ರೋಟರಿಯಿಂದ ದಿನ ನಿತ್ಯ ಜನರ ಕಷ್ಟ ದೂರ ಮಾಡುವ ಕೆಲಸ – ಉಚಿತ ದಂತ ಚಿಕಿತ್ಸಾ ಶಿಬಿರ ಉದ್ಘಾಟಿಸಿದ ಡಾ. ಭಾಸ್ಕರ್ ಎಸ್

0

ಪುತ್ತೂರು: ನಮ್ಮ ಸುತ್ತಮುತ್ತಲಿನ ಸಮಾಜದಲ್ಲಿ ಏನು ತೊಂದರೆ ಏನು ಸಮಸ್ಯೆ ಅದನ್ನು ನಮ್ಮಿಂದಾದ ಮಟ್ಟಿಗೆ ಸರಿ ಮಾಡುವುದೇ ರೋಟರಿಯ ಮಹತ್ವದ ಕೆಲಸ ಎಂದು ರೋಟರಿ ಜಿಲ್ಲಾ ಪೂರ್ವ ಗವರ್ನರ್ ಆಗಿರುವ ಪುತ್ತೂರು ಸಿಟಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಭಾಸ್ಕರ್ ಎಸ್ ಅವರು ಹೇಳಿದರು.

ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್, ರೋಟರಿ ಕ್ಲಬ್ ಪುತ್ತೂರು ಯುವದ ನೇತೃತ್ವದಲ್ಲಿ ಜನ್ಮ ಫೌಂಡೇಶನ್ ಟ್ರಸ್ಟ್ ಪುತ್ತೂರು ಮತ್ತು ಸುಳ್ಯ ಕೆ.ವಿ.ಜಿ ಡೆಂಟಲ್ ಕಾಲೇಜು ಆಸ್ಪತ್ರೆ ಸಹಯೋಗದಲ್ಲಿ ರೋಟರಿ ಮನೀಷಾ ಹಾಲ್‌ನಲ್ಲಿ ಸೆ.೨೬ರಂದು ನಡೆದ ಉಚಿತ ದಂತ ಚಿಕಿತ್ಸಾ ಶಿಬಿರವನ್ನು ಅವರು ಉದ್ಘಾಟಿಸಿ ಮಾತನಾಡಿದರು. ಇಂಟರ್ ನ್ಯಾಷನಲ್ ಲೆವೆಲ್‌ನಲ್ಲಿ ರೋಟರಿ ಪೊಲಿಯೋ ನಿರ್ಮೂಲನೆಯಲ್ಲಿ ಮಹತ್ವದ ಸಾಧನೆ ಮಾಡಿದೆ. ಇದಕ್ಕೆ ಕಾರಣ ರೋಟರಿಯ ನೆಟ್‌ವರ್ಕ್ ಎಂದ ಅವರು ಅಂತರಾಷ್ಟ್ರೀಯ ಮಟ್ಟದಲ್ಲಿ ೧೨ಲಕ್ಷ ರೋಟರಿಯನ್ ಇದ್ದಾರೆ. ಇವರ ನೆಟ್‌ವರ್ಕ್ ಬಹಳ ಸುಂದರವಾಗಿದೆ. ಉತ್ತಮ ನೆಟ್‌ವರ್ಕ್‌ನಿಂದಾಗಿ ಪುತ್ತೂರಿಗೆ ಅನೇಕ ಕೊಡುಗೆ ಸಿಗಲಿದೆ. ಈಗಾಗಲೇ ಕಣ್ಣಿನ ಆಸ್ಪತ್ರೆ ಕಾರ್ಯ ಸಿದ್ಧತೆ ನಡೆಯುತ್ತಿದೆ. ಒಟ್ಟಿನಲ್ಲಿ ಜನರ ಕಷ್ಟ ದೂರ ಮಾಡುವ ಕೆಲಸ ರೋಟರಿಯಿಂದ ದಿನ ನಿತ್ಯ ಒಂದಲ್ಲಾ ಒಂದು ರೀತಯಲ್ಲಿ ನಡೆಯುತಿದೆ ಎಂದರು. ಧನ್ವಂತರಿ ಕ್ಲಿನಿಕಲ್ ಲ್ಯಾಬೋರೆಟರಿಯ ಮಾಲಕ ಚೇತನ್ ಪ್ರಕಾಶ್ ಕಜೆ ಅವರು ಮಾತನಾಡಿ ವೈದ್ಯಕೀಯ ಶಿಬಿರಕ್ಕೆ ನಮ್ಮ ಸಂಸ್ಥೆಯಿಂದ ಪೂರ್ಣ ಸಹಕಾರ ನೀಡಿದೆ ಎಂದರು. ಕೆವಿಜಿ ಡೆಂಟಲ್ ಕಾಲೇಜಿನ ಪ್ರೊ. ಡಾ.ಅಲ್ವಿನ್ ಆಂಥೋನಿ ಅವರು ಶಿಬಿರದ ಮಹತ್ವದ ಕುರಿತು ಮಾಹಿತಿ ನೀಡಿ ದಂತ ಕುಳಿ ತುಂಬುವಿಕೆ, ಹಲ್ಲಿನ ಸ್ವಚ್ಛತೆ, ಹಲ್ಲು ಕೀಳುವಿಕೆ ಜೊತೆಗೆ ಹೆಚ್ಚಿನ ಚಿಕಿತ್ಸೆಗೆ ಸುಳ್ಯದ ಕೆವಿಜಿ ದಂತ ಚಿಕಿತ್ಸಾಲಯಕ್ಕೆ ಕರೆದು ಕೊಂಡು ಹೋಗುತ್ತೇವೆ ಎಂದರು. ರೋಟರಿ ಕ್ಲಬ್‌ನ ಸಂತೋಷ್ ಶೆಟ್ಟಿ, ಡಾ| ರಾಜೇಶ್ ಬೆಜ್ಜಂಗಳ, ಜಯಪ್ರಕಾಶ್, ಪುರುಷೋತ್ತಮ ಶೆಟ್ಟಿ ಅತಿಥಿಗಳನ್ನು ಗೌರವಿಸಿದರು. ರೋಟರಿ ಕ್ಲಬ್ ಸೆಂಟ್ರಲ್‌ನ ಅಧ್ಯಕ್ಷ ಮಹಮ್ಮದ್ ರಫೀಕ್ ಸ್ವಾಗತಿಸಿದರು. ರೋಟರಿಕ್ಲಬ್ ಪುತ್ತೂರು ಯುವ ಅಧ್ಯಕ್ಷೆ ರಾಜೇಶ್ವರಿ ಆಚಾರ್ಯ ವಂದಿಸಿದರು. ಕಾರ್ಯದರ್ಶಿ ಅಶ್ವಿನಿ ಮುಳಿಯ ಕಾರ್ಯಕ್ರಮ ನಿರೂಪಿಸಿದರು. ರೋಟರಿಯ ರತ್ನಾಕರ ರೈ, ನರಸಿಂಹ ಪೈ, ಭರತ್ ಪೈ, ಉಪಕಾರ್ಯದರ್ಶಿ ಜಯಪ್ರಕಾಶ್, ಪದ್ಮನಾಭ ಶೆಟ್ಟಿ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.

ಜನ್ಮ ಫೌಂಡೇಶನ್‌ನಿಂದ ಹಲವು ವೈದ್ಯಕೀಯ ಶಿಬಿರ:
ಕ್ಲಬ್‌ನ ಝೋನಲ್ ಲೆಪ್ಟಿನೆಂಟ್ ಆಗಿರುವ ಜನ್ಮ ಫೌಂಡೇಶನ್ ಟ್ರಸ್ಟ್ ಅಧ್ಯಕ್ಷ ಹರ್ಷಕುಮಾರ್ ರೈ ಪ್ರಾಸ್ತಾವಿಕವಾಗಿ ಮಾತನಾಡಿ ರೋಟರಿಯಿಂದ ಈ ಭಾರಿ ವನಸಿರಿ, ಆರೋಗ್ಯಸಿರಿ, ವಿದ್ಯಾಸಿರಿ, ಆರೋಗ್ಯಸಿರಿ ಯೋಜನೆ ಹಾಕಿಕೊಂಡಂತೆ ಇವತ್ತು ಆರೋಗ್ಯಸಿರಿ ಕಾರ್ಯಕ್ರಮ ನಡೆಸಲಾಗಿದೆ. ಒಟ್ಟಿನಲ್ಲಿ ಜನ್ಮ ಪೌಂಡೇಶನ್ ವತಿಯಿಂದ ೮ ವೈದ್ಯಕೀಯ ಶಿಬಿರವನ್ನು ಗ್ರಾಮೀಣ ಭಾಗದಲ್ಲಿ ಮಾಡಿಕೊಂಡು ಬಂದಿದ್ದೇವೆ ಎಂದರು.

LEAVE A REPLY

Please enter your comment!
Please enter your name here