ಬನ್ನೂರು ಗ್ರಾ.ಪಂ ಮಾಜಿ ಉಪಾಧ್ಯಕ್ಷ ಜಿನ್ನಪ್ಪ ಗೌಡ ಕೊಲ್ಯ ನಿಧನ

0

ಪುತ್ತೂರು: ಚಿಕ್ಕಮುಡ್ನೂರು ಗ್ರಾಮದ ಕೊಲ್ಯ ಪೊಡಿಯ ಗೌಡರವರ ಪುತ್ರ, ಬಿಜೆಪಿ ಹಿರಿಯ ಕಾರ್ಯಕರ್ತ ಬನ್ನೂರು ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷರಾಗಿದ್ದ ಜಿನ್ನಪ್ಪ ಗೌಡ(53ವ.)ರವರು ಅ.14ರಂದು ಅಸೌಖ್ಯದಿಂದ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಜಿನ್ನಪ್ಪ ಗೌಡರವರು ಮಂಗಳೂರು ಇಂಡಿಯಾನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅ.14ರಂದು ಮತ್ತೆ ಉಲ್ಬಣಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಚಿಕಿತ್ಸೆಗೆ ಸ್ಪಂಧಿಸದೇ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.

ಜಿನ್ನಪ್ಪ ಗೌಡರವರು, ಚಿಕ್ಕಮುಡ್ನೂರು ಬಿಜೆಪಿ ಹಿರಿಯ ಕಾರ್ಯಕರ್ತರಾಗಿ, ಡಿ ವಿ ಸದಾನಂದ ಗೌಡ ಅವರ ಅವಧಿಯಲ್ಲೇ ಪಕ್ಷಕ್ಕಾಗಿ ದುಡಿದವರು. ಕೃಷ್ಣನಗರ ಹಿ.ಪ್ರಾ ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷರಾಗಿ, ಕೆಮ್ಮಾಯಿ ವಿಷ್ಣು ಯುವಕ ಮಂಡಲದ ಸದಸ್ಯರಾಗಿ, ಕೆಮ್ಮಾಯಿ ವಿಷ್ಣುಮೂರ್ತಿ ದೇವಸ್ಥಾನ, ಬೀರಿಗ ಅಂಗನವಾಡಿ, ಪುಳುವಾರು ಛಾವಡಿ ಗ್ರಾಮ ದೈವಸ್ಥಾನದ ಸಮಿತಿಗಳಲ್ಲಿ ಸಕ್ರಿಯವಾಗಿ ಸೇವೆ ಸಲ್ಲಿಸಿದ್ದರು.

ಮೃತರು ಪತ್ನಿ ಲೀಲಾವತಿ, ಪುತ್ರಿಯರಾದ ಅಶ್ಮಿಕಾ ಹಾಗೂ ಸುಶ್ಮಿತಾರವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here