ಭಜನೆ, ಧಾರ್ಮಿಕ ಶಿಕ್ಷಣ ರಾಷ್ಟ್ರೀಯತೆ ಬೆಳೆಸುತ್ತದೆ – ಆಶಾ ಬೆಳ್ಳಾರೆ
ಪುತ್ತೂರು: ಕೊಂಬೆಟ್ಟು ಅಟಲ್ ಉದ್ಯಾನದಲ್ಲಿ ಪ್ರತಿ ಶನಿವಾರ ಸಂಜೆ ನಡೆಯುತ್ತಿರುವ ಭಜನಾ ಕಾರ್ಯಕ್ರಮದ ವಾರ್ಷಿಕೋತ್ಸವ ಅ.8ರಂದು ಸಂಜೆ ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಮುಖ್ಯಗುರು ಆಶಾ ಬೆಳ್ಳಾರೆ ಮಾತನಾಡಿ ಭಜನೆ ಮತ್ತು ಧಾರ್ಮಿಕ ಶಿಕ್ಷಣವು ರಾಷ್ಟ್ರೀಯತೆಯನ್ನು ಬೆಳೆಸುತ್ತದೆ. ಈ ನಿಟ್ಟಿನಲ್ಲಿ ಕೊಂಬೆಟ್ಟು ಅಟಲ್ ಉದ್ಯಾನದಲ್ಲಿ ಸಂಸ್ಕಾರ ಬೆಳೆಸುವ, ಉಳಿಸುವ ಕೆಲಸವನ್ನು ಅಭಿನಂದಿಸಿದರು.
ಇದೇ ಸಂದರ್ಭದಲ್ಲಿ ಆಶಾ ಬೆಳ್ಳಾರೆ ಹಾಗೂ ಭಜನಾ ತಂಡದ ಸದಸ್ಯರನ್ನು ವಾರ್ಡ್ ಪರವಾಗಿ ಗೌರವಿಸಲಾಯಿತು. ನಗರಸಭಾ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್ ಸ್ವಾಗತಿಸಿ, ನಿವೃತ್ತ ಪ್ರಾಧ್ಯಾಪಕಿ ಪ್ರೊ. ವತ್ಸಲಾ ರಾಜ್ಞಿ ವಂದಿಸಿದರು. ಭಜನೆ ಕಾರ್ಯಕಾರಿ ಸಮಿತಿ ಸದಸ್ಯೆ ಪ್ರಭಾವತಿ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕಿ ಶ್ರೀವಿದ್ಯಾ ಜೆ ರಾವ್, ಸ್ಮಿತಾ ಬಾಳಿಗ, ಗಣೇಶ್ ಬಾಳಿಗ, ವೀಣಾ ಪೂಜಾರಿ, ಪ್ರೇಮ, ಶೋಭಾ, ಸುನೀತಾ, ರಾಧಾ ಮತ್ತು ಮಕ್ಕಳು ಹಾಗೂ ಪೋಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.