ಬನ್ನೂರು ಗ್ರಾ.ಪಂ ಮಾಜಿ ಸದಸ್ಯೆ ಗೀತಾ, ಕಾಂಗ್ರೆಸ್ ಕಾರ್ಯಕರ್ತ ಬಾಬು ಗೌಡ ಬಿಜೆಪಿ ಸೇರ್ಪಡೆ

0

ಪುತ್ತೂರು; ಚಿಕ್ಕಮುಡ್ನೂರು ಕಾಂಗ್ರೆಸ್ ನಾಯಕಿ, ಬನ್ನೂರು ಗ್ರಾಮ ಪಂಚಾಯತ್ ನ ಕಾಂಗ್ರೆಸ್ ಬೆಂಬಲಿತ ಮಾಜಿ ಸದಸ್ಯೆ ಗೀತಾ ಬಾಬು ಗೌಡ ಹಾಗೂ ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರಾಗಿದ್ದ ಬಾಬು ಗೌಡ ಚಿಕ್ಕಮುಡ್ನೂರು ಇವರು ಬಿಜೆಪಿ ಪಕ್ಷದ ಅಭಿವೃದ್ಧಿ ಕಾರ್ಯ, ಪುತ್ತೂರು ಶಾಸಕರ ಅಭಿವೃದ್ಧಿ ಯೋಜನೆಗಳಿಂದ ಹಾಗೂ ಹಿಂದುತ್ವದ ಒಗ್ಗಟ್ಟಿಗಾಗಿ ಕಾಂಗ್ರೆಸ್‌ ತೊರೆದು ಬಿಜೆಪಿ ಪಕ್ಷ ಸೇರ್ಪಡೆಯಾದರು.


ಅ.1ರಂದು ಚಿಕ್ಕಮುಡ್ನೂರು ಬೂತ್ ಸಮಿತಿ ಸಭೆಯಲ್ಲಿ ಉಪ್ಪಿನಂಗಡಿ ಬಿಜೆಪಿ ಮಹಾಶಕ್ತಿಕೇಂದ್ರದ ಅಧ್ಯಕ್ಷ ಮುಕುಂದ ಬಜತ್ತೂರು ಇವರು ಪಕ್ಷದ ಧ್ವಜ ನೀಡಿ ಬಿಜೆಪಿಗೆ ಸೇರ್ಪಡೆಗೊಳಿಸಿದರು.
ಈ ಸಂದರ್ಭದಲ್ಲಿ ತಾ. ಪಂ ಮಾಜಿ ಸದಸ್ಯ ಲಕ್ಷಣ ಗೌಡ ಬೆಳ್ಳಿಪ್ಪಾಡಿ, ಬನ್ನೂರು ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ನಾಗೇಶ್ ಟಿ.ಎಸ್. ,ಬನ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಜಯಾ ರಮೇಶ್, ನೆಕ್ಕಿಲಾಡಿ ಶಕ್ತಿಕೇಂದ್ರದ ಸದಾನಂದ ನೆಕ್ಕಿಲಾಡಿ, ಬನ್ನೂರು ಗ್ರಾ.ಪಂ ಸದಸ್ಯರಾದ ತಿಮ್ಮಪ್ಪ ಪೂಜಾರಿ ಮೂಡಾಯೂರು, ರಾಘವೇಂದ್ರ ಅಂದ್ರಟ, ಬೂತ್ ಸಮಿತಿಯ ಚಿದಾನಂದ ಬೀರಿಗ, ತಿಮ್ಮಪ್ಪ ಪುಳುವಾರು, ಪುರುಷೋತ್ತಮ ಕೊಲ್ಯ, ಕೇಶವ ಕೊಲ್ಯ, ರತ್ನಾಕರ ಪ್ರಭು, ರಮೇಶ್ ಗೌಡ ಏಕ, ಪ್ರಕಾಶ್ ಪಂಜಿಗ, ಯೋಗೀಶ್ ಮೇರ್ಲ, ವಿಶ್ವನಾಥ ಗೌಡ, ದಿನೇಶ್ ಏಕ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here