ಫಾ.ಪತ್ರಾವೋ ಆಸ್ಪತ್ರೆಯಲ್ಲಿ ಮಲ್ಟಿ ಸ್ಪೆಶಾಲಿಟಿ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟನೆ

0

ಪುತ್ತೂರು: ಡೊನ್ ಬೊಸ್ಕೊ ಕ್ಲಬ್ ಪುತ್ತೂರು ಮತ್ತು ಗ್ಲೋರಿಯಾ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಹಾಗೂ ಲಯನ್ಸ್ ಕ್ಲಬ್ ಪುತ್ತೂರ್ದ ಮುತ್ತು ಇವುಗಳ ಸಹಯೋಗದಲ್ಲಿ ಫಾದರ್ ಪತ್ರಾವೋ ಆಸ್ಪತ್ರೆಯಲ್ಲಿ ಮಲ್ಟಿ ಸ್ಪೆಶಾಲಿಟಿ ಆರೋಗ್ಯ ತಪಾಸಣಾ ಶಿಬಿರವು ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಜರಗಿದ್ದು, ಇದರ ಉದ್ಘಾಟನಾ ಕಾರ್ಯಕ್ರಮವು ಅ.2 ರಂದು ನೆರವೇರಿತು.


ಮಾಯಿದೆ ದೇವುಸ್ ಚರ್ಚ್ ಸಹಾಯಕ ಧರ್ಮಗುರು ವಂ|ಕೆವಿನ್ ಲಾರೆನ್ಸ್ ಡಿ’ಸೋಜರವರು ಆಶೀರ್ವಚನ ನೀಡುತ್ತಾ ಮಾತನಾಡಿ,ದೈನಂದಿನ ಬದುಕಿನ ಜಂಜಾಟದಲ್ಲಿ ಮನುಷ್ಯ ತನ್ನ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ನಿರ್ಲಕ್ಷ್ಯ ವಹಿಸುತ್ತಿದ್ದಾನೆ. ಆಹಾರಶೈಲಿಯಲ್ಲಿ ವ್ಯತ್ಯತೆ, ವ್ಯಾಯಾಮವಿಲ್ಲದಿರುವಿಕೆ ಮನುಷ್ಯನ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಮನುಷ್ಯ ಕ್ಲಪ್ತ ಸಮಯದಲ್ಲಿ ವೈದ್ಯರ ಬಳಿ ಪರೀಕ್ಷೆ ನಡೆಸಿ ತನ್ನ ಆರೋಗ್ಯದ ಬಗ್ಗೆ ಮುಂಜಾಗ್ರತೆ ಕ್ರಮ ಕೈಗೊಂಡಾಗ ಆರೋಗ್ಯದಲ್ಲಿ ಸುಧಾರಣೆ ಕಾಣುವುದು ಎಂದರು.
ಈ ಶಿಬಿರದಲ್ಲಿ ಮಂಗಳೂರು ಮತ್ತು ಪುತ್ತೂರಿನ ವೈದ್ಯರುಗಳಾದ ಡಾ.ಸುದೀಪ್(ಎಂಡೋಕ್ರೈನೋಲಜಿಸ್ಟ್), ಡಾ.ಪ್ರದೀಪ್(ಹೃದ್ರೋಗ ತಜ್ಞರು), ಡಾ.ನಝೀರ್ ಅಹಮದ್(ವೈದ್ಯಕೀಯ ಹಾಗೂ ಮಧುಮೇಹ ತಜ್ಞರು),ಡಾ.ಅಮಿತ್(ಮೂತ್ರಪಿಂಡ ತಜ್ಞರು), ಡಾ.ಪ್ರೀತಂ(ಮಕ್ಕಳ ತಜ್ಞರು), ಡಾ.ಡೋನ್ ಗ್ರೆಗೊರಿ ಮಸ್ಕರೇನ್ಹಸ್(ಶಾಸಕೋಶ ತಜ್ಞರು), ಡಾ.ಜ್ಯೋಸ್ನಾ(ಪ್ರಸೂತಿ ತಜ್ಞರು), ಡಾ.ಫ್ಲೋರಿನ್ ಮಥಾಯಿಸ್ (ಪ್ರಸೂತಿ ತಜ್ಞರು)ರವರುಗಳು ಆರೋಗ್ಯ ತಪಾಸಣೆ ಶಿಬಿರವನ್ನು ನಡೆಸಿಕೊಟ್ಟರು.
ಡೊನ್ ಬೊಸ್ಕೊ ಕ್ಲಬ್ ಅಧ್ಯಕ್ಷ ಫೆಬಿಯನ್ ಗೋವಿಯಸ್, ಕಾರ್ಯದರ್ಶಿ ಜೆರಾಲ್ಡ್ ಡಿ’ಕೋಸ್ಟ ಹಾಗೂ ಸದಸ್ಯರಾದ ಜೋನ್ ಕುಟಿನ್ಹಾ, ರೋಯ್ಸ್ ಪಿಂಟೋ, ಆಲನ್ ಮಿನೇಜಸ್, ಅರುಣ್ ರೆಬೆಲ್ಲೋ, ರಿಚರ್ಡ್ ಪಿಂಟೋ, ರೋಹನ್ ಡಾಯಸ್, ರೋಶನ್ ಡಾಯಸ್, ಸಹಿತ ಸದಸ್ಯರು, ಗ್ಲೋರಿಯಾ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ರಾಕೇಶ್ ಮಸ್ಕರೇನ್ಹಸ್, ನಿರ್ದೇಶಕ ಪ್ರಕಾಶ್ ಸಿಕ್ವೇರಾ, ಲಯನ್ಸ್ ಕ್ಲಬ್ ಪುತ್ತೂರ್ದ ಮುತ್ತು ಅಧ್ಯಕ್ಷ ಕೇಶವ ಪೂಜಾರಿ ಬೆದ್ರಾಳ, ಲಯನ್ಸ್ ಕ್ಲಬ್ ವಲಯಾಧ್ಯಕ್ಷ ಲ್ಯಾನ್ಸಿ ಮಸ್ಕರೇನ್ಹಸ್, ಫಾ.ಪತ್ರಾವೋ ಆಸ್ಪತ್ರೆ ಸಿಬ್ಬಂದಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

150ಕ್ಕೂ ಮಿಕ್ಕಿ ಫಲಾನುಭವಿಗಳು…
ಶಿಬಿರದಲ್ಲಿ ನೋಂದಾಣಿಕೆ, ಸಮಾಲೋಚನೆ, ಇಸಿಜಿ, ಎಕ್ಸ್-ರೇ, ಲಂಗ್ ಫಂಕ್ಷನ್ ಟೆಸ್ಟ್(PFT) ಉಚಿತ ಮತ್ತು CBC, ESR, CRP, PPBS, FBS, RFT, ಯೂರಿನ್ ರುಟೀನ್ ರಕ್ತ ಪರೀಕ್ಷೆ, IGE, HBA1c, TFT, FT4, LFT, ಎಲೆಕ್ಟ್ರೋಲೈಟ್ಸ್, LPT, TRPO, ಕ್ಯಾಲ್ಸಿಯಂ ರಕ್ತಪರೀಕ್ಷೆ ಮೇಲೆ ಶೇ.50 ರಿಯಾಯಿತಿ ಹಾಗೂ ಮೆಡಿಸಿನ್ ಮೇಲೆ ಶೇ.10 ರಿಯಾಯಿತಿ ಮಾಡಲಾಯಿತು.ಸುಮಾರು 150 ಕ್ಕೂ ಮಿಕ್ಕಿ ಫಲಾನುಭವಿಗಳು ಈ ಶಿಬಿರದಲ್ಲಿ ಪಾಲ್ಗೊಂಡು ಪ್ರಯೋಜನವನ್ನು ಪಡೆದುಕೊಂಡರು.

LEAVE A REPLY

Please enter your comment!
Please enter your name here