ನರೇಂದ್ರ ಪ.ಪೂ.ಕಾಲೇಜಿನಲ್ಲಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಶಿಕ್ಷಣಾವಕಾಶಗಳ ಬಗ್ಗೆ ಮಾಹಿತಿ ಕಾರ‍್ಯಕ್ರಮ

0

ಪುತ್ತೂರು: ವೃತ್ತಿ, ಉದ್ಯೋಗ ನೀಡುವ ಶಿಕ್ಷಣವನ್ನು ಅರಸಿ ಸೂಕ್ತವಾದುದನ್ನು ಆಯ್ಕೆ ಮಾಡುವ ಪರ್ವ ಕಾಲವಿದು. ಅವಕಾಶಗಳು ಕೈಬೀಸಿ ಕರೆಯುತ್ತಿದೆ. ಆದರೆ ಶಿಕ್ಷಣಾವಕಾಶಗಳ ಮಾಹಿತಿ ಕೊರತೆಯಾಗಬಾರದು. ಸರಿಯಾದ ಸಮಯದಲ್ಲಿ ಸರಿಯಾದ ಶಿಕ್ಷಣ ದೊರಕಿದಾಗ ಒಬ್ಬ ಸಾಮಾನ್ಯ ವ್ಯಕ್ತಿಯು ಅಸಾಮಾನ್ಯ ವ್ಯಕ್ತಿಯಾಗಿ ರೂಪುಗೊಳ್ಳಲು ಸಾಧ್ಯ.ಇಂತಹ ಸಮಯದಲ್ಲಿ ವಿದ್ಯಾರ್ಥಿಗಳ ಆಸಕ್ತಿಗೆ ಅನುಗುಣವಾಗಿ,ಅವಶ್ಯಕತೆಗೆ ಅನುಕೂಲವಾಗುವಂತಹ ಶಿಕ್ಷಣದ ಅವಕಾಶಗಳನ್ನು ಆಯ್ಕೆಮಾಡಬೇಕು. ಎಂದು ಮಂಗಳೂರು ಅಕಾಡೆಮಿ ಆಫ್ ರಿಫೈನ್ಡ್ ಸ್ಟಡೀಸ್ ಸಂಸ್ಥೆಯ ಸ್ಥಾಪಕರು ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿರುವ ಡಾ.ರೀನಾ ಆಳ್ವ ಹೇಳಿದರು.

ನರೇಂದ್ರ ಪ.ಪೂ.ಕಾಲೇಜಿನಲ್ಲಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗಾಗಿ ನಡೆದ ವಿಜ್ಞಾನ ಕ್ಷೇತ್ರದಲ್ಲಿ ಶಿಕ್ಷಣಾವಕಾಶಗಳ ಬಗ್ಗೆ ಮಾಹಿತಿ ಕಾರ‍್ಯಕ್ರಮದಲ್ಲಿ ಅವರು ಮಾತನಾಡಿದರು.

ವೃತ್ತಿ ಸಂಬಂಧಿತ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯಾಗಿದೆ. ಇಂತಹ ಸಂದರ್ಭದಲ್ಲಿ ಇರುವ ಸಾವಿರಾರು ವಿಭಿನ್ನ ಕೋರ್ಸ್‌ಗಳ ನಡುವೆ ಭವಿಷ್ಯವನ್ನು ರೂಪಿಸುವ ಅತ್ಯುತ್ತಮವಾದ ಕೋರ್ಸ್‌ಗಳನ್ನು ಆಯ್ಕೆ ಮಾಡಬೇಕಾದ ಅವಶ್ಯಕತೆ ಇಂದಿನ ವಿದ್ಯಾರ್ಥಿಗಳಲ್ಲಿ ಹಾಗೂ ಪೋಷಕರಲ್ಲಿದೆ.ನಮ್ಮ ಸಾಮರ್ಥ್ಯದ ಮೇಲೆ ನಂಬಿಕೆಯಿದ್ದರೆ ನಮ್ಮ ಆಯ್ಕೆಯನ್ನು ಸಮರ್ಪಕ ಎನ್ನುವ ರೀತಿಯಲ್ಲಿ ನಿಭಾಯಿಸಬಹುದು.ಅದಕ್ಕಾಗಿ ತಾನು ಆಯ್ಕೆಮಾಡಿಕೊಂಡ ವಿಷಯಗಳಲ್ಲಿ ಇನ್ನಷ್ಟು ವಿಶೇಷ ಆಸಕ್ತಿಯನ್ನು ಬೆಳೆಸಿಕೊಂಡಾಗ ,ತೆಗೆದುಕೊಂಡ ವಿಚಾರದ ಬಗ್ಗೆ ಗಂಭೀರವಾಗಿ ಅಧ್ಯಯನ ನಡೆಸಿದಾಗ ನಮ್ಮ ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳಬಹುದು.ಎಂದು ಹೇಳಿದರು.

ಪಿಯುಸಿ ಬಳಿಕ ವಿಜ್ಞಾನ ವಿಷಯದ ವಿದ್ಯಾರ್ಥಿಗಳ ಭವಿಷ್ಯಕ್ಕೆ ಪೂರಕವಾದ ,ಉದ್ಯೊಗ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇರುವ ವಿವಿಧ ಕೋರ್ಸ್‌ಗಳ ಮಾಹಿತಿಯನ್ನು ನೀಡಿದರು. ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರಸಾದ್ ಶ್ಯಾನಭಾಗ್ ಉಪಸ್ಥಿತರಿದ್ದರು. ಕಾರ‍್ಯಕ್ರಮದಲ್ಲಿ ದ್ವಿತೀಯ ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯರಾದ ಜಸ್ಮಿತಾ ಸ್ವಾಗತಿಸಿ,ಅನ್ವಿತಾ ವಂದಿಸಿದರು.

LEAVE A REPLY

Please enter your comment!
Please enter your name here