ಖೋಖೋ: ನೆಲ್ಯಾಡಿ ಶ್ರೀರಾಮ ವಿದ್ಯಾಲಯದ ಬಾಲಕಿಯರ ತಂಡ ರಾಷ್ಟ್ರಮಟ್ಟಕ್ಕೆ ಆಯ್ಕೆ

0

ನೆಲ್ಯಾಡಿ: ವಿದ್ಯಾಭಾರತಿ ಕರ್ನಾಟಕ ಇದರ ವತಿಯಿಂದ ಬೀದರ್‌ನಲ್ಲಿ ನಡೆದ ರಾಜ್ಯ ಹಾಗೂ ಕ್ಷೇತ್ರ ಮಟ್ಟದ ಖೋ ಖೋ ಪಂದ್ಯಾಕೂಟದಲ್ಲಿ ಭಾಗವಹಿಸಿದ್ದ ನೆಲ್ಯಾಡಿ ಶ್ರೀರಾಮ ವಿದ್ಯಾಲಯದ ಬಾಲಕಿಯರ ತಂಡ ಗೆಲುವು ಸಾಧಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದೆ.


ವಿದ್ಯಾರ್ಥಿನಿಯರಾದ ಸಾನ್ವಿ, ಧನ್ಯ, ಅದ್ವಿಕಾ, ಪ್ರತಿಕ್ಷಾ ಪಿ, ಯೋಕ್ಷಿತ, ಕುಸ್ಮಿತಾ, ನಿಖಿತಾ, ಆಶಿಕಾ, ಹರ್ಷಿತ, ಚೈತನ್ಯ ಎಚ್, ಪ್ರತಿಕ್ಷಾ, ಮೇಘನಾರವರು ತಂಡವನ್ನು ಪ್ರತಿನಿಧಿಸಿದ್ದರು. ಸಂತೋಷ್ ಕೊಲ್ಯೊಟ್ಟುರವರು ತರಬೇತಿ ನೀಡಿದ್ದರು. ರಾಷ್ಟ್ರಮಟ್ಟದ ಪಂದ್ಯ ಮಧ್ಯಪ್ರದೇಶದಲ್ಲಿ ನಡೆಯಲಿದೆ.

LEAVE A REPLY

Please enter your comment!
Please enter your name here