ಬಿಜೆಪಿಯಿಂದ ಗಾಂಧಿ ವಿಚಾರವನ್ನು ಮನೆ ಮನೆ ಮುಟ್ಟಿಸುವ ಕಾರ್ಯ – ಸಂಜೀವ ಮಠಂದೂರು
ಪುತ್ತೂರು: ಬಿಜೆಪಿ ಗ್ರಾಮಾಂತರ ಮಂಡಲ, ನಗರ ಮಂಡಲದಿಂದ ನರೇಂದ್ರ ಮೋದಿ ಜನ್ಮದಿನಾಚರಣೆಯ ಅಂಗವಾಗಿ ಸೇವಾ ಪಾಕ್ಷಿಕ ಕಾರ್ಯಕ್ರಮಡಿಯಲ್ಲಿ ಇಲ್ಲಿನ ಮುಳಿಯ ನೆಸ್ಟ್ ನಲ್ಲಿರುವ ಗಾಯತ್ರಿ ಸ್ವದೇಶಿ ಮಳಿಗೆಯಲ್ಲಿ ಖಾದಿ ಉತ್ಸವ ಮತ್ತು ಗಾಂಧಿ ಜಯಂತಿ ಕಾರ್ಯಕ್ರಮ ಅ.2 ರಂದು ನಡೆಯಿತು. ಶಾಸಕ ಸಂಜೀವ ಮಠಂದೂರು ಅವರು ಮಹಾತ್ಮಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚಣೆ ಮಾಡಿ ಬಳಿಕ ಅವರು ಖಾದಿ ಬಟ್ಟೆಯ ಪ್ರಥಮ ಖರೀದಿದಾರರಾಗಿ ಖಾದಿ ಉತ್ಸವಕ್ಕೆ ಚಾಲನೆ ನೀಡಿದರು.
ಬಿಜೆಪಿಯಿಂದ ಗಾಂಧಿ ವಿಚಾರವನ್ನು ಮನೆ ಮನೆ ಮುಟ್ಟಿಸುವ ಕಾರ್ಯ:
ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ ಮಹಾತ್ಮ ಗಾಂಧೀಜಿಯವರು ಸ್ವಾತಂತ್ರಕ್ಕಾಗಿ ಅಹಿಂಸೆಯ ಮಾರ್ಗ ಕಂಡು ಕೊಂಡು ಈ ದೇಶದ ನಾಗರಿಕರಿಗೆ ಸ್ವಾವಲಂಬನೆಯ ಕಾರ್ಯವನ್ನು ಗ್ರಾಮೋದ್ಯೋಗ ಮತ್ತು ಖಾದಿ ಮೂಲಕ ಸಂದೇಶ ಕೊಟ್ಟಿದ್ದಾರೆ. ಆ ಸಂದೇಶ ಇವತ್ತಿಗೂ ಪ್ರಸ್ತುತ ಎಂದು ದೇಶದ ಪ್ರಧಾನಿ ನರೇಂದ್ರ ಮೋದಿಯವರು ಈ ಖಾದಿ ಉತ್ಸವವನ್ನು ಖಾದಿ ಗ್ರಾಮೋತ್ಸವದ ಮೂಲಕ ಗ್ರಾಮೀಣ ಭಾಗದ ಹಳ್ಳಿಯ ಜನರಿಗೆ ಉದ್ಯೋಗ ನೀಡುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಕ್ಕೆ ಚಾಲನೆ ನೀಡಲು ಬಿಜೆಪಿಗೆ ಸಂದೇಶ ಸೂಚನೆ ನೀಡಿದಂತೆ ಗಾಂಧಿ ಜಯಂತಿಯಂದು ಗಾಂಧಿ ಉತ್ಸವ, ಸ್ವಚ್ಛತೆ, ಗಾಂಧಿ ವಿಚಾರವನ್ನು ಮನೆ ಮನೆ ಮುಟ್ಟಿಸು ಸಂಗತಿ ಕಾರ್ಯಕ್ರಮವನ್ನು ಬಿಜೆಪಿ ಹಮ್ಮಿಕೊಂಡಿದೆ ಎಂದರು. ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷೆ ವಿದ್ಯಾ ಗೌರಿ, ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ಭಾಮಿ ಅಶೋಕ್ ಶೆಣೈ, ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನಗರ ಮಂಡಲದ ಅಧ್ಯಕ್ಷ ಪಿ ಜಿ ಜಗನ್ನಿವಾಸ ರಾವ್, ನಗರಸಭೆ ಸದಸ್ಯೆ ದೀಕ್ಷಾ ಪೈ, ಮಾಜಿ ಸದಸ್ಯೆ ಸ್ವರ್ಣಲತಾ ಹೆಗ್ಡೆ, ತಾ.ಪಂ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಗಾಯತ್ರಿ ಸಹಕಾರಿ ಸಂಘದ ನಿರ್ದೇಶಕಿ ಶರಾವತಿ ರವಿನಾರಾಯಣ, ಬಿಜೆಪಿ ನಗರ ಮಂಡಲದ ಪ್ರಧಾನ ಕಾರ್ಯದರ್ಶಿ ಯುವರಾಜ್, ಶಿವಪ್ರಸಾದ್, ಗ್ರಾಮಾಂತರ ಮಂಡಲದ ಉಪಾಧ್ಯಕ್ಷ ಹರಿಪ್ರಸಾದ್ ಯಾದವ್ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಆಗಮಿಸಿದವರೆಲ್ಲಾ ಖಾದಿ ಉತ್ಪನ್ನಗಳನ್ನು ಖರೀದಿಸಿದರು. ಗಾಯತ್ರಿ ಸ್ವದೇಶಿ ಮಳಿಗೆಯ ಸಾರ್ವಜನಿಕ ಸಂಪರ್ಕಾಧಿಕರಿ ಈಶ್ವರಿ ರಾಮಕೃಷ್ಣ ಭಟ್, ನಳಿನಿ ನಾಯ್ಕ್ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.