ಪುತ್ತೂರು: ಎಪಿಎಂಸಿ ರಸ್ತೆಯ ಕ್ರಿಸ್ಟೋಫರ್ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ಕ್ರಿಸ್ಟೋಫರ್ ಸಮೂಹ ಸಂಸ್ಥೆಗಳ ಕ್ರಿಸ್ಟೋಫರ್ ಫಿಟ್ನೆಸ್ ಸೆಂಟರ್ ನಲ್ಲಿ ಹಿರಿಯರಿಗೆ ಹಾಗೂ ಮಕ್ಕಳಿಗೆ ಕರಾಟೆ ಹಾಗೂ ಸ್ವಯಂ ರಕ್ಷಣಾ ಮೂಲಗಳ ಬಗ್ಗೆ ಉಚಿತ ತರಬೇತಿ ಕಾರ್ಯಕ್ರಮ ಅ.8 ರಂದು ನಡೆಯಿತು.
ಕರಾಟೆ ಶಿಕ್ಷಕರಾದ ಸುರೇಶ್ ಹಾಗೂ ನವೀನ್ ಆತ್ಮ ರಕ್ಷಣೆ, ಏಕಾಗ್ರತೆಯ ಕರಾಟೆ ಕಲೆ ಕರಗತವಾದಲ್ಲಿ ಶಿಸ್ತುಬದ್ಧ ಜೀವನಕ್ಕೆ ನಾಂದಿ ಹಾಡಬಲ್ಲುದು. ಮಕ್ಕಳನ್ನು ಮೊಬೈಲಿನಿಂದ ದೂರವಿರಿಸಲು ಸಹಕಾರಿಯಾಗುವ ಇಂತಹ ತರಬೇತಿ ಶಿಬಿರಗಳಲ್ಲಿ ಮಕ್ಕಳನ್ನು ಹೆಚ್ಚು ತೊಡಗಿಸಿಕೊಂಡಲ್ಲಿ ಮೆದುಳಿನ ಚಿಂತನಾ ಶಕ್ತಿ ವೃದ್ಧಿಸುವಲ್ಲಿ ಸಹಕಾರಿಯಾಗುತ್ತದೆ ಎಂದು ಹೇಳಿ ಕರಾಟೆ ಹಾಗೂ ಸ್ವಯಂ ರಕ್ಷಣಾ ಕಲೆಗಳ ಬಗ್ಗೆ ಪ್ರಾತ್ಯಕ್ಷಿಕೆಯ ಮೂಲಕ ನಮ್ಮನ್ನು ನಾವು ರಕ್ಷಣೆ ಮಾಡಿಕೊಳ್ಳೋದು ಹೇಗೆ ಎಂಬುದರ ಕುರಿತು ಮಾಹಿತಿ ನೀಡಿದರು.