ರಾಜ್ಯ ಮಟ್ಟದ ಚೆಸ್ ಟೂರ್ನಮೆಂಟ್: ಫಿಲೋಮಿನಾ ಕಾಲೇಜಿನ ಮನ್ವಿತ್ ಕೆ ರಾಷ್ಟ್ರ ಮಟ್ಟಕ್ಕೆ

0

ಪುತ್ತೂರು: ಬೆಂಗಳೂರಿನ ಬಿಡದಿ ರಾಮನಗರದಲ್ಲಿ ಅ.7 ರಂದು ಜರಗಿದ ರಾಜ್ಯ ಮಟ್ಟದ ಚೆಸ್ ಟೂರ್ನಮೆಂಟಿನಲ್ಲಿ ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ದರ್ಬೆ ಫಿಲೋನಗರದ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಪ್ರಥಮ ವಿಜ್ಞಾನ ವಿಭಾಗದ ವಿದ್ಯಾರ್ಥಿ ಮನ್ವಿತ್ ಕಣಜಾಲುರವರು ಪ್ರಥಮ ಸ್ಥಾನ ಗಳಿಸಿದ್ದು ರಾಷ್ಟ್ರ ಮಟ್ಟದ ಚೆಸ್ ಟೂರ್ನಮೆಂಟಿಗೆ ಅರ್ಹತೆ ಪಡೆದಿದ್ದಾರೆ.


ರಾಷ್ಟ್ರ ಮಟ್ದದ ಚೆಸ್ ಪಂದ್ಯಾವಳಿಯು ಅಸ್ಸಾಂನಲ್ಲಿ ಜರುಗಲಿದೆ. ಪದವಿ ಪೂರ್ವ ಶಿಕ್ಷಣ ಇಲಾಖೆ, ಜ್ಞಾನವಿಕಾಸ ವಿದ್ಯಾ ಸಂಘ ಬಿಡದಿ ಮತ್ತು ಶ್ರೀ ಬಸವೇಸ್ವರ ಸ್ವಾಮಿ ಸಂಯುಕ್ತ ಪದವಿ ಪೂರ್ವ ಕಾಲೇಜು ಬಿಡದಿ-ರಾಮನಗರ ತಾಲೂಕು ಮತ್ತು ಜಿಲ್ಲೆ ಇವುಗಳ ಜಂಟಿ ಆಶ್ರಯದಲ್ಲಿ ಪಂದ್ಯಾವಳಿಯು ಜರಗಿರುವುದಾಗಿದೆ. ಮನ್ವಿತ್ ಕಣಜಾಲುರವರಿಗೆ ಸತ್ಯಪ್ರಸಾದ್ ಕೋಟೆ, ಅರವಿಂದ ಶಾಸ್ತ್ರಿ, ಸ್ಟ್ಯಾನಿ ಜಿ.ಎರವರು ತರಬೇತಿ ನೀಡಿರುತ್ತಾರೆ. ಮನ್ವಿತ್ ಕಣಜಾಲುರವರು ಮೊಟ್ಟೆತ್ತಡ್ಕ ನಿವಾಸಿ ಪ್ರೊ|ದಾಮೋದರ್ ಕಣಜಾಲು ಹಾಗೂ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಭೌತಶಾಸ್ತ್ರ ವಿಭಾಗದ ಉಪನ್ಯಾಸಕಿರಶ್ಮಿ ಪಿ.ಎಸ್ ರವರ ಪುತ್ರ.

LEAVE A REPLY

Please enter your comment!
Please enter your name here