ನಿಡ್ಪಳ್ಳಿ; ಉನ್ನತಿ ಕೋಚಿಂಗ್ ಮತ್ತು ಜನ ಸೇವಾ ಕೇಂದ್ರ ಸೆ.30 ರಂದು ಬೆಟ್ಟಂಪಾಡಿ ಸಿದ್ದಿವಿನಾಯಕ ಕಾಂಪ್ಲೆಕ್ಸ್ ನಲ್ಲಿ ಶುಭಾರಂಭ ಗೊಂಡಿತು. ಬೆಳಿಗ್ಗೆ ಪುರೋಹಿತ ಸುಬ್ರಹ್ಮಣ್ಯ ಭಟ್ ಇವರಿಂದ ಗಣಪತಿ ಹವನ ನಡೆಯಿತು. ನಂತರ ಸಂಸ್ಥೆಯ ಮಾಲಕ ಲಕ್ಷ್ಮಣ್ ಕೂಟೇಲು ಇವರ ತಂದೆ ನಾರ್ಣಪ್ಪ ನಾಯ್ಕ ಮತ್ತು ತಾಯಿ ನಳಿನಾಕ್ಷಿ ಇವರು ದೀಪ ಬೆಳಗಿಸಿ ಸಂಸ್ಥೆ ಉದ್ಘಾಟಿಸಿದರು.ಕೇಶವ ಕೂಟೇಲು, ಗಣೇಶ ಕೂಟೇಲು, ಪ್ರಸಾದ್ ಕೂಟೇಲು ಮತ್ತೀತರರು ಉಪಸ್ಥಿತರಿದ್ದರು.
ಪ್ರಾಥಮಿಕ ಶಾಲಾ ಹಂತದಿಂದ ಪದವಿ ತರಗತಿಯವರೆಗೆ ಎಲ್ಲಾ ವಿಷಯಗಳಿಗೆ ನುರಿತ ಶಿಕ್ಷಕರಿಂದ ಕೋಚಿಂಗ್ ನೀಡಲಾಗುವುದು.ಅಲ್ಲದೆ ಜನ ಸೇವಾ ಕೇಂದ್ರದಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರದ ಎಲ್ಲಾ ಸೇವೆಗಳು ಲಭ್ಯವಿದೆ. ಅಲ್ಲದೆ ಎಲ್ಲಾ ವಾಹನಗಳಿಗೆ ಯುನೈಟೆಡ್ ಇಂಡಿಯಾ ಇನ್ಯೂರೆನ್ಸ್ ಮಾಡಿ ಕೊಡಲಾಗುವುದು ಎಂದು ಸಂಸ್ಥೆಯ ಮಾಲಕ ಬಂಟ್ವಾಳ ಎಸ್.ವಿ.ಎಸ್ ಕಾಲೇಜಿನ ವಾಣಿಜ್ಯ ಶಾಸ್ತ್ರ ಉಪನ್ಯಾಸಕ ನಿಡ್ಪಳ್ಳಿ ಲಕ್ಷ್ಮಣ್ ಕೂಟೇಲು ಎಲ್ಲರನ್ನು ಸ್ವಾಗತಿಸಿ ತಿಳಿಸಿದರು.