ಪುತ್ತೂರು : ವಿದ್ಯಾಭಾರತಿ ಕರ್ನಾಟಕ ಇದರ ವತಿಯಿಂದ, ಶಾಸ್ತ್ರಿ ಪಬ್ಲಿಕ್ ಸ್ಕೂಲ್, ಹುಣಸೂರಿನಲ್ಲಿ ಇದೇ ಅಕ್ಟೋಬರ್ 1ರಂದು ರಾಜ್ಯ ಮಟ್ಟದ ಜ್ಞಾನ-ವಿಜ್ಞಾನ ಮೇಳದಲ್ಲಿ ಏರ್ಪಡಿಸಲಾದ ವಿಜ್ಞಾನ ಮಾದರಿಗಳ ಪ್ರದರ್ಶನ ಸ್ಪರ್ಧೆಯಲ್ಲಿ ನೆಹರೂ ನಗರದ ವಿವೇಕಾನಂದ ಆಂಗ್ಲ ಮಾಧ್ಯಮ (ಸಿ.ಬಿ. ಎಸ್. ಇ) ಶಾಲೆಯ 9ನೆಯ ತರಗತಿ ವಿದ್ಯಾರ್ಥಿ ಬಿ . ಧ್ಯಾನ್ ಶೆಟ್ಟಿ (ಉಮೇಶ್ ಬಿ. ಶೆಟ್ಟಿ ಮತ್ತು ಶಾಂತಿ ಶೆಟ್ಟಿ ದಂಪತಿ ಪುತ್ರ) ಕಿಶೋರವರ್ಗ ಮಟ್ಟದಲ್ಲಿ “ಮಾಡೆಲ್ ಬೇಸ್ಡ್ ಆನ್ ಸೌಂಡ್” ಎಂಬ ವಿಷಯದ ಕುರಿತು ವಿಜ್ಞಾನ ಮಾದರಿಯನ್ನು ಪ್ರದರ್ಶಿಸಿ, ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಅದೇ ರೀತಿ ಶಾಲೆಯ 7ನೇ ತರಗತಿಯ ವಿದ್ಯಾರ್ಥಿನಿ ಧನ್ಯಶ್ರೀ ಎಚ್. ಪಿ (ಪ್ರಕಾಶ್ ಎಚ್. ಕೆ ಮತ್ತು ಮಾಲಿನಿ ಕೆ.ಎನ್ ದಂಪತಿ ಪುತ್ರಿ) ಬಾಲವರ್ಗ ಮಟ್ಟದ ವಿಜ್ಞಾನ – ಲೇಖನ ವಾಚನ ಸ್ಪರ್ಧೆಯಲ್ಲಿ “ಹೆಲ್ತ್ ಅಂಡ್ ಹೈಜೀನ್ ” ಎಂಬ ವಿಷಯದ ಕುರಿತು ವಿಜ್ಞಾನ ಲೇಖನವನ್ನು ವಾಚಿಸಿ ದ್ವಿತೀಯ ಸ್ಥಾನ ಪಡೆದು ಶಾಲೆಗೆ ಕೀರ್ತಿಯನ್ನು ತಂದಿದ್ದಾರೆ ಎಂದು ಶಾಲಾ ಮುಖ್ಯ ಶಿಕ್ಷಕಿ ಸಿಂಧೂ ವಿ. ಜಿ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.