ನೆಲ್ಯಾಡಿ: ಕಾಮಧೇನು ನಿಧಿ ಸ್ವಸಹಾಯ ಸಂಘ ಉದ್ಘಾನೆ

0

ನೆಲ್ಯಾಡಿ: ಕಾಮಧೇನು ಮಹಿಳಾ ಸಹಕಾರ ಸಂಘ ನೆಲ್ಯಾಡಿ ಇದರ ಸಹಯೋಗದಲ್ಲಿ ರಚನೆಗೊಂಡ ಕಾಮಧೇನು ನಿಧಿ ಸ್ವಸಹಾಯ ಸಂಘದ ಉದ್ಘಾಟನೆ ಅ.4ರಂದು ನೆಲ್ಯಾಡಿಯಲ್ಲಿರುವ ಸಂಘದ ಮುಖ್ಯಕಚೇರಿಯಲ್ಲಿ ನಡೆಯಿತು.

ಕಾಮಧೇನು ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ಉಷಾಅಂಚನ್‌ರವರು ಉದ್ಘಾಟಿಸಿ, ಸಂಘದ ಸದಸ್ಯರಿಗೆ ದಾಖಲಾತಿ ಹಸ್ತಾಂತರಿಸಿ ಮಾತನಾಡಿ, ಮುಂದಿನ ದಿನಗಳಲ್ಲಿ ಸಂಘದ ಎಲ್ಲಾ ಸದಸ್ಯರು ಸಂಘದ ಎಲ್ಲಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸಂಘವನ್ನು ಉತ್ತಮ ರೀತಿಯಲ್ಲಿ ಮುಂದುವರೆಸಿಕೊಂಡು ಹೋಗಬೇಕು ಎಂದು ಹೇಳಿ ಶುಭ ಹಾರೈಸಿದರು. ಸಂಘದ ನಿರ್ವಹಣೆಯ ಬಗ್ಗೆ ಅವರು ಮಾಹಿತಿ ಮಾರ್ಗದರ್ಶನ ನೀಡಿದರು.

ಕಾರ್ಯಕ್ರಮದಲ್ಲಿ ಸಹಕಾರ ಸಂಘದ ಉಪಾಧ್ಯಕ್ಷೆ ಮೇಘನಾ, ನಿರ್ದೇಶಕರಾದ ಸಂಪಾವತಿ, ಸಿಬ್ಬಂದಿಗಳಾದ ಚೈತನ್ಯ, ಸ್ವಾತಿ, ಸೇವಾಪ್ರತಿನಿಧಿ ಕುಸುಮಾ ಹಾಗೂ ಸ್ವಸಹಾಯ ಸಂಘದ ಅಧ್ಯಕ್ಷೆ ನಳಿನಾಕ್ಷಿ, ಕಾರ್ಯದರ್ಶಿ ಪ್ರೀತಿ ಎಂ.ಕೆ. ಸದಸ್ಯರಾದ ಗಿರಿಜ, ಕಮಲ, ನೆಬಿಸ, ಯಶೋದ, ಕುಸುಮಾ, ಧನಲಕ್ಷ್ಮೀ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here