ನಂಬಿಕೆಗೆ ಮತ್ತು ವಿಶ್ವಾಸಾರ್ಹತೆಗೆ ಮತ್ತೊಂದು ಹೆಸರೇ ಜಿ.ಎಲ್.ಜ್ಯುವೆಲ್ಲರ್ಸ್: ಶೋಭಾ ಚಿದಾನಂದ
ಪುತ್ತೂರು: ಸ್ವರ್ಣೋದ್ಯಮದಲ್ಲಿ ಸದಾ ಹೊಸತನವನ್ನು ಪರಿಚಯಿಸುತ್ತಾ ಜನಮೆಚ್ಚುಗೆ ಗಳಿಸುತ್ತಿರುವ ಜಿ.ಎಲ್.ಆಚಾರ್ಯ ಜ್ಯುವೆಲ್ಲರ್ಸ್ ಸಂಸ್ಥೆಯ ಸುಳ್ಯ ಮಳಿಗೆ ದಶಮಾನೋತ್ಸವದ ಸಂಭ್ರಮದಲ್ಲಿದ್ದು,ಇದೀಗ ವಿಸ್ತಾರಗೊಂಡು ಚಿನ್ನ,ಬೆಳ್ಳಿ ಹಾಗೂ ವಜ್ರಾಭರಣಗಳಿಗೆ ಪ್ರತ್ಯೇಕ ವಿಭಾಗಗಳೊಂದಿಗೆ ರೂಪುಗೊಂಡು ಶುಭಾರಂಭಗೊಂಡಿತು.
ನವೀಕೃತ ವಿಸ್ತೃತ ಮಳಿಗೆಯನ್ನು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ನಿರ್ದೇಶಕರಾದ ಶೋಭಾ ಚಿದಾನಂದ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ಜಿ.ಎಲ್.ಆಚಾರ್ಯ ಜ್ಯುವೆಲ್ಲರ್ಸ್ ಸಂಸ್ಥೆ ನಂಬಿಕೆಗೆ ಮತ್ತು ವಿಶ್ವಾಸಾರ್ಹತೆಗೆ ಹೆಸರು ವಾಸಿಯಾಗಿದೆ. ವಿಸ್ತೃತ ಮಳಿಗೆಯೊಂದಿಗೆ ಸಂಸ್ಥೆಯು ಉತ್ತರೋತ್ತರ ಅಭಿವೃದ್ಧಿ ಹೊಂದಲಿ ಎಂದು ಶುಭ ಹಾರೈಸಿದರು.
ಅತಿಥಿಗಳಾಗಿ ಆಗಮಿಸಿದ್ದ ಸುಳ್ಯದ ಪ್ರಸೂತಿ ತಜ್ಞೆ ಡಾ.ವೀಣಾ ಮಾತನಾಡಿ ಸುಳ್ಯದಲ್ಲಿ ಉದ್ಯಮ ಆರಂಭಿಸಲು ಗಂಡೆದೆ ಬೇಕು. ನಿಷ್ಠೆಯಿಂದ ಉದ್ಯಮ ಆರಂಭಿಸಿದಾಗ ನಿರಂತರ ಬೆಳವಣಿಗೆ ಸಾಧ್ಯವಾಗುತ್ತದೆ. ಸುಳ್ಯದವರು ಆಭರಣ ಖರೀದಿಸಲು ಪುತ್ತೂರಿಗೆ ಹೋಗುತ್ತಾರೆ, ಪುತ್ತೂರಿನವರು ಸುಳ್ಯದಲ್ಲಿ ಬಂದು ಮಳಿಗೆ ಆರಂಭಿಸುವಾಗ ಸಂತೋಷವಾಗುತ್ತದೆ. ಉದ್ಯಮ ಯಶಸ್ವಿಯಾಗಿ ನಡೆಯಲಿ. ಸಿಬ್ಬಂದಿಗಳಿಗೆ ಒಳ್ಳೆಯದಾಗಲಿ ಎಂದು ಹಾರೈಸಿದರು.
ಶ್ರೀ ಹರಿ ಕಾಂಪ್ಲೆಕ್ಸ್ ನ ಪಾಲುದಾರರಾದ ನಳಿನಿ ಕಾಮತ್ ಉಪಸ್ಥಿತರಿದ್ದರು. ಸಂಸ್ಥೆಯ ಪಾಲುದಾರರಾದ ರಾಜಿ ಬಲರಾಮ ಆಚಾರ್ಯ, ಲಕ್ಷ್ಮಿ ಕಾಂತ್ ಆಚಾರ್ಯ, ವೇದಾ ಲಕ್ಷ್ಮಿಕಾಂತ್ ಆಚಾರ್ಯ ಮತ್ತು ಸುಧನ್ವ ಆಚಾರ್ಯ ಉಪಸ್ಥಿತರಿದ್ದರು. ಶ್ರೀಹರಿ ಕಾಂಪ್ಲೆಕ್ಸ್ನ ಪಾಲುದಾರರಾದ ಕೃಷ್ಣ ಕಾಮತ್, ಹರಿರಾಯ ಕಾಮತ್, ಹೇಮಂತ್ ಕಾಮತ್ ಉಪಸ್ಥಿತರಿದ್ದರು. ವಿನಯ್ ಕೇರ್ಪಳ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.