ಪುತ್ತೂರು : ವಿವೇಕಾನಂದ ಪಾಲಿಟೆಕ್ನಿಕ್‌ನಲ್ಲಿ ವಿವೇಕ-ವಿಕಾಸ ಸರಣಿ ಕಾರ್‍ಯಕ್ರಮ ಹಮ್ಮಿಕೊಳ್ಳಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ಮಾನಸಿಕ ತಜ್ಞರಾದ ಡಾ.ಗಣೇಶ್ ಪ್ರಸಾದ್ ಮುದ್ರಜೆ, ವರ್ತನೆ-ವಿಶ್ಲೇಷಣೆ ಹಾಗೂ ಬೌದ್ಧಿಕ ವಿಕಸನ ಎಂಬ ವಿಷಯದ ಬಗ್ಗೆ ಮಾತನಾಡಿ ವ್ಯಕ್ತಿಯ ನಡವಳಿಕೆಯಲ್ಲಿ ವ್ಯಕ್ತಿತ್ವ ರೂಪುಗೊಳ್ಳಬೇಕಾದರೆ ಅವನ ಪರಿಸರ, ಕೌಟುಂಬಿಕ ಹಿನ್ನಲೆ, ಸಾಮಾಜಿಕ ವಾತಾವರಣದ ವ್ಯವಸ್ಥೆ ಕಾರಣವಾಗುತ್ತದೆ. ಸಾಮಾಜಿಕ ಜಾಲತಾಣಗಳು, ಸಹಪಾಠಿಗಳ ವರ್ತನೆ, ಒಡನಾಡಿಗಳ ಒತ್ತಡದಿಂದ ವಿದ್ಯಾರ್ಥಿಗಳಲ್ಲಿ ನೈತಿಕ ಮೌಲ್ಯದ ಸ್ಥರಗಳು ಕಡಿಮೆಯಾದಲ್ಲಿ ವಿದ್ಯಾರ್ಥಿಗಳಲ್ಲಿ ಮನೋದೌರ್ಬಲ್ಯದ ಸಮಸ್ಯೆಗಳು ಉಂಟಾಗುತ್ತದೆ. ಇಂತಹ ಸಮಸ್ಯೆಗಳನ್ನು ಜಾಗರೂಕತೆಯಿಂದ ಸರಿಪಡಿಸಿ ಅವರನ್ನು ಉತ್ತಮ ಮಾರ್ಗಕ್ಕೆ ತರುವುದು ಅಗತ್ಯವಾಗಿದೆ ಎಂದು ನುಡಿದರು. ಕಾರ್‍ಯಕ್ರಮದ ಬಳಿಕ ಸಂವಾದ ನಡೆಸಲಾಯಿತು.
ವಿವೇಕಾನಂದ ಪಾಲಿಟೆಕ್ನಿಕ್ ಆಡಳಿತ ಮಂಡಳಿಯ ಅಧ್ಯಕ್ಷ ವಿಶ್ವೇಶ್ವರ ಭಟ್ ಬಂಗಾರಡ್ಕ ಅಧ್ಯಕ್ಷತೆ ವಹಿಸಿದ್ದರು. ಸಂಚಾಲಕ ಮಹದೇವ ಶಾಸ್ತ್ರೀ, ಸದಸ್ಯರಾದ ಈಶ್ವರಚಂದ್ರ ಉಪಸ್ಥಿತರಿದ್ದರು. ಹಾಗೂ ಕಾಲೇಜಿನ ಎಲ್ಲಾ ಶಿಕ್ಷಕ ಶಿಕ್ಷಕೇತರ ವರ್ಗದವರು ಭಾಗವಹಿಸಿದ್ದರು. ವಿವೇಕಾನಂದ ಪಾಲಿಟೆಕ್ನಿಕ್‌ನ ಪ್ರಾಂಶುಪಾಲ ಚಂದ್ರಕುಮಾರ್ ಸ್ವಾಗತಿಸಿದರು. ಮೆಕ್ಯಾನಿಕಲ್ ವಿಭಾಗ ಮುಖ್ಯಸ್ಥ ವಿಷ್ಣುಮೂರ್ತಿ ವಂದಿಸಿದರು. ಕಂಪ್ಯೂಟರ್ ವಿಭಾಗ ಮುಖ್ಯಸ್ಥ ರೋಹಿತ್ ಹೆಚ್.ಪಿ. ಕಾರ್‍ಯಕ್ರಮ ನಿರೂಪಿಸಿದರು.