ರೆಂಜಲಾಡಿ-ಕೂಡುರಸ್ತೆ ಮಸೀದಿಯಲ್ಲಿ ಮಿಲಾದ್ ಸಂಭ್ರಮ

0

ದಫ್ ಪ್ರದರ್ಶನದೊಂದಿಗೆ ಕಲ್ಪಣೆ ವರೆಗೆ ಕಾಲ್ನಡಿಗೆ ಜಾಥಾ

ಪುತ್ತೂರು: ಬದ್ರಿಯಾ ಜುಮಾ ಮಸೀದಿ ರೆಂಜಲಾಡಿ ಹಾಗೂ ಕೂಡುರಸ್ತೆ ರಿಫಾಯಿಯ್ಯಾ ಜುಮಾ ಮಸೀದಿ ವತಿಯಿಂದ ಕಾಲ್ನಡಿಗೆ ಜಾಥಾ ಕಲ್ಪಣೆ ಕೆ.ಜಿ.ಎನ್ ಕಾಂಪ್ಲೆಕ್ಸ್ ವರೆಗೆ ನಡೆಯಿತು.

ಎರಡೂ ಮಸೀದಿಯ ಅಧಿನಕ್ಕೊಳಪಟ್ಟ ಸಂಘ ಸಂಸ್ಥೆಯ ಪದಾಧಿಕಾರಿಗಳು, ಸದಸ್ಯರು, ಜಮಾಅತರು ಭಾಗವಹಿಸಿದ್ದರು. ಮದರಸ ವಿದ್ಯಾರ್ಥಿಗಳ ಆಕರ್ಷಕ ದಫ್ ಪ್ರದರ್ಶನದೊಂದಿಗೆ ನಡೆದ ಜಾಥಾವು ಕಲ್ಪಣೆಗೆ ಬಂದು ಅಲ್ಲಿ ಕೆಲ ಹೊತ್ತು ರೆಂಜಲಾಡಿ ಮತ್ತು ಕೂಡುರಸ್ತೆ ಮದರಸದ ವಿದ್ಯಾರ್ಥಿಗಳ ದಫ್ ಪ್ರದರ್ಶನ ನಡೆಯಿತು. ಆಗಮಿಸಿದವರಿಗೆ ತಂಪು ಪಾನೀಯ, ಸಿಹಿ ತಿಂಡಿ ಮತ್ತು ಐಸ್‌ಕ್ರೀಂ ವ್ಯವಸ್ಥೆ ಮಾಡಲಾಗಿತ್ತು.

ರೆಂಜಲಾಡಿ ಮಸೀದಿಯ ಖತೀಬ್ ರಫೀಕ್ ಫೈಝಿ ಮಾಡನ್ನೂರು, ಕೂಡುರಸ್ತೆ ಖತೀಬ್ ಇಬ್ರಾಹಿಂ ಫೈಝಿ ಮಾಡನ್ನೂರು ಸಹಿತ ನೂರಾರು ಮಂದಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here