ಉಪ್ಪಿನಂಗಡಿ: ಕೆಲಸಕ್ಕೆಂದು ಮನೆಯಿಂದ ತೆರಳಿದ ವೃದ್ಧರೋರ್ವರು ವಾಪಸ್ ಮನೆಗೆ ಬಾರದೇ ನಾಪತ್ತೆಯಾದ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 34 ನೆಕ್ಕಿಲಾಡಿ ಗ್ರಾಮದ ಸನ್ಯಾಸಿಗುಡ್ಡೆ ನಿವಾಸಿ ಚೆನ್ನಪ್ಪ ನಾಯ್ಕ (60) ನಾಪತ್ತೆಯಾದವರು. ಈ ಬಗ್ಗೆ ಇವರ ಮಗ ಕೇಶವ ಎಸ್. ಎಂಬವರು ಪೊಲೀಸ್ ದೂರು ನೀಡಿದ್ದಾರೆ. ಕೂಲಿ ಕೆಲಸಕ್ಕೆ ಹೋಗುತ್ತಿರುವ ತನ್ನ ತಂದೆ ಸೆ.25ರಂದು ಸಂಜೆ ಸುಮಾರು 4ಗಂಟೆಗೆ ತನ್ನ ತಾಯಿಯಲ್ಲಿ ನಾನು ಕೆಲಸಕ್ಕೆ ದೂರ ಹೋಗುವುದು. ಎರಡು- ಮೂರು ದಿನ ಬರುವುದಿಲ್ಲ ಎಂದು ಮೊಬೈಲನ್ನು ತಾಯಿಯ ಬಳಿ ಕೊಟ್ಟು ತೆರಳಿದವರು ಈವರೆಗೆ ಮನೆಗೆ ವಾಪಸ್ ಬಾರದೆ ನಾಪತ್ತೆಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.