ಪುತ್ತೂರು: ನೆಹರುನಗರದಲ್ಲಿರುವ ಜಾಕಿ ಫರ್ನಿಚರ್‍ಸ್ ಮಾಲಕ ಇಬ್ರಾಹಿಂ ಅವರ ಪುತ್ರ ಉದ್ಯಮಿ ಆಫಾಕ್(38ವ)ರವರು ಸಂಸ್ಥೆಯ ಮಹಡಿಯಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ವರದಿಯಾಗಿದೆ.
ಬನ್ನೂರು ಗುರುಂಪುನಾರ್ ನಿವಾಸಿಯಾಗಿರುವ ಇಬ್ರಾಹಿಂ ಅವರ ನೆಹರುನಗರದಲ್ಲಿರುವ ಕೆಜೆಎಂ ಫರ್ನಿಚರ್ ಅಂಗಡಿಯ ಮೊದಲನೇ ಮಹಡಿಯ ಕೊಠಡಿಯಲ್ಲಿ ಪುತ್ರ ಆಫಾಕ್ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ವರದಿಯಾಗಿದೆ.
ಘಟನಾ ಸ್ಥಳಕ್ಕೆ ಪುತ್ತೂರು ಪೊಲೀಸರು ತೆರಳಿದ್ದಾರೆ. ಮೃತರು ತಂದೆ ಇಬ್ರಾಹಿಂ, ಸಹೋದರರು ಮತ್ತು ಪತ್ನಿ, ಮೂವರು ಮಕ್ಕಳನ್ನು ಅಗಲಿದ್ದಾರೆ.