ಯುನೈಟೆಡ್ ಟೊಯೋಟಾ ಶಾಖೆ ಶುಭಾರಂಭ

0
  • ವಿನೂತನ ಅರ್ಬನ್ ಕ್ರೂಸರ್ ಹೊಸ ಆವೃತ್ತಿ ಬಿಡುಗಡೆ

ಪುತ್ತೂರು: ಜಪಾನ್ ತಂತ್ರಜ್ಞಾನ ಆಧಾರಿತ ಹೆಸರಾಂತ ಟೊಯೋಟಾ ವಾಹನಗಳೂ ಜಗತ್ತಿನಲ್ಲೇ ಅದ್ವೀತಿಯ ಸ್ಥಾನ ಪಡೆದುಕೊಂಡಿದೆ.ಇಲ್ಲಿನ ಮಾರುಕಟ್ಟೆಗೆ ಲಗ್ಗೆ ಇಡುತ್ತಿರುವ ಪ್ರತಿಯೊಂದು ಪ್ರಮುಖ ಕಂಪೆನಿಗಳ ಕಾರುಗಳ ಡೀಲರ್ ಶಿಪ್ ಕೂಡ ಆರೂರ್ ಕುಟುಂಬದ ಸದಸ್ಯರ ಬಳಿಗೆ ಸೇರಿಕೊಂಡಿದೆ. ಇನ್ನು ಮುಂದೆ ಯಾವುದೇ ರೀತಿಯ ಸೇವೆಗೂ ಮಂಗಳೂರಿಗೆ ಓಡಾಡುವ ಅವಶ್ಯಕತೆ ಇಲ್ಲ. ಸಂಸ್ಥೆಯು ಅತ್ಯುತ್ತಮ ರೀತಿಯ ಸೇವೆ ನೀಡುವ ಮೂಲಕ ಯಶಸ್ವಿಯಾಗಲಿಯೆಂದು, ಪುತ್ತೂರಿನ ಹೆಸರಾಂತ ಸ್ವರ್ಣೋದ್ಯಮಿ ಜಿ.ಎಲ್ .ಬಲರಾಮ್ ಆಚಾರ್ಯ ಅಭಿಪ್ರಾಯಪಟ್ಟರು. ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಅ.1 ರಂದು ಮಂಗಳೂರಿನ ಯುನೈಟೆಡ್ ಟೊಯೋಟಾ ಇದರ ಪುತ್ತೂರು ಕೇಪುಳು ಮುಖ್ಯರಸ್ತೆ ಬಳಿಯ ನೂತನ ಶಾಖೆಯನ್ನು ದೀಪ ಪ್ರಜ್ವಲನೆ ಮೂಲಕ ಉದ್ಘಾಟನೆ ಮಾಡಿ, ಆ ಬಳಿಕ ಕಂಪೆನಿಯೂ ಮಾರುಕಟ್ಟೆಗೆ ಪರಿಚಯಿಸಿರುವ ಅರ್ಬನ್ ಕ್ರೂಸರ್ ಹೈ ರೈಡರ್ ಹೊಸ ಆವೃತಿ ಕಾರನ್ನೂ ಕೂಡ ಬಿಡುಗಡೆಗೊಳಿಸಿ ಹಾರೈಸಿದರು. ನಗರಸಭಾ ಸದಸ್ಯ ಸುಂದರ ಪೂಜಾರಿ ಬಡಾವು , ಉದ್ಯಮಿ ಕರುಣಾಕರ್ ರೈ ಸಹಿತ ಹಲವು ಅತಿಥಿಗಳು ಇದ್ದರು.

ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್ ,ಸಹಾಯಕ ಆಯುಕ್ತ ಗಿರೀಶ್ ನಂದನ್ ಆಗಮಿಸಿ ಹಾರೈಸಿದರು. ಯುನೈಟೆಡ್ ಟೊಯೋಟಾ ಸಂಸ್ಥೆಯ ಮ್ಯಾನೆಜಿಂಗ್ ಡೈರೆಕ್ಟರ್ ಆರೂರ್ ಗಣೇಶ್ ರಾವ್ ,ಆರೂರ್ ಗಣೇಶ್ ರಾವ್ ,ಆರೂರ್ ರಾಮ್ ಗೋಪಾಲ್ ರಾವ್ ,ಆರೂರ್ ವರುಣ್ ರಾವ್ ಹಾಗೂ ಆರೂರ್ ವಿಕ್ರಂ ರಾವ್ ಸ್ವಾಗತಿಸಿದರು. ಸಿ ಇ ಒ ರಮೇಶ್ ಪ್ರಭು ಸಹಿತ ಗ್ರಾಹಕರು ಹಾಗೂ ಸಂಸ್ಥೆಯ ಎಲ್ಲಾ ವರ್ಗದ ಸಿಬಂದಿಗಳೂ ಉಪಸ್ಥಿತರಿದ್ದರು. ಅವಿನಾಶ್ ಶೆಟ್ಟಿ ಮಾತನಾಡಿ ವಿನೂತನ ಕಾರಿನ ಕಾರ್ಯವೈಖರಿ ಬಗ್ಗೆ ವಿವರಣೆ ನೀಡಿದರು. ಶ್ರೀಮಾ ನಿರೂಪಿಸಿ ,ಅರ್ಷಿಯಾ ವಂದಿಸಿದರು.

ಅದ್ಭುತ ತಂತ್ರಜ್ಣಾನ ಹಾಗೂ ರಚನೆ, ಆಕರ್ಷಕ ಶೈಲಿ, ಉತ್ತಮ ಮೈಲೇಜ್ ಜೊತೆಗೆ 1490cc ಸಾಮರ್ಥ್ಯ ಎಂಜಿನ್, ಮ್ಯಾನ್ಯುವಲ್ ಆ್ಯಂಡ್ ಅಟೋ ಮ್ಯಾಟಿಕ್ ಟ್ರಾನ್ಸ್ಮಿಶನ್ ಗೇರ್ ಸಹಿತ ಹಲವೂ ವೈಶಿಷ್ಟ್ಯವನ್ನು ಹೊಂದಿದ್ದು, ಆರಂಭಿಕ ಬೆಲೆ 10.48 ರೂ. ಲಕ್ಷದಿಂದ ಪ್ರಾರಂಭವಾಗಲಿದೆ. ಇನ್ನೂ ಹೆಚ್ಚು ಮಾಹಿತಿಗಾಗಿ 9686687581 ಕರೆ ಮಾಡಬಹುದು.

LEAVE A REPLY

Please enter your comment!
Please enter your name here