ಅ.1ರಂದು ಪುತ್ತೂರಿನಲ್ಲಿ ಕಲ್ಲೇಗ ಟೈಗರ್ಸ್ ವತಿಯಿಂದ 5ನೇ ವರ್ಷದ ಹುಲಿಕುಣಿತ

0

 

ಪುತ್ತೂರು: ನವರಾತ್ರಿ ಉತ್ಸವದ ಅಂಗವಾಗಿ ಕಲ್ಲೇಗ ಟೈಗರ್ಸ್ ವತಿಯಿಂದ ಐದನೇ ವರ್ಷದ ಹುಲಿ ಕುಣಿತ ಅ.1ರಂದು ಪುತ್ತೂರಿನಲ್ಲಿ ನಡೆಯಲಿದೆ.

ಪುತ್ತೂರಿನ ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿ 65ಕ್ಕೂ ಅಧಿಕ ಹುಲಿ ವೇಷಧಾರಿಗಳು ಬಣ್ಣ ಹಚ್ಚಿ ತಾಸೆಯ ಪೆಟ್ಟಿಗೆ ಕುಣಿದು ಕುಪ್ಪಳಿಸಿ ರಂಜಿಸಲಿರುವ ಈ ವಿಶೇಷ ಕಾರ್ಯಕ್ರಮದಲ್ಲಿ ತುಳುನಾಡ ಮಾಣಿಕ್ಯ ಅರವಿಂದ್ ಬೋಳಾರ್, ರಾಜ್ಯ ಸಮಾಜ ಕಲ್ಯಾಣ ಮಂಡಳಿಯ ಮಾಜಿ ಅಧ್ಯಕ್ಷೆ ದಿವ್ಯಪ್ರಬಾ ಗೌಡ ಚಿಲ್ತಡ್ಕ, ವಿಕ್ರಾಂತ್ ರೋಣಾ ಖ್ಯಾತಿಯ ಖಳನಟ ವಜ್ರಾಧೀರ್ ಜೈನ್ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here