ಪುತ್ತೂರು: ಗುಜರಾತ್ ನ ರಾಜ್ಕೋಟ್ನಲ್ಲಿ ಅ.5ರಂದು ನಡೆದ 36ನೇ ನ್ಯಾಷನಲ್ ಗೇಮ್ಸ್ನಲ್ಲಿ ಭಾರತೀಯ ನೌಕಾದಳವನ್ನು ಪ್ರತಿನಿಧಿಸಿದ ವೈಷ್ಣವ್ ಹೆಗ್ಡೆ 50ಮೀ ಬ್ರೆಸ್ಟ್ಸ್ಟ್ರೋಕ್ ವಿಭಾಗದಲ್ಲಿ 29.00 ಸೆಕೆಂಡುಗಳಲ್ಲಿ ಕ್ರಮಿಸಿ ಬೆಳ್ಳಿಯ ಪದಕ ಪಡೆದಿರುತ್ತಾರೆ.
ಭಾರತ ಸರಕಾರ 4 ವರ್ಷಗಳಿಗೊಮ್ಮೆ ಈ ಸ್ಪರ್ಧೆ ಆಯೋಜಿಸುತ್ತಿದ್ದು ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಿದ ಏಕೈಕ ಸ್ಪರ್ಧಿ ವೈಷ್ಣವ್ ಹೆಗ್ಡೆ. ಇವರು ಪುತ್ತೂರು ಅಕ್ವಾಟಿಕ್ ಕ್ಲಬ್ ನ ಸದಸ್ಯರಾಗಿದ್ದು, ಪಾರ್ಥ ವಾರಣಾಸಿ, ನಿರೂಪ್, ದೀಕ್ಷಿತ್ ಮತ್ತು ರೋಹಿತ್ ರವರಲ್ಲಿ ತರಬೇತಿ ನೀಡಿದ್ದಾರೆ. ಇವರು ಪುತ್ತೂರು ಡಾ.ಶಿವರಾಮ ಕಾರಂತ ಬಾಲವನ ಮತ್ತು ಸೈಂಟ್ ಅಲೋಶಿಯಸ್ನ ಸ್ವಿಮ್ಮಿಂಗ್ ಪೂಲ್ನಲ್ಲಿ ತರಬೇತಿ ಪಡೆದಿರುತ್ತಾರೆ.