ಬೊಳುವಾರಿನಲ್ಲಿ ಸಾರ್ವಜನಿಕ ಶೌಚಾಲಯ ಉದ್ಘಾಟನೆ

0

ಪುತ್ತೂರು: ಗಾಂಧಿ ಜಯಂತಿಯ ಅಂಗವಾಗಿ ಬೊಳುವಾರು ಗೂಡ್ಸ್ ಚಾಲಕ ಮಾಲಕರಿಗೆ ನಗರಸಭಾ ವತಿಯಿಂದ ನಗರಸಭಾ ಸದಸ್ಯರಾದ ಸಂತೋಷ್ ಕುಮಾರ್ ನೇತೃತ್ವದಲ್ಲಿ ದಾನಿಗಳ ನೆರವು ಹಾಗೂ ಶ್ರಮ ದಾನದ ಮೂಲಕ ಚಾಲಕಮಾಲಕರ ಸಹಕಾರದೊಂದಿಗೆ ನಿರ್ಮಿಸಿದ ಶೌಚಾಲಯ ಘಟಕವನ್ನು ಲೋಕಾರ್ಪಣೆ ಮಾಡಲಾಯಿತು.
ನಗರಸಭೆ ಅಧ್ಯಕ್ಷ ಕೆ ಜೀವಂಧರ್ ಜೈನ್ಶೌಚಾಲಯವನ್ನು ಗೂಡ್ಸ್ ಚಾಲಕ ಮಾಲಕರಿಗೆ ಹಸ್ತಾಂತರ ಮಾಡಿದರು. ಮಾಜಿ ಪುರಸಭಾ ಅಧ್ಯಕ್ಷ ಯು ಲೋಕೇಶ್ ಹೆಗ್ಡೆ, ಪ್ರೇಮಲತಾ ರಾವ್, ದಯಾಕರ್ ಹೆಗಡೆ, ಪ್ರದೀಪ ಹೆಗಡೆ, ವಸಂತ ಆಚಾರ್ಯ, ಶ್ಯಾಮಲ, ಚಾಲಕರಾದ ಲೋಕನಾಥ್, ರಮೇಶ್, ಪಿಕಪ್ ರಮೇಶ್, ಶೇಖರ್ ಹಾಗೂ ಇತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here