ಸಂಗ್ರಹಿಸಿದ ಹಣ ಫಲಾನುಭವಿಗೆ ಹಸ್ತಾಂತರ

0

ಪುತ್ತೂರು: ಸಹಾಯಹಸ್ತ ಲೋಕಸೇವಾ ಟ್ರಸ್ಟ್‌ನ ನೇತೃತ್ವದಲ್ಲಿ ನೊಂದವರ ಬಾಳಿಗೆ ಆಸರೆ ಇದರ ಸಹಭಾಗಿತ್ವದಲ್ಲಿ ನವರಾತ್ರಿ ಸಂದರ್ಭದಲ್ಲಿ ವಿಶೇಷ ವೇಷ ಧರಿಸಿ ಪುತ್ತೂರು ಪೇಟೆಯಲ್ಲಿ ಸಂಗ್ರಹಿಸಿದ ಹಣವನ್ನು ಫಲಾನುಭವಿ ಬಾಲಕನಿಗೆ ತಹಸೀಲ್ದಾರ್ ನಿಸರ್ಗಪ್ರಿಯರವರು ಅ. 9ರಂದು ಟ್ರಸ್ಟ್‌ನ ಕಚೇರಿಯಲ್ಲಿ ಹಸ್ತಾಂತರಿಸಿದರು.

ರಕ್ತನಾಳದ ಸಮಸ್ಯೆಯಿಂದ ಬಳಲುತ್ತಿರುವ ಬಂಟ್ವಾಳ ತಾಲೂಕು ರಾಯಿಯ ಚಿರಾಗ್ ಎಂಬ ಬಾಲಕನ ಚಿಕಿತ್ಸೆಗೆ ನೆರವಾಗುವ ಉದ್ದೇಶದಿಂದ 47 ಸಾವಿರ ರೂ. ಹಾಗೂ ಆಹಾರ ಸಾಮಾಗ್ರಿಗಳನ್ನು ಹಸ್ತಾಂತರಿಸಲಾಯಿತು.

ತಹಸೀಲ್ದಾರ್ ನಿಸರ್ಗಪ್ರಿಯ ಮಾತನಾಡಿ, ನೊಂದವರಿಗೆ ಸಹಾಯ ಮಾಡುವ ಕಾರ್ಯ ಉತ್ತಮ. ಇನ್ನಷ್ಟು ಮಂದಿಗೆ ಸಹಾಯ ಮಾಡುವಂತಾಗಲಿ ಎಂದು ಹೇಳಿ ಶುಭಹಾರೈಸಿದರು.

ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್ ಮಾತನಾಡಿ, ಟ್ರಸ್ಟ್ ಉತ್ತಮ ಕಾರ್ಯ ನಡೆಸುತ್ತಿದೆ. ಮುಂದೆ ಯಾವುದೇ ರೀತಿಯ ಸಹಾಯದ ಅಗತ್ಯವಿದ್ದಾಗ, ಕೈಲಾದ ಸಹಾಯ ಮಾಡುತ್ತೇನೆ ಎಂದು ಭರವಸೆ ನೀಡಿದರು.

ನೊಂದವರ ಬಾಳಿಗೆ ಆಸರೆ ತಂಡದ ಅಣ್ಣಪ್ಪ ಮಾತನಾಡಿ, ಸಮಾಜದಲ್ಲಿ ನೊಂದವರಿಗೆ ಸಹಾಯ ಮಾಡಬೇಕೆಂಬ ಮನಸ್ಸಿತ್ತು. ಆದರೆ ಇಂತಹ ಕಾರ್ಯಕ್ಕೆ ಇಳಿದಾಗ ಒಬ್ಬನಿಂದ ಏನೂ ಮಾಡಲು ಸಾಧ್ಯವಿಲ್ಲ. ಇದನ್ನು ಸ್ನೇಹಿತರ ಜೊತೆ ಹೇಳಿದಾಗ ಧೈರ್ಯ ತುಂಬಿದರು. ಮುಂದೆ ಲೋಕಸೇವಾ ಟ್ರಸ್ಟ್ ದೊಡ್ಡ ಪ್ರಮಾಣದ ಸಹಕಾರ ನೀಡಿತು ಎಂದು ನೆನಪಿಸಿಕೊಂಡರು.

ಟ್ರಸ್ಟ್‌ನ ಅಧ್ಯಕ್ಷ ಡಿ.ಎಸ್. ಒಡ್ಯ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಸಲಹೆಗಾರ ಉದಯ್, ಕಾರ್ಯದರ್ಶಿ ಮನೋಹರ್ ಉಪಸ್ಥಿತರಿದ್ದರು. ಕೋಶಾಽಕಾರಿ ಗಿರಿಶ್ಯಾಂ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here