ಗೌರವಾಧ್ಯಕ್ಷರಾಗಿ ಡಾ.ಹರಿಕೃಷ್ಣ ಪಾಣಾಜೆ, ಅಧ್ಯಕ್ಷರಾಗಿ ಅರುಣ್ ಕುಮಾರ್ ಪುತ್ತಿಲ, ಪ್ರ.ಕಾರ್ಯದರ್ಶಿಯಾಗಿ ಗಣೇಶ್ ಕೋಶಾಧಿಕಾರಿಯಾಗಿ ಅನಿಲ್ ಕುಮಾರ್ ಕಣ್ಣಾರ್ನೂಜಿ
ಪುತ್ತೂರು: ಮುಂಡೂರು ಗ್ರಾಮದ ಉದಯಗಿರಿಯಲ್ಲಿರುವ ಪುರಾತನ ಶ್ರೀ ವಿಷ್ಣುಮೂರ್ತಿ ದೈವಸ್ಥಾನದ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷರಾಗಿ ಎಸ್ಡಿಪಿ ರೆಮಿಡೀಸ್ನ ಡಾ.ಹರಿಕೃಷ್ಣ ಪಾಣಾಜೆ, ಅಧ್ಯಕ್ಷರಾಗಿ ಹಿಂದು ಸಂಘಟನೆಗಳ ಮುಖಂದ ಅರುಣ್ ಕುಮಾರ್ ಪುತ್ತಿಲ, ಪ್ರಧಾನ ಕಾರ್ಯದರ್ಶಿಯಾಗಿ ಗಣೇಶ್ ಬೊಳ್ಳಗುಡ್ಡೆ ಹಾಗೂ ಕೋಶಾಧಿಕಾರಿಯಾಗಿ ಅನಿಲ್ ಕುಮಾರ್ ಕಣ್ಣಾರ್ನೂಜಿಯವರು ಆಯ್ಕೆಯಾಗಿದ್ದಾರೆ.
ದೈವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಭಾಸ್ಕರ ಆಚಾರ್ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಮಿತಿಯನ್ನು ಆಯ್ಕೆ ಮಾಡಲಾಯಿತು. ಸಮಿತಿಯ ಗೌರವ ಸಲಹೆಗಾರರಾಗಿ ಕತ್ತಾರ್ ಉದ್ಯಮಿ ರವಿ ಶೆಟ್ಟಿ ನೇಸರಕಂಪ, ಮುರಳೀಧರ ಭಟ್ ಬಂಗಾರಡ್ಕ, ಇಂಜಿನಿಯರ್ ಪ್ರಸನ್ನ ಭಟ್ ಪಂಚವಟಿ, ಉದ್ಯಮಿ ಜಯಂತ ನಡುಬೈಲು, ರಘುನಾಥ ಶೆಟ್ಟಿ ಪೊನೋಣಿ, ವಸಂತ ಶೆಟ್ಟಿ ಶಿಬರ, ಶೀನಪ್ಪ ಪೂಜಾರಿ ಮುಲಾರು, ರವೀಂದ್ರ ರೈ ಬಳ್ಳಮಜಲುರವರನ್ನು ಆಯ್ಕೆ ಮಾಡಲಾಯಿತು. ಸಮಿತಿ ಸದಸ್ಯರಾಗಿ ಬಾಲಕೃಷ್ಣ ರೈ ಪಂಜಳ, ಹರೀಶ ಉದಯಗಿರಿ, ರಾಮ ದಂಡ್ಯಾನಕುಕ್ಕು, ಸೀತಾರಾಮ ಗೌಡ ಅಂಬಟ, ಉಮೇಶ್ ಗೌಡ ಗುತ್ತಿನಪಾಲುರವರನ್ನು ಆಯ್ಕೆ ಮಾಡಲಾಯಿತು.
ಜನವರಿಯಲ್ಲಿ ಬ್ರಹ್ಮಕಲಶ:
ವಿಷ್ಣುಮೂರ್ತಿ ದೈವಸ್ಥಾನ, ಗುಳಿಗನ ಕಟ್ಟೆ, ಆವರಣಗೋಡೆ, ಕಚೇರಿ ಕಟ್ಟಡ ನಿರ್ಮಾಣಕ್ಕೆ ನೀಲ ನಕಾಶೆ ಸಿದ್ದಪಡಿಸಲಾಗಿದ್ದು ಸುಮಾರು ರೂ.೫೦ಲಕ್ಷ ವೆಚ್ಚದಲ್ಲಿ ಜೀರ್ಣೋದ್ಧಾರ ಕಾಮಗಾರಿಗಳು ನಡೆಯಲಿದೆ. ಭಕ್ತಾದಿಗಳಿಂದ ರೂ.10ಲಕ್ಷ ದೇಣಿಗೆಯ ವಾಗ್ದಾನವನ್ನು ಸಭೆಯಲ್ಲಿ ಬಂದಿರುತ್ತದೆ. ದೈವಸ್ಥಾನದ ಗರ್ಭಗುಡಿಗೆ ಕಲ್ಲಿನ ಕೆತ್ತನೆಯ ದಾರಂದವನ್ನು ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿಯ ವತಿಯಿಂದ ನಿರ್ಮಿಸಿಕೊಡುವುದಾಗಿ ಸಭೆಯಲ್ಲಿ ಘೋಷಣೆ ಮಾಡಿದರು. ಪ್ರಶ್ನಾಚಿಂತನೆಯಲ್ಲಿ ಕಂಡು ಬಂದಿರುವ ವಿವಿಧ ಪ್ರಾಯಶ್ಚಿತ್ತ ಕಾರ್ಯಗಳನ್ನು ನೆರವೇರಿಸಿಕೊಂಡು ಜೀರ್ಣೋದ್ಧಾರ ಕಾಮಗಾರಿಗಳು ಭರದಿಂದ ಸಾಗುತ್ತಿದೆ. 2023ರ ಜನವರಿ 1ರಂದು ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮತ್ತು ವಿಷ್ಣುಮೂರ್ತಿ ದೈವದ ಒತ್ತೆಕೋಲ ಹಾಗೂ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ಸಮಿತಿಯವರು ತಿಳಿಸಿದ್ದಾರೆ.