ಪುತ್ತೂರು: ಮುಖ್ಯರಸ್ತೆಯ ಹೆಗ್ಡೆ ಆರ್ಕೇಡ್‌ನಲ್ಲಿ ಪ್ರಧಾನ ಕಚೇರಿ ಹೊಂದಿರುವ ನಂದನ ವಿವಿಧೋದ್ದೇಶ ಸೌಹಾರ್ದ ಸಹಕಾರಿಯ ಹತ್ತನೇ ವಾರ್ಷಿಕ ಮಹಾಸಭೆಯ ಸೆ.22ರಂದು ಬೆಳಿಗ್ಗೆ ಕೋರ್ಟುರಸ್ತೆಯ ಪುತ್ತೂರು ಜೇಸಿ ಮುಳಿಯ ಹಾಲ್‌ನಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಚಂದ್ರಶೇಖರ್ ಎಸ್. ಮಾತನಾಡಿ, ಸಂಘದಲ್ಲಿ ರೂ.28,81,800 ಸದಸ್ಯರ ಪಾಲು ಬಂಡವಾಳ, ರೂ.11.3ಕೋಟಿ ಠೇವಣಿ ಹೊಂದಿದೆ. ರೂ.6.26ಕೋಟಿ ವಿವಿಧ ರೂಪದಲ್ಲಿ ಸಾಲ ನೀಡಲಾಗಿದೆ. ಲೆಕ್ಕಪರಿಶೋಧನೆಯಲ್ಲಿ ಸಂಘವು ‘ಎ’ ಶ್ರೇಣಿ ಪಡೆದುಕೊಂಡಿದೆ ಎಂದರು.
ಪಾಂಡೆಲು ಗುತ್ತು ನಾರಾಯಣ ಶೆಟ್ಟಿ ಹಾಗೂ ಕೆ.ಸಿ ಜನಾರ್ಧನರವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ನಿರ್ದೇಶಕರಾದ ಸುದರ್ಶನ್ ಎಸ್, ದಿನೇಶ್ ಕುಮಾರ್ ಎಚ್.ಜಿ, ಸಂದೀಪ್ ಶಂಕರ್, ಗಿರೀಶ್ ಬಾನೊಟ್ಟು, ಪಿ ತೇಜೇಶ್ವರ ರಾವ್, ಲಾರೆನ್ಸ್ ಎ. ಪಿಂಟೋ , ಶ್ರೀಲತಾ ಎಸ್ ರೈ ಉಪಸ್ಥಿತರಿದ್ದರು.
ಉಪಾಧ್ಯಕ್ಷ ದಾಮೋದರ್ ಪಾಟಾಳಿ ಸ್ವಾಗತಿಸಿದರು. ಸಿಬಂದಿಗಳಾದ ವಿನುತಾ, ರೇಣುಕಾ, ಅಶ್ವಿನಿ, ಪ್ರಾರ್ಥಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೋಮಶೇಖರ್ ವರದಿ ವಾಚಿಸಿದರು. ಪ್ರಭಂದಕ ಮೋಹನ್ ಕುಮಾರ್ ಮಹಾಸಭೆಯ ನೋಟೀಸ್ ಓದಿದರು. ನಿರ್ದೇಶಕ ಉಪೇಂದ್ರ ಬಲ್ಯಾಯ ವಂದಿಸಿದರು.
ಡಾ. ಪ್ರಸಾದ್ ಭಂಡಾರಿಯವರಿಗೆ ಸನ್ಮಾನ: ಈ ಸಂದರ್ಭದಲ್ಲಿ ಪ್ರತಿಷ್ಠಿತ ಐಎಂಎ-ಕೆಎಸ್‌ಬಿ ಡಾಕ್ಟರ‍್ಸ್ ಡೇ ಪ್ರಶಸ್ತಿ ಪುರಸ್ಕೃತರಾದ ಹಿರಿಯ ವೈದ್ಯ, ಸಹಕಾರಿ ಸ್ಥಾಪಕ ಸದಸ್ಯರೂ ಆದ ಡಾ. ಪ್ರಸಾದ್ ಭಂಡಾರಿಯವರನ್ನು ಆದರ್ಶ ಆಸ್ಪತ್ರೆಗೆ ತೆರಲಿ ಸನ್ಮಾನಿಸಲಾಯಿತು. ಡಾ. ಸುಬ್ರಾಯ ಭಟ್ ಹಾಗೂ ಡಾ. ಮಧುರ ಭಟ್ ಉಪಸ್ಥಿತರಿದ್ದರು.