ನೆಲ್ಯಾಡಿ ಶ್ರೀರಾಮ ವಿದ್ಯಾಲಯಕ್ಕೆ 3 ಚಿನ್ನ, 1 ಬೆಳ್ಳಿ, 4 ಕಂಚಿನ ಪದಕ
ನೆಲ್ಯಾಡಿ: ವಿದ್ಯಾಭಾರತಿ ಕರ್ನಾಟಕ ದಕ್ಷಿಣ ಕನ್ನಡ ಜೆಲ್ಲೆ ಇದರ ವತಿಯಿಂದ ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಮೊದಲ ಬಾರಿಗೆ ಭಾಗವಹಿಸಿದ ನೆಲ್ಯಾಡಿ ಶ್ರೀರಾಮ ವಿದ್ಯಾಲಯದ ವಿದ್ಯಾರ್ಥಿಗಳು 3 ಚಿನ್ನದ ಪದಕ, 1 ಬೆಳ್ಳಿಪದಕ ಹಾಗೂ ೪ ಕಂಚಿನ ಪದಕ ಪಡೆದುಕೊಂಡು ಮಿಂಚಿದ್ದಾರೆ.
ಬಾಲವರ್ಗದ ಉದ್ದ ಜಿಗಿತದಲ್ಲಿ ಮನೀಶ್ ಬಿ ಶೆಟ್ಟಿ, ಕಿಶೋರ ವರ್ಗದ ಎತ್ತರಜಿಗಿತದಲ್ಲಿ ಗುರುಕಿರಣ್ ಹಾಗೂ ಬಾಲವರ್ಗದ 100 ಮೀ.ಓಟದಲ್ಲಿ ಮನೀಶ್ ಬಿ ಶೆಟ್ಟಿ ಚಿನ್ನದ ಪದಕ ಪಡೆದುಕೊಂಡಿದ್ದಾರೆ. ಕಿಶೋರ ವರ್ಗದ 100 ಮೀಟರ್ ಓಟದಲ್ಲಿ ಗುರುಕಿರಣ್ ಬೆಳ್ಳಿಪದಕ ಪಡೆದುಕೊಂಡಿದ್ದಾರೆ. ಬಾಲವರ್ಗದ 100* 4 ರಿಲೇಯಲ್ಲಿ ಮನೀಶ್, ಚಿರಾಯು, ಸುಶಾಂತ್, ಅಖಿಲ್‌ಗೆ ಕಂಚಿನ ಪದಕ, ಕಿಶೋರ ವರ್ಗದ 1500 ಮೀಟರ್ ಓಟದಲ್ಲಿ ಚೇತನ್ ಕಂಚಿನ ಪದಕ. ೪೦೦ ಮೀಟರ್ ಓಟದಲ್ಲಿ ಭೂಮಿಕಾ ಕಂಚಿನ ಪದಕ, 800 ಮೀಟರ್ ಓಟದಲ್ಲಿ ಹರ್ಷಾಲಿ ಕಂಚಿನ ಪದಕ ಪಡೆದುಕೊಂಡಿದ್ದಾರೆ. 2 ಚಿನ್ನದ ಪದಕ ಪಡೆದ ಮನೀಷ್ ಬಿ ಶೆಟ್ಟಿ ಮತ್ತು 1 ಚಿನ್ನ ಹಾಗೂ 1 ಬೆಳ್ಳಿ ಪದಕ ಪಡೆದ ಗುರುಕಿರಣ್‌ರವರು ಅ.11,12 ಹಾಗೂ 13ರಂದು ಬಳ್ಳಾರಿಯಲ್ಲಿ ನಡೆಯುವ ರಾಜ್ಯ(ಪ್ರಾಂತ) ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸಲು ಅರ್ಹತೆ ಪಡೆದುಕೊಂಡಿದ್ದಾರೆ ಎಂದು ಶಾಲಾ ಮುಖ್ಯಶಿಕ್ಷಕರು ತಿಳಿಸಿದ್ದಾರೆ.