ಮುಳಿಯ ಕಲರ್ಸ್- ನವರಾತ್ರಿ ಸ್ಪೆಷಲ್, ರತ್ನಾಭರಣಗಳ ಸಂಗ್ರಹ ಉತ್ಸವ
ಪುತ್ತೂರು: ನಾಡಿನೆಲ್ಲೆಡೆ ನವರಾತ್ರಿ-ದಸರಾ ಹಬ್ಬದ ಸಂಭ್ರಮವಿದ್ದು, ಪುತ್ತೂರಿನ ಹೆಸರಾಂತ ಚಿನ್ನಾಭರಣಗಳ ಮಳಿಗೆ ಮುಳಿಯ ಜ್ಯುವೆಲ್ಸ್ ಮುಳಿಯ ಕಲರ್ಸ್-ನವರಾತ್ರಿ ವಿಶೇಷ ’ರತ್ನಾಭರಣಗಳ ಸಂಗ್ರಹ ಉತ್ಸವ’ (ಜೆಮ್ ಸ್ಟೋನ್ ಕಲೆಕ್ಷನ್ ಫೆಸ್ಟ್)ನ್ನು ಆಯೋಜಿಸಿದೆ.
ನವದುರ್ಗಾರಾಧನೆ: ಮುಳಿಯ ರತ್ನಾಭರಣಗಳ ಸಂಗ್ರಹ ಉತ್ಸವಕ್ಕೆ ಕಳಶವಿಟ್ಟಂತೆ ಸೆ.30ರಂದು ನವಮಾತೆಯರಿಗೆ ಗೌರವ ಸಮರ್ಪಣೆಯೊಂದಿಗೆ ನವದುರ್ಗಾ ಆರಾಧನೆ ನೆರವೇರಿಸಲಾಯಿತು. 9 ಮಂದಿ ಮಾತೆಯರು ಒಂಬತ್ತು ಬಣ್ಣಗಳ ಉಡುಗೆಗಳನ್ನು ಧರಿಸಿ ಪಾಲ್ಗೊಂಡರು.
ವಿವೇಕಾನಂದ ಸಿಬಿಎಸ್ಇ ವಿಭಾಗ ಮುಖ್ಯಸ್ಥೆ ಸಿಂಧು(ಬಿಳಿ), ಕ್ಲಸ್ಟರ್ ಹೆಡ್ ಜನೌಷಧಿ ಡಾ.ಅನಿಲ(ನೀಲಿ), ಚೇತನ ಗೌರಿ ಪ್ರಸನ್ನ ಕಜೆ(ಕೆಂಪು), ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಆಶಾ ಪ್ರಕಾಶ್(ಹಳದಿ), ಕೊಕೊಗುರು ಬ್ರಾಂಡ್ ಮೆನೇಜರ್ ಸುಪ್ರಭಾ ಬೋನಂತಾಯ(ಬೂದು), ವಿಟ್ಲ ಪ್ರಿಯುನಿವರ್ಸಿಟಿ ಸ್ಕೂಲ್ನ ಸುಮನಾ (ಹಸಿರು), ಐಶ್ವರ್ಯ ಬ್ಯೂಟಿಪಾರ್ಲರ್ ಮಾಲಕಿ ಐಶ್ವರ್ಯ ಶೆಟ್ಟಿ(ಕಿತ್ತಳೆ), ವಕೀಲೆ ಸೀಮಾ ನಾಗರಾಜ್(ಗುಲಾಬಿ), ಕೊಟ್ಟಕ್ಕಲ್ ಆರ್ಯವೈದ್ಯ ಶಾಲೆಯ ಸೋನಾ ಪ್ರದೀಪ್(ನೇರಳೆ)ರವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಹೊಸ ಟ್ರೆಂಡಿ ಆಭರಣಗಳನ್ನು ಅನಾವರಣಗೊಳಿಸಿದರು.
ಮುಳಿಯ ಜ್ಯುವೆಲ್ಲರ್ಸ್ನ ಸಿಬಂದಿ ಪ್ರವೀಣ್ ಹೊಸ ಟ್ರೆಂಡಿ ಆಭರಣಗಳ ಪರಿಚಯ ಮಾಡಿದರು. ನವಮಾತೆಯರಾದ ಡಾ.ಅನಿಲ, ಸೀಮಾ ನಾಗರಾಜ್, ಸುಪ್ರಭಾ ಬೋನಂತಾಯ ಹಾಗೂ ಸಿಂಧುರವರು ಅನಿಸಿಕೆ ವ್ಯಕ್ತಪಡಿಸಿದರು. ಮುಳಿಯ ಜ್ಯುವೆಲ್ಲರ್ಸ್ನ ಸಿಎಂಡಿ ಕೇಶವ ಪ್ರಸಾದ್ ಮುಳಿಯ ಮಾತನಾಡಿ ನವರಾತ್ರಿಯಲ್ಲಿ ನವಮಾತೆಯರನ್ನು ಕರೆದು ಕಾರ್ಯಕ್ರಮ ಆಯೋಜಿಸದಕ್ಕೆ ತುಂಬಾ ಸಂತೋಷವೆನಿಸುತ್ತಿದೆ. ಮಹಿಳೆಯರು ಆಭರಣ ಖರೀದಿಯ ಸಮಯದಲ್ಲಿ ತುಂಬಾ ತಲ್ಲೀನತೆಯನ್ನು ಹೊಂದಿರುತ್ತಾರೆ. ಚಿನ್ನ ಖರೀದಿಯು ಕಾಲಾತೀತ ಮತ್ತು ದೇಶಾತೀತವಾಗಿದೆ. ಚಿನ್ನ ಯಾವತ್ತೂ ನಮ್ಮ ಕೈಬಿಡುವುದಿಲ್ಲ ಎಂದು ಹೇಳಿದರು. ಮುಳಿಯ ಜ್ಯುವೆಲ್ಲರ್ಸ್ನ ಮ್ಯಾನೇಜಿಂಗ್ ಡೈರೆಕ್ಟರ್ ಕೃಷ್ಣನಾರಾಯಣ ಮುಳಿಯ ಮಾತನಾಡಿ ನವ ಎಂದರೆ ಒಂಭತ್ತು ಅಥವಾ ಹೊಸದು. ನಾವು ಇಂದು 9 ಟ್ರೆಂಡಿ ಆಭರಣಗಳನ್ನು ಬಿಡುಗಡೆಗೊಳಿಸುತ್ತಿದ್ದೇವೆ. ನವರಾತ್ರಿಗೂ ಮುಳಿಯ ಜ್ಯುವೆಲ್ಲರ್ಸ್ ಪ್ರಾರಂಭಕ್ಕೂ ಸಂಬಂಧವಿದೆ ಎಂದು ಹೇಳಿ ಗ್ರಾಹಕರ ಸಹಕಾರ ಕೋರಿದರು.
ಕೃಷ್ಣವೇಣಿ ಮುಳಿಯ ಮತ್ತು ಅಶ್ವಿನಿ ಮುಳಿಯರವರು ನವಮಾತೆಯರಿಗೆ ಆರತಿ ಮಾಡಿ ಕುಂಕುಮವಿಟ್ಟು ಗೌರವಿಸಿದರು. ಶಾಖಾ ಪ್ರಬಂಧಕ ನಾಮದೇವ್ ಮಲ್ಯ ಸ್ವಾಗತಿಸಿದರು. ಮಾರ್ಕೆಟಿಂಗ್ ಮ್ಯಾನೇಜರ್ ಸಂಜೀವ ವಂದಿಸಿದರು. ಸಿಬಂದಿ ಸೌರಭ ಕಾರ್ಯಕ್ರಮ ನಿರೂಪಿಸಿದರು. ಮುಳಿಯ ಜ್ಯುವೆಲ್ಲರ್ಸ್ನ ಹಿರಿಯರಾದ ಸರಾ- ಶ್ಯಾಮ ಭಟ್ ಮತ್ತು ಸುಲೋಚನ ಶ್ಯಾಮ ಭಟ್ ದಂಪತಿ ಹಾಗೂ ಸಿಬಂದಿಗಳು ಉಪಸ್ಥಿತರಿದ್ದರು.
ಸೆ.26ರಿಂದ ಅ.5ರವರೆಗೆ ನಡೆಯುವ ಈ ಉತ್ಸವದಲ್ಲಿ ಪ್ರತಿದಿನ ಆಯಾ ಬಣ್ಣದ ರತ್ನಗಳನ್ನು ವಿಶೇಷ ಆದ್ಯತೆಯೊಂದಿಗೆ ಮಾರಾಟ ಮಾಡಲಾಗುತ್ತಿದೆ. ನವದುರ್ಗೆಯರನ್ನು ನವ ವರ್ಣಗಳಲ್ಲಿ ಆರಾಧಿಸಲು ಈ ನವರತ್ನಗಳು ಗ್ರಾಹಕರಿಗೆ ಅತ್ಯಂತ ಸೂಕ್ತವಾಗಿದ್ದು, ಆಕರ್ಷಕ ಬೆಲೆಯಲ್ಲಿ ದೊರೆಯುತ್ತವೆ. ನವರಾತ್ರಿಯ ಈ ದಿನಗಳಲ್ಲಿ ಪ್ರತಿದಿನವೂ ಹೊಚ್ಚ ಹೊಸ ಟ್ರೆಂಡಿ ಆಭರಣಗಳನ್ನು ಅನಾವರಣಗೊಳಿಸಲಾಗುತ್ತಿದೆ. ಪ್ರತಿದಿನ ಆಯಾದಿನದ ಬಣ್ಣದ ಸಾಂಪ್ರದಾಯಿಕ ಉಡುಗೆಗಳನ್ನು ಧರಿಸಿದ ಮಾತೆಯರಿಂದ ಈ ಆಭರಣಗಳನ್ನು ಅನಾವರಣಗೊಳಿಸಲಾಗುತ್ತಿದೆ.