ವಿಟ್ಲ ಬಿಲ್ಲವ ಸಂಘದ ಬೆಳ್ಳಿ ಹಬ್ಬದ ಸಂಭ್ರಮಾಚರಣೆ ಪ್ರಯುಕ್ತ ಕುಕ್ಕಾಜೆ ಕ್ಷೇತ್ರದಲ್ಲಿ ಉಚಿತ ದಂತ ತಪಾಸಣಾ, ಚಿಕಿತ್ಸಾ ಶಿಬಿರ: ನಮ್ಮ ದೇಹದ ಆರೋಗ್ಯ ಜೊತೆಗೆ ಬಾಯಿಯ ಆರೋಗ್ಯವೂ ಅತೀ ಮುಖ್ಯ: ಶ್ರೀ ಶ್ರೀಕೃಷ್ಣ ಗುರೂಜಿ

0

ವಿಟ್ಲ: ಮೇಲು ಕೀಳೆಂಬುದನ್ನು‌ ಮರೆತು ಎಲ್ಲರೂ ಒಂದೇ ತಾಯಿಯ ಮಕ್ಕಳಂತೆ ಬಾಳೋಣ. ನಮ್ಮ ದೇಹದ ಆರೋಗ್ಯ ಜೊತೆಗೆ ಬಾಯಿಯ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅತೀ ಮುಖ್ಯ.


ವಿಟ್ಲದ ಬಿಲ್ಲವ ಸಂಘವು ಬೆಳ್ಳಿಹಬ್ಬದ ಸಂಭ್ರಮಾಚರಣೆ ಪ್ರಯುಕ್ತ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಇನ್ನು ಮುಂದೆ ನಡೆಯುವ ಎಲ್ಲಾ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯಲಿ. ಎಲ್ಲರೂ ಈ ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳಿ ಎಂದು ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ಕ್ಷೇತ್ರದ ಧರ್ಮದರ್ಶಿ ಶ್ರೀ ಶ್ರೀಕೃಷ್ಣ ಗುರೂಜಿಯವರ ಹೇಳಿದರು.


ಅವರು ಸೆ.೨೫ರಂದು ಮಾಣಿಲ ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ಕ್ಷೇತ್ರದಲ್ಲಿ ಬಿಲ್ಲವ ಸಂಘ ವಿಟ್ಲ ಇದರ ಬೆಳ್ಳಿಹಬ್ಬ ಸಂಭ್ರಮೋತ್ಸವದ ಪ್ರಯುಕ್ತ ಎ.ಬಿ.ಶೆಟ್ಟಿ ಡೆಂಟಲ್ ಕಾಲೇಜ್ ದೇರಳಕಟ್ಟೆ ಇದರ ಸಹಭಾಗಿತ್ವದಲ್ಲಿ ನಡೆದ ಸಾರ್ವಜನಿಕ ಉಚಿತ ದಂತ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರವನ್ನು ದೀಪಬೆಳಗಿಸಿ ಉದ್ಘಾಟಿಸಿ ಆಶೀರ್ವಚನ ನೀಡಿದರು.

ಬೆಳ್ಳಿ ಹಬ್ಬ ಸಂಭ್ರಮೋತ್ಸವ ಸಮಿತಿಯ ಅಧ್ಯಕ್ಷರಾದ ಡಾ ಗೀತಾಪ್ರಕಾಶ್‌ರವರು ಮಾತನಾಡಿ ಭಾಹ್ಯ ಸೌಂದರ್ಯಕ್ಕೆ ನಾವೆಲ್ಲರೂ ಹೆಚ್ಚಿನ ಪ್ರಾಮುಖ್ಯತೆಯನ್ನು ಕೊಡುತ್ತೇವೆ.

ಮುಖದ ಅಂದವನ್ನು‌ ಹೆಚ್ಚಿಸಲು ಹಲ್ಲಿನ ಪಾತ್ರ ಅತೀ ಬಹುಮುಖ್ಯವಾದುದು. ಹದಿನಾಲ್ಕು ಗ್ರಾಮಗಳನ್ನು ಸೇರಿರುವ ವಿಟ್ಲ ಬಿಲ್ಲವ ಸಂಘದ ಅಡಿಯಲ್ಲಿ ಇಪ್ಪತೈದನೇ ವರ್ಷದ ನೆನಪಿಗಾಗಿ ೨೫ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ. ಈ ಪೈಕಿ ೧೬ನೇ ಕಾರ್ಯಕ್ರಮ ಇದಾಗಿದೆ. ಎಲ್ಲರೂ ಇದರ ಸದುಪಯೋಗವನ್ನು ಪಡೆದುಲೊಳ್ಳಬೇಕಾಗಿ ಅವರು ಹೇಳಿದರು.

ದೇರಳಕಟ್ಟೆ ಎ.ಬಿ.ಶೆಟ್ಟಿ ಡೆಂಟಲ್ ಕಾಲೇಜಿನ ವೈದ್ಯರಾದ ಡಾ.ದಿಶಾರವರು ಹಲ್ಲಿನ ಆರೋಗ್ಯದ ಕುರಿತು ಮಾಹಿತಿ ನೀಡಿದರು.

ಬ್ರಹ್ಮಶ್ರೀ ವಿವಿದೋದ್ದೇಶ ಸೌಹಾರ್ದ ಸಹಕಾರಿಯ ಅದ್ಯಕ್ಷ ರಾದ ಸಂಜೀವ ಪೂಜಾರಿ ನಿಡ್ಯ, ಕ್ಷೇತ್ರದ ಆಡಳಿತಮೊಕ್ತೇಸರರಾದ ಎಂ.ಕೆ.ಕುಕ್ಕಾಜೆ, ಬಿಲ್ಲವ ಸಂಘದ ಅಧ್ಯಕ್ಷರು ಹರೀಶ್ ಸಿ ಎಚ್, ಮಾಣಿಲ ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ವನಿತಾ, ಕಾಳಿಕಾಕಲಾ ಸಂಘದ ಅಧ್ಯಕ್ಷರಾದ ಸಂಜೀವ ಕುಲಾಲ್, ಮಹಿಳಾ ಸಮಿತಿಯ ಅಧ್ಯಕ್ಷರಾದ ಮೋಹಿನಿ ತಾರಿದಳ ಮೊದಲಾದವರು‌ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಂಭ್ರಮೋತ್ಸವ ಸಮಿತಿಯ ಪದಾಧಿಕಾರಿಗಳಾದ ರಮೇಶ್ ಕುಮಾರ್, ಪ್ರಕಾಶ್ ವಿಟ್ಲ, ಚಂದ್ರ ಹಾಸ ಸುವರ್ಣ, ಚಂದ್ರಹಾಸ‌ ಕೊಪ್ಪಳ ಮೊದಲಾದವರು ಉಪಸ್ಥಿತರಿದ್ದರು.

ಬೆಳ್ಳಿ ಹಬ್ಬ ಸಂಭ್ರಮೋತ್ಸವ ಸಮಿತಿ ಉಪಾಧ್ಯಕ್ಷರಾದ ಶ್ರೀಧರ ಬಾಳೆಕಲ್ಲು ಸ್ವಾಗತಿಸಿ, ರವಿ ಎಸ್.ಎಂ. ವಂದಿಸಿದರು. ಸಂಭ್ರಮೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಜೇಶ್ ವಿಟ್ಲ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here