ಪುತ್ತೂರು: ಶ್ರೀ ಕ್ಷೇತ್ರ ಸನ್ಯಾಸಿಗುಡ್ಡೆ ಕೆದಂಬಾಡಿ ಶ್ರೀರಾಮ ಮಂದಿರದಲ್ಲಿ ನವರಾತ್ರಿ ಉತ್ಸವವು ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸೆ. 26 ರಿಂದ ನಡೆಯಲಿದೆ.
ಪ್ರತಿದಿನ ರಾತ್ರಿ ಭಜನಾ ಕಾರ್ಯಕ್ರಮ, ಅನ್ನಸಂತರ್ಪಣೆ ಜರಗಲಿದೆ. ಅ. 3 ರಂದು ಸಂಜೆ ದುರ್ಗಾಪೂಜೆ, ಸಾಮೂಹಿಕ ಆಯುಧಪೂಜೆ ನಡೆಯಲಿದೆ. ಪ್ರತಿದಿನ ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಸೆ. 26 ರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ದಕ್ಷಿಣ ಕನ್ನಡ ಮಂಗಳೂರು ಇವರ ಪ್ರಾಯೋಜನೆಯಲ್ಲಿ ಸಮೂಹ ನೃತ್ಯ – ನೃತ್ಯಾರ್ಪಣಂ ನಡೆಯಲಿದೆ.
ಸೆ. 27 ರಂದು ಕೆದಂಬಾಡಿ ಶಾಲಾ ಮಕ್ಕಳಿಂದ ಕಾರ್ಯಕ್ರಮ ವೈವಿದ್ಯ, ಸೆ. 28 ರಂದು ಭಕ್ತಿ ರಸಮಂಜರಿ, ಸೆ. 29 ರಂದು ಜಿಲ್ಲೆಯ ಪ್ರಸಿದ್ದ ಕಲಾವಿದರ ಕೂಡುವಿಕೆಯಲ್ಲಿ ‘ಭೀಷ್ಮ ಪರ್ವ’ ಯಕ್ಷಗಾನ ತಾಳಮದ್ದಳೆ, ಸೆ. 30 ರಂದು ಸಾಂಸ್ಕೃತಿಕ ಕಾರ್ಯಕ್ರ, ಅ. 1 ರಂದು ಡಾ. ಶೋಭಿತಾ ಸತೀಶ್ ರವರಿಂದ ಹರಿಕಥೆ, ಅ. 2 ರಂದು ಸ್ಥಳೀಯರಿಂದ ಕಾರ್ಯಕ್ರಮ ವೈವಿದ್ಯ, ಅ. 4 ರಂದು ‘ವೀರಮಣಿ ಕಾಳಗ’ ಯಕ್ಷಗಾನ ಬಯಲಾಟ ನಡೆಯಲಿದೆ ಎಂದು ಶ್ರೀರಾಮ ಮಂದಿರದ ಆಡಳಿತ ಮಂಡಳಿ ಪ್ರಕಟಣೆ ತಿಳಿಸಿದೆ.