ಗಂಡಿಬಾಗಿಲು ಮಸೀದಿಯಲ್ಲಿ ಈದ್-ಮಿಲಾದ್ ಸಮಾರಂಭ

0

ಸೌಹಾರ್ದತೆಯನ್ನು ಪ್ರತಿಪಾದಿಸುವ ನೆಬಿ ಸಂದೇಶ ಪಾಲನೆ ಆಗಲಿ-ಶೌಕತ್ ಅಲಿ ಫೈಝಿ
ಉಪ್ಪಿನಂಗಡಿ: ಪ್ರವಾದಿ ಮಹಮ್ಮದ್ ಪೈಗಂಬರರು ಐಕ್ಯತೆ, ಸೌಹಾರ್ದತೆ, ಸಹೋದರತೆಗೆ ಒತ್ತು ಕೊಟ್ಟವರು, ಅವರ ಸಂದೇಶ ಪಾಲನೆ ಆದರೆ ಮಾತ್ರ ನೆಬಿ ದಿನ ಆಚರಣೆ ಸಾರ್ಥಕ ಆಗಲು ಸಾಧ್ಯ ಅದರ ಹೊರತಾದ ತೋರ್ಪಡಿಕೆಯ ಆಡಂಬರ ಸಲ್ಲದು ಎಂದು ಗಂಡಿಬಾಗಿಲು ಮಸೀದಿ ಖತೀಬ್ ಅಬ್ದುಲ್ ಹಮೀದ್ ಶೌಕತ್ ಅಲಿ ಫೈಝಿ ಹೇಳಿದರು.


ಅವರು ಅ. 9ರಂದು ಗಂಡಿಬಾಗಿಲು ಕುತುಬಿಯಾ ಜುಮಾ ಮಸೀದಿಯಲ್ಲಿ ನುಜೂಮುಲ್ ಇಸ್ಲಾಂ ಯಂಗ್‌ಮೆನ್ಸ್ ವತಿಯಿಂದ ಹಮ್ಮಿಕೊಳ್ಳಲಾದ ಈದ್-ಮಿಲಾದ್ ಸಮಾರಂಭದ ಅಧ್ಯಕ್ಷತೆ ವಹಿಸಿ, ಮೆರವಣಿಗೆ ಉದ್ಘಾಟಿಸಿ ಮಾತನಾಡಿದರು.
ಗಂಡಿಬಾಗಿಲುನಿಂದ ಹೊರಟ ಮಿಲಾದ್ ಮೆರವಣಿಗೆ ಕೊಲ, ನೀರಾಜೆ ಮದ್ರಸದಲ್ಲಿ ಸಮಾಗಮಗೊಂಡು ಅಲ್ಲಿಂದ ಬಳಿಕ ಕೆಮ್ಮಾರ ಶಾಲಾ ಬಳಿ ತನಕ ಸಾಗಿ ಮರಳಿ ಬಂದು ಗಂಡಿಬಾಗಿಲು ಶಾಲಾ ತನಕ ಸಾಗಿ ಬಂದು ಮಸೀದಿ ಬಳಿ ಸಮಾಪನಗೊಳಿಸಲಾಯಿತು.
ಮೆರವಣಿಗೆ ಬಳಿಕ ಮಸೀದಿಯಲ್ಲಿ ಮೌಲೀದ್ ಪಾರಾಯಣ ನಡೆಸಲಾಯಿತು. ಆ ಬಳಿಕ ನಡೆದ ಸಭಾ ಕಾರ್‍ಯಕ್ರಮದಲ್ಲಿ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಬೆಳಿಗ್ಗೆ ನಡೆದ ಧ್ವಜಾರೋಹಣ ಕಾರ್‍ಯಕ್ರಮವನ್ನು ಯಂಗ್‌ಮೆನ್ಸ್ ಅಧ್ಯಕ್ಷ ಪಿ. ಲತೀಫ್ ನೆರವೇರಿಸಿದರು.
ಸಮಾರಂಭದಲ್ಲಿ ಮಸೀದಿ ಅಧ್ಯಕ್ಷ ಆದಂ ಹಾಜಿ, ಉಪಾಧ್ಯಕ್ಷ ಜಿ. ಮಹಮ್ಮದ್ ರಫೀಕ್, ಖಜಾಂಚಿ ಹಸೈನಾರ್ ಹಾಜಿ, ಜೊತೆ ಕಾರ್‍ಯದರ್ಶಿ ಅಬ್ದುಲ್ ರಜಾಕ್ ಮರ್‍ವೇಲ್, ಜಿ. ಅಬ್ದುಲ್ ರಜಾಕ್, ನಝೀರ್ ಪೂರಿಂಗ, ಎಸ್. ಅಬ್ದುಲ್ ರಹಿಮಾನ್, ಇಸಾಕ್ ಬೊಲುಂಬುಡ, ಅಬ್ದುಲ್ ರಜಾಕ್ ಎಸ್., ನಿಸಾರ್, ಝಕರಿಯಾ ನೇರೆಂಕಿ, ಅಬ್ದುಲ್ ರಹಿಮಾನ್ ಅದ್ದ, ಅಬ್ಬಾಸ್ ಹಾಜಿ ಪೂರಿಂಗ, ಗಂಡಿಬಾಗಿಲು ನುಜೂಮುಲ್ ಇಸ್ಲಾಂ ಯಂಗ್‌ಮೆನ್ಸ್ ಅಧ್ಯಕ್ಷ ಪಿ. ಅಬ್ದುಲ್ ಲತೀಫ್, ಕಾರ್‍ಯದರ್ಶಿ ಝಿಯಾದ್, ಸದರ್ ಮುಅಲ್ಲಿಂ ಅಬ್ದುಲ್ ರಹಿಮಾನ್ ಫೈಝಿ, ಯೂಸುಫ್ ಅಲ್ ಖಾಸಿಮಿ, ಇಬ್ರಾಹಿಂ ಮುಸ್ಲಿಯಾರ್, ಎಸ್.ಕೆ.ಎಸ್.ಎಸ್.ಎಫ್. ಪದಾಧಿಕಾರಿಗಳಾದ ಆಶಿಫ್ ಜಿ.ಎಂ., ರಾಹಿಲ್ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here