ಪೆರಾಬೆ ಗ್ರಾ.ಪಂ.ವಿಶೇಷ ಗ್ರಾಮಸಭೆ, ಸ್ವಚ್ಛತಾ ಹಿ ಸೇವಾ ಕಾರ್ಯಕ್ರಮ

0

ಪೆರಾಬೆ: ಪೆರಾಬೆ ಗ್ರಾ.ಪಂ.ನಲ್ಲಿ ಗಾಂಧಿ ಜಯಂತಿ ಪ್ರಯುಕ್ತ ವಿಶೇಷ ಗ್ರಾಮಸಭೆ ಹಾಗೂ ಸ್ವಚ್ಛತಾ ಹಿ ಸೇವಾ ಕಾರ್ಯಕ್ರಮ ಅ.2ರಂದು ನಡೆಯಿತು. ಧ್ವಜಾರೋಹಣದ ಬಳಿಕ ಮಹಾತ್ಮ ಗಾಂಧೀಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು.

ವಿಶೇಷ ಗ್ರಾಮಸಭೆ ಗ್ರಾ.ಪಂ.ಅಧ್ಯಕ್ಷ ಮೋಹನ್‌ದಾಸ ರೈಯವರು ಅಧ್ಯಕ್ಷತೆಯಲ್ಲಿ ನಡೆಯಿತು. ನೀರು ಮತ್ತು ನೈರ್ಮಲ್ಯ ಜಿಲ್ಲಾ ಘಟಕದ ಮಾಹಿತಿ ಸಂಯೋಜಕ ಮಹಾಂತೇಶ್ ಹಿರೇಮಠ್‌ರವರು ಸ್ವಚ್ಛತಾ ಹೀ ಸೇವಾ ಆಂದೋನದ ಅಡಿಯಲ್ಲಿ ಏಕಬಳಕೆ ಪ್ಲಾಸ್ಟಿಕ್ ನಿಷೇಧ, ಹಸಿಕಸ- ಒಣಕಸ ವಿಂಗಡಣೆ, ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲೆಂದರಲ್ಲಿ ಕಸ ಎಸೆಯುವವರಿಗೆ ದಂಡ ವಿಧಿಸುವ ಬಗ್ಗೆ ಮಾಹಿತಿ ನೀಡಿದರು. ಸ್ವಚ್ಛತೆಯ ಬಗ್ಗೆ ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು. ಸಾರ್ವಜನಿಕ ಸ್ಥಳಗಳಲ್ಲಿ ವೈಯಕ್ತಿಕ ಹಾಗೂ ಸಾರ್ವಜನಿಕ ಕಾರ್ಯಕ್ರಮದ ತ್ಯಾಜ್ಯ ಹಾಕಿದಲ್ಲಿ ದಂಡ ವಿಧಿಸುವುದು, ಏಕ ಬಳಕೆಯ ಪ್ಲಾಸ್ಟಿಕ್ ನಿಷೇಧಿಸುವುದು, ಶಾಲಾ ಮಕ್ಕಳಿಗೆ ಸಾರ್ವಜನಿಕ ಪ್ರದೇಶಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಎಸೆಯದಂತೆ ಮಾಹಿತಿ ನೀಡುವ ಬಗ್ಗೆ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ವಿಶೇಷ ಗ್ರಾಮಸಭೆ ಬಳಿಕ ಸ್ವಚ್ಛತಾ ಹಿ ಸೇವಾ ಕಾರ್ಯಕ್ರಮದಡಿಯಲ್ಲಿ ಪೆರಾಬೆ ಗ್ರಾ.ಪಂ.ಮುಂಭಾಗದಲ್ಲಿ ಸ್ವಚ್ಛತೆ ಮಾಡಲಾಯಿತು. ಗ್ರಾ.ಪಂ.ಉಪಾಧ್ಯಕ್ಷೆ ಸಂಧ್ಯಾ ಕೆ., ಸದಸ್ಯರಾದ ಚಂದ್ರಶೇಖರ ರೈ, ಬಿ.ಕೆ.ಕುಮಾರ, ಸದಾನಂದ ಕೆ., ಕೃಷ್ಣ ವೈ, ಪಿ.ಜಿ.ರಾಜು, ಫಯಾಜ್ ಸಿ.ಎಂ., ವೇದಾವತಿ, ಸುಶೀಲ, ಕಾವೇರಿ, ಲೀಲಾವತಿ, ಮೋನ್ಸಿ ಸಾಜನ್, ಮಮತಾ, ಮೋಹಿನಿ ಉಪಸ್ಥಿತರದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶಾಲಿನಿ ಕೆ.ಬಿ.ಸ್ವಾಗತಿಸಿ, ನಿರೂಪಿಸಿದರು. ಗ್ರಾ.ಪಂ.ಸಿಬ್ಬಂದಿಗಳು, ವಿಕಲಚೇತನರ ಕಾರ್ಯಕರ್ತ ಸಹಕರಿಸಿದರು.

LEAVE A REPLY

Please enter your comment!
Please enter your name here