ಪುಣ್ಚಪ್ಪಾಡಿ :ಅಮೃತ ಉದ್ಯಾನವನಕ್ಕೆ ಸಚಿವ ಎಸ್.ಅಂಗಾರ ಭೇಟಿ

0

ಸವಣೂರು : ಸವಣೂರು ಗ್ರಾ.ಪಂ.ನ ಅಮೃತ ಯೋಜನೆಯಡಿ ಪುಣ್ಚಪ್ಪಾಡಿ ಗ್ರಾಮದ ನಡುಮನೆಯಲ್ಲಿ ನಿರ್ಮಾಣವಾದ ಎ.ಎನ್.ಎಸ್‌ ಅಮೃತ ಉದ್ಯಾನವನಕ್ಕೆ ಬಂದರು, ಒಳನಾಡು ಸಾರಿಗೆ ಹಾಗೂ ಮೀನುಗಾರಿಕೆ ಸಚಿವ ಎಸ್.ಅಂಗಾರ ಅವರು ಭೇಟಿ ನೀಡಿ, ಉದ್ಯಾನವನವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಸುಳ್ಯ ಕ್ಷೇತ್ರದ ಅಕ್ರಮ ಸಕ್ರಮ ಸಮಿತಿ ಸದಸ್ಯ ರಾಕೇಶ್‌ ರೈ ಕೆಡೆಂಜಿ, ಸವಣೂರು ಗ್ರಾ.ಪಂ.ಉಪಾಧ್ಯಕ್ಷ ಶೀನಪ್ಪ ಶೆಟ್ಟಿ ನೆಕ್ರಾಜೆ, ಸದಸ್ಯರಾದ ಗಿರಿಶಂಕರ ಸುಲಾಯ, ಚಂದ್ರಾವತಿ ಸುಣ್ಣಾಜೆ, ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ತಾರಾನಾಥ ಕಾಯರ್ಗ, ಪಿ.ಡಿ.ಕೃಷ್ಣ ಕುಮಾರ್‌ ರೈ ದೇವಸ್ಯ, ಬಾಲಕೃಷ್ಣ ರೈ ದೇವಸ್ಯ, ಸವಣೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷೆ ಮಮತಾ ರೈ ದೇವಸ್ಯ,ನಿರ್ದೇಶಕಿ ಆಶಾ ರೈ ಕಲಾಯಿ, ಸವಣೂರು ಪ.ಪೂ.ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಚಿನ್‌ ಕುಮಾರ್‌ ಜೈನ್‌,ವಕೀಲ ಮಹೇಶ್‌ ಕೆ.ಸವಣೂರು,ಗ್ರಾ.ಪಂ.ಮಾಜಿ ಅಧ್ಯಕ್ಷೆ ಇಂದಿರಾ ಬಿ.ಕೆ.,ಮಾಜಿ ಸದಸ್ಗ ಸತೀಶ್‌ ಬಲ್ಯಾಯ ,ಪವನ್‌ ನೆಲ್ಯಾಜೆ ಮೊದಲಾದವರಿದ್ದರು.

LEAVE A REPLY

Please enter your comment!
Please enter your name here