ನ.27 : ಸವಣೂರಿನಲ್ಲಿ ಜಗನ್ನಾಥ ಬಸ್ತಿ ಸ್ಮರಣಾರ್ಥ ರಾಜ್ಯಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ,ಪೂರ್ವಭಾವಿ ಸಭೆ

0

ಸವಣೂರು : ಸವಣೂರು ಯುವಕ ಮಂಡಲ,ಎಸ್.ಜೆ.ಸಿ. ಸವಣೂರು ಇದರ ಸಕ್ರೀಯ ಸದಸ್ಯ ಕರ್ತವ್ಯದಲ್ಲಿದ್ದಾಗ ಹೃದಯಾಘಾತದಿಂದ ನಿಧನರಾದ ಪೊಲೀಸ್ ಹೆಡ್ ಕಾನ್ಸ್‌ಟೇಬಲ್ ಸವಣೂರಿನ ಜಗನ್ನಾಥ ಬಸ್ತಿ ಅವರ ಸ್ಮರಣಾರ್ಥ ನ.27ರಂದು ಸವಣೂರು ಸರಕಾರಿ ಉನ್ನತೀಕರಿಸಿದ ಹಿ.ಪ್ರಾ.ಶಾಲಾ ಕ್ರೀಡಾಂಗಣದಲ್ಲಿ ರಾಜ್ಯಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ ನಡೆಸುವ ಕುರಿತು ಪೂರ್ವಭಾವಿ ಸಭೆಯು ಸವಣೂರು ಯುವಕ ಮಂಡಲದಲ್ಲಿ ನಡೆಯಿತು.

ಕಬಡ್ಡಿ ಪಂದ್ಯಾಟವು ಸವಣೂರು ಯುವಕ ಮಂಡಲ, ಎಸ್.ಜೆ.ಸಿ ಸವಣೂರು, ಹಳೆ ವಿದ್ಯಾರ್ಥಿ ಸಂಘ ಸವಣೂರು ಹಿ.ಪ್ರಾ.ಶಾಲೆಯ ಆಶ್ರಯದಲ್ಲಿ ನಡೆಯಲಿದ್ದು, ಕಾರ್ಯಕ್ರಮದ ಆಯೋಜನೆ ಕುರಿತು ಚರ್ಚಿಸಲಾಯಿತು. ಸಭೆಯಲ್ಲಿ ಯುವಕ ಮಂಡಲದ ಮಾಜಿ ಅಧ್ಯಕ್ಷ,ಎಪಿಎಂಸಿ ಮಾಜಿ ಅಧ್ಯಕ್ಷ ದಿನೇಶ್ ಮೆದು, ಸುಳ್ಯ ಕ್ಷೇತ್ರದ ಅಕ್ರಮ ಸಕ್ರಮ ಸಮಿತಿ ಸದಸ್ಯ ರಾಕೇಶ್ ರೈ ಕೆಡೆಂಜಿ, ಯುವಕ ಮಂಡಲದ ಮಾರ್ಗದರ್ಶಕ ಗಿರಿಶಂಕರ ಸುಲಾಯ, ರಾಜ್ಯ ಯುವಜನ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸುರೇಶ್ ರೈ ಸೂಡಿಮುಳ್ಳು, ಸವಣೂರು ಹಾಲು ಉತ್ಪಾದಕರ ಸಹಕಾರ ಸಂಘದ ಮಾಜಿ ಅಧ್ಯಕ್ಷ ಸುಪ್ರಿತ್ ರೈ ಖಂಡಿಗ, ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ತಾರಾನಾಥ ಕಾಯರ್ಗ, ಮೋಹನ್ ದೇವಾಡಿಗ, ಗಂಗಾಧರ ಪೆರಿಯಡ್ಕ, ದಯಾನಂದ ಮೆದು, ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಚೇತನ್ ಕುಮಾರ್ ಕೋಡಿಬೈಲು, ಯುವಕ ಮಂಡಲದ ಮಾಜಿ ಕಾರ್ಯದರ್ಶಿಗಳಾದ ಬಾಲಚಂದ್ರ ಕೆ., ರಘು ಎಸ್., ಸತೀಶ್ ಬಲ್ಯಾಯ ಕೆ., ಪ್ರವೀಣ್ ಚೆನ್ನಾವರ, ಸದಸ್ಯರಾದ ಕೀರ್ತನ್ ಕೋಡಿಬೈಲು, ಕಿರಣ್ ಕೆ., ವಿನಯ ಕುಮಾರ್, ಧನುಷ್ ಶೆಟ್ಟಿ,ತೇಜಸ್ ಕೆ., ಪ್ರಸನ್ನ, ನಿಹಾರ್, ಪವನ್ ಕುಮಾರ್, ರಂಜಿತ್, ತೇಜಸ್, ಪ್ರಕಾಶ್ ಕೆಡೆಂಜಿ, ಹಿತೇಶ್ ಮೊದಲಾದವರಿದ್ದರು.

ಸವಣೂರು ಯುವಕ ಮಂಡಲದ ಅಧ್ಯಕ್ಷ ಪ್ರಕಾಶ್ ಮಾಲೆತ್ತಾರು ಸ್ವಾಗತಿಸಿ,ಕಾರ್ಯದರ್ಶಿ ಜಿತಾಕ್ಷ ಜಿ. ವಂದಿಸಿದರು.

LEAVE A REPLY

Please enter your comment!
Please enter your name here