ಪ್ರತಿಭೆಗಳ ಅನಾವರಣಕ್ಕೆ ಕ್ರೀಡಾಕೂಟ ವೇದಿಕೆಯಾಗಿದೆ-ನವೀನ್ ಭಂಡಾರಿ
ಪುತ್ತೂರು: ಗ್ರಾಮೀಣ ಕ್ರೀಡಾಕೂಟವು ಪ್ರತಿಭೆಗಳ ಅನಾವರಣಕ್ಕೆ ಇರುವ ವೇದಿಕೆಯಾಗಿದ್ದು ಇದನ್ನು ಗ್ರಾಮೀಣ ಜನತೆ ಸದುಪಯೋಗಪಡಿಸಿಕೊಳ್ಳಬೇಕೆಂದು ಪುತ್ತೂರು ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಕುಮಾರ್ ಭಂಡಾರಿ ಹೇಳಿದರು.
ಮುಂಡೂರು ಗ್ರಾ.ಪಂ ವತಿಯಿಂದ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಮುಂಡೂರು ಸ.ಉ.ಹಿ.ಪ್ರಾ.ಶಾಲೆಯಲ್ಲಿ ಅ.೨ರಂದು ನಡೆದ ಗ್ರಾಮೀಣ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮುಂಡೂರು ಗ್ರಾ.ಪಂ ಅಧ್ಯಕ್ಷೆ ಪುಷ್ಪಾ ಎನ್ ಅಧ್ಯಕ್ಷತೆ ವಹಿಸಿದ್ದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಪುತ್ತೂರು ಇದರ ಮೇಲ್ವಿಚಾರಕರಾದ ಶ್ರೀಕಾಂತ್ ಪೂಜಾರಿ ಬಿರಾವು ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.
ಮುಂಡೂರು ಪ್ರಾ.ಕೃ.ಪ.ಸಹಕಾರಿ ಸಂಘದ ಉಪಾಧ್ಯಕ್ಷ ಯಾಕೂಬ್ ಮುಲಾರ್, ಮುಂಡೂರು ಸ.ಉ.ಹಿ.ಪ್ರಾ.ಶಾಲಾ ಎಸ್ಡಿಎಂಸಿ ಅಧ್ಯಕ್ಷ ರಮೇಶ್ ಗೌಡ ಪಜಿಮಣ್ಣು, ಗ್ರಾ.ಪಂ ಪಿಡಿಓ ಗೀತಾ ಬಿ.ಎಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಗ್ರಾ.ಪಂ ಸದಸ್ಯರಾದ ಚಂದ್ರಶೇಖರ್ ಎನ್ಎಸ್ಡಿ, ಕರುಣಾಕರ ಗೌಡ ಎಲಿಯ, ಅಶೋಕ್ ಕುಮಾರ್ ಪುತ್ತಿಲ, ಪ್ರವೀಣ್ ನಾಯ್ಕ ನೆಕ್ಕಿತ್ತಡ್ಕ, ದುಗ್ಗಪ್ಪ ಕಡ್ಯ, ಬಾಲಕೃಷ್ಣ ಪೂಜಾರಿ ಕುರೆಮಜಲು, ಅರುಣಾ ಕಣ್ಣಾರ್ನೂಜಿ, ಕಾವ್ಯ ತೌಡಿಂಜ, ಯಶೊಧ ಅಜಲಾಡಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಕು.ಆರಾಧ್ಯ ಮುಂಡೂರು ಪ್ರಾರ್ಥಿಸಿದರು. ಪಿಡಿಓ ಗೀತಾ ಬಿ.ಎಸ್ ಸ್ವಾಗತಿಸಿದರು. ಗ್ರಾ.ಪಂ ಸದಸ್ಯ ಕರುಣಾಕರ ಗೌಡ ಎಲಿಯ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಗ್ರಾ.ಪಂ ಸದಸ್ಯ ಚಂದ್ರಶೇಖರ ಎನ್ಎಸ್ಡಿ ವಂದಿಸಿದರು. ಗ್ರಾ.ಪಂ ಸಿಬ್ಬಂದಿ ಶಶಿಧರ ಕೆ ಮಾವಿನಕಟ್ಟೆ ಕಾರ್ಯಕ್ರಮ ನಿರೂಪಿಸಿದರು. ಸಿಬ್ಬಂದಿಗಳಾದ ದೇವಪ್ಪ ನಾಯ್ಕ, ಕೊರಗಪ್ಪ ನಾಯ್ಕ, ಸತಿಶ, ಕವಿತಾ, ಮೋಕ್ಷಾ ಸಹಕರಿಸಿದರು.
ಗಮನ ಸೆಳೆದ ಉಮೇಶ್ ಅಂಬಟ:
ಸತತ 2ನೇ ವರ್ಷವೂ ಮುಂಡೂರು ಗ್ರಾ.ಪಂ ಸದಸ್ಯ ಉಮೇಶ್ ಗೌಡ ಅಂಬಟ ಅವರು ಗಾಂಧಿ ಜಯಂತಿ ದಿನದಂದು ಗಾಂಧಿ ವೇಷಭೂಷಣ ತೊಟ್ಟು ಗಮನ ಸೆಳೆದರು. ಈ ಸಂದರ್ಭದಲ್ಲಿ ಅವರ ಜೊತೆ ಹಲವು ಸೆಲ್ಫಿ ಫೊಟೋ ತೆಗೆಸಿಕೊಂಡರು. ಕಳೆದ ವರ್ಷವೂ ಗಾಂಧಿ ಜಯಂತಿ ದಿನದಂದು ಗಾಂಧಿ ವೇಷ ಭೂಷಣ ತೊಟ್ಟು ಉಮೇಶ್ ಗೌಡ ಅಂಬಟ ಗಮನ ಸೆಳೆದಿದ್ದರು.
ಮಹಿಳೆಯರ ಕಬಡ್ಡಿ ಪಂದ್ಯಾಟದಲ್ಲಿ ಮಾತೃಶ್ರೀ ಮುಂಡೂರು ಬಿ ಪ್ರಥಮ ಹಾಗೂ ಮಾತೃಶ್ರೀ ಮುಂಡೂರು ಎ ದ್ವಿತೀಯ ಸ್ಥಾನ ಪಡೆದುಕೊಂಡಿತು.
ಪುರುಷರ ಖೋ-ಖೋ ಪಂದ್ಯಾಟದಲ್ಲಿ ವಿನಾಯಕ ಫ್ರೆಂಡ್ಸ್ ಪ್ರಥಮ ಹಾಗೂ ಭಕ್ತಕೋಡಿ ಫ್ರೆಂಡ್ಸ್ ದ್ವಿತೀಯ ಸ್ಥಾನ ಪಡೆದುಕೊಂಡಿತು. ಮಹಿಳೆಯರ ಖೋ-ಖೋ ಪಂದ್ಯಾಟದಲ್ಲಿ ಮಾತೃಶ್ರೀ ಮುಂಡೂರು ಪ್ರಥಮ ಹಾಗೂ ಕಡ್ಯ ಫ್ರೆಂಡ್ಸ್ ಮುಂಡೂರು ದ್ವಿತೀಯ ಸ್ಥಾನ ಪಡೆದುಕೊಂಡಿತು.