಮಾರಾಟ ನಡೆಯುತ್ತಿದೆ. ಮಧ್ಯಮ ಗಾತ್ರದ ಬಂಗುಡೆ ಮೀನಿಗಾಗಿ ಜನ ಮುಗಿ ಬೀಳುತ್ತಿದ್ದು ಕೇವಲ ಒಂದು ಗಂಟೆಯಲ್ಲಿ ನಾಲ್ಕು ಕ್ವಿಂಟ್ವಾಳ್ ಮೀನು ಮಾರಾಟವಾಗಿದೆ ಎಂದು ಮಾಲಕ ಪಿ ಕೆ ಮಹಮ್ಮದ್ ತಿಳಿಸಿದ್ದಾರೆ. ತರಕಾರಿ ದರ ಏರಿಕೆಯಾಗಿರುವುದರ ನಡುವೆ ಮೀನಿನ ದರ ಕಡಿಮೆಯಾಗಿರುವುದು ಗ್ರಾಹಕರಲ್ಲಿ ಸಂತಸಮೂಡಿಸಿದೆ.