ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ರೋಟರಾಕ್ಟ್‌ ಘಟಕಕ್ಕೆ ಹಲವು ಪ್ರಶಸ್ತಿ

0

ಸವಣೂರು : ರೋಟರಾಕ್ಟ್ ಕ್ಲಬ್ ಪುತ್ತೂರು ಹಾಗೂ ರೋಟರಾಕ್ಟ್ ಕ್ಲಬ್ ಪುತ್ತೂರು ಸ್ವರ್ಣ ಇವರ ಜಂಟಿ ಆಶ್ರಯದಲ್ಲಿ ಸರ್ವೆ ಗ್ರಾಮದ ಎಲಿಯದಲ್ಲಿ ನಡೆದ ರೋಟರಾಕ್ಟ್ ಕೆನರಾ ವಲಯದ ಕೆಸರುಗದ್ದೆ ಕ್ರೀಡಾಕೂಟದಲ್ಲಿ ಸವಣೂರು ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ರೋಟರಾಕ್ಟ್ ಘಟಕಕ್ಕೆ 16 ಪ್ರಶಸ್ತಿಗಳು ಬಂದಿರುತ್ತವೆ.

ಮಹಿಳಾ ವಿಭಾಗದಲ್ಲಿ ನಿಧಿಶೋಧನಾ ಸ್ಪರ್ಧೆಯಲ್ಲಿ ಶೀಲಾ ಪ್ರಶಸ್ತಿಯನ್ನು ಪಡೆದಿರುತ್ತಾರೆ. ೧೦೦ ಮೀ ಓಟದಲ್ಲಿ ಮಾನ್ಯ (ಪ್ರಥಮ) ಸೌಜನ್ಯಾ (ದ್ವಿತೀಯ) ಸ್ಥಾನ,ಉಪ್ಪುಮೂಟೆ ಓಟದಲ್ಲಿ ಚಿತ್ರಾ ಮತ್ತು ಅಭೀಜ್ಞ (ದ್ವಿತೀಯ), ಹಿಂಬದಿ ಓಟದಲ್ಲಿ ಅಭೀಜ್ಞಾ(ದ್ವಿತೀಯ), ಮೂರು ಕಾಲಿನ ಓಟದಲ್ಲಿ ಸೋನಿಕಾ ಮತ್ತು ವಾತ್ಸಲ್ಯ (ದ್ವಿತೀಯ), ಚಮಚದ  ಚಮತ್ಕಾರದಲ್ಲಿ ಅಭೀಜ್ಞಾ (ದ್ವಿತೀಯ) ಸ್ಥಾನ, ತ್ರೋಬಾಲ್ ಪಂದ್ಯಾಟ ಹಾಗೂ ಹಗ್ಗ ಜಗ್ಗಾಟದಲ್ಲಿ ದ್ವಿತೀಯ ಸ್ಥಾನ ಲಭಿಸಿದೆ.

ಪುರುಷರ ವಿಭಾಗದಲ್ಲಿ ನಡೆದ ಸ್ಪರ್ಧೆಯಲ್ಲಿ ನಿಧಿಶೋಧನಾ ಸ್ಪರ್ಧೆಯಲ್ಲಿ ಮಂಜುನಾಥ ಪ್ರಶಸ್ತಿಯನ್ನು ಪಡೆದಿದ್ದಾರೆ. ಉಪ್ಪುಮೂಟೆ ಓಟದಲ್ಲಿ ತೀರ್ಥೇಶ್ ಮತ್ತು ಪ್ರಮೀತ್ ಪ್ರಥಮ ಸ್ಥಾನ, ೧೦೦ ಮೀ ಓಟದಲ್ಲಿ ಕೃತಿಕ್ ಜೋಸೆಫ್ ಪ್ರಥಮ, ರಿವನ್ರಾಜ್ ದ್ವಿತೀಯ, ಮೂರು ಕಾಲಿನ ಓಟದಲ್ಲಿ ತೀರ್ಥೇಶ್ ಮತ್ತು ಪ್ರಮೀತ್ ಪ್ರಥಮ, ಜೀವನ್ ಮತ್ತು ಜಯಚಂದ್ರ ದ್ವಿತೀಯ ಸ್ಥಾನ, ಹಗ್ಗ ಜಗ್ಗಾಟದಲ್ಲಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ.

LEAVE A REPLY

Please enter your comment!
Please enter your name here