ವಿಟ್ಲ: ಮರಳು ಅಕ್ರಮ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ವಿಟ್ಲ ಠಾಣಾ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಮೈಸೂರಿನ ಪಿರಿಯಾಪಟ್ಟಣ ಕುಶಾಲನಗರದ ಬೈಲುಕುಪ್ಪೆ ನಿವಾಸಿ ಅಪ್ಪುಕುಟ್ಟಿರವರ ಪುತ್ರ ಮೋಹನ ಬಂಧಿತ ಆರೋಪಿಯಾಗಿದ್ದಾರೆ.
2017 ಕ್ಕೆ ಪ್ರಕರಣ ನಡೆದಿತ್ತು. ಆ ಬಳಿಕ ನ್ಯಾಯಾಯಲದಿಂದ ಜಾಮೀನಿನಲ್ಲಿ ಹೊರಬಂದಿದ್ದ ಆರೋಪಿ ಬಳಿಕದ ದಿನಗಳಲ್ಲಿ ತನಿಖೆಗೆ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ನ್ಯಾಯಾಲಯವು ಆರೋಪಿಯ ಪತ್ತೆಗೆ ವಾರಂಟ್ ಜಾರಿಗೊಳಿಸಿತ್ತು. ವಿಟ್ಲ ಠಾಣಾ ಇನ್ಸ್ ಪೆಕ್ಟರ್ ಹೆಚ್. ಈ. ನಾಗರಾಜ್ರವರ ಮಾರ್ಗದರ್ಶನ ದಲ್ಲಿ ಎ.ಎಸ್.ಐ. ಜಯರಾಮ, ಸಿಬ್ಬಂದಿಗಳಾದ ಪುನೀತ್, ವಿಶ್ವನಾಥರವರು ಮೈಸೂರಿನ ಮನೆಯಿಂದ ಆರೋಪಿಯನ್ನು ಬಂಽಸಿ ಠಾಣೆಗೆ ಕರೆತಂದು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ನ್ಯಾಯಾಲಯವು ಆರೋಪಿಗೆ 10000 ರೂ. ದಂಡ ವಿಧಿಸಿ ಬಿಡುಗಡೆ ಮಾಡಿದೆ.