ಸರೋಜರವರು ಆದರ್ಶ ಮಹಿಳೆ- ಕರ್ನಲ್ ಎ.ಜೆ.ಭಂಡಾರಿ
ಸರೋಜರವರು ಪ್ರತಿಯೊಬ್ಬರನ್ನು ಗೌರವದಿಂದ ಕಾಣುತ್ತಿದ್ದರು-ರೇವತಿ
ಪುತ್ತೂರು: ಅ. 1 ರಂದು ನಿಧನರಾದ ಕರ್ನಾಟಕ ರಾಜ್ಯ ಸರಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕಿ ಸರೋಜಾ ಕೆ.ಆಳ್ವರವರ ಉತ್ತರಕ್ರಿಯೆ ಅ. ೧14 ರಂದು ಮಂಗಳೂರಿನ ನವಭಾರತ್ ಸರ್ಕಲ್ ಹತ್ತಿರ ಇರುವ ಟಿ.ವಿ.ರಮಣ ಪೈ ಹಾಲ್‌ನಲ್ಲಿ ಜರಗಿತು. ಈ ಸಂದರ್ಭದಲ್ಲಿ ಶ್ರದ್ಧಾಂಜಲಿ ಸಭೆ ಜರಗಿತು.
ಸರೋಜರವರು ಆದರ್ಶ ಮಹಿಳೆ- ಕರ್ನಲ್ ಎ.ಜೆ.ಭಂಡಾರಿ
ಕರ್ನಲ್ ಎ.ಜೆ.ಭಂಡಾರಿರವರು ಮಾತನಾಡಿ ಸರೋಜಾರವರು ಕುಟುಂಬ ಮತ್ತು ಸಮಾಜವನ್ನು ಸರಿಸಮಾನವಾಗಿ ಗೌರವಿಸುವ ಮೂಲಕ, ಆದರ್ಶ ಮಹಿಳೆಯಾಗಿ, ಸಮಾಜದಲ್ಲಿ ಗೌರವಕ್ಕೆ ಪಾತ್ರರಾಗಿದ್ದರು ಎಂದರು.
ಸರೋಜರವರು ಪ್ರತಿಯೊಬ್ಬರನ್ನು ಗೌರವದಿಂದ ಕಾಣುತ್ತಿದ್ದರು-ರೇವತಿ
ಕರ್ನಾಟಕ ರಾಜ್ಯ ಸರಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ರೇವತಿರವರು ಮಾತನಾಡಿ ಸರೋಜಾರವರು ಇಲಾಖೆಯ ಪ್ರತಿಯೊಬ್ಬರನ್ನು ಗೌರವದಿಂದ ಕಾಣುತ್ತಿದ್ದರು, ಇಲಾಖೆಯ ಉದ್ಯೋಗಿಗಳ ಯಾವುದೇ ಸಮಸ್ಯೆ ಇದ್ದರೂ ಅವರಿಗೆ ಸಹಾಯ ಹಸ್ತವನ್ನು ನೀಡುತ್ತಿದ್ದರು. ಜೊತೆಗೆ ಪ್ರತಿಯೊಬ್ಬರನ್ನು ಗೌರವದಿಂದ ಕಾಣುತ್ತಿದ್ದರು. ಇಲಾಖೆಯ ಸೇವೆಯಲ್ಲಿ ಅತ್ಯಂತ ಪ್ರಾಮಾಣಿಕವಾಗಿ ಕಠಿಣ ದುಡಿಮೆಯಿಂದ ಕೆಲಸವನ್ನು ಮಾಡಿ, ಜನಮೆಚ್ಚುಗೆ ಪಡೆದಿದ್ದಾರೆ ಎಂದು ನುಡಿನಮನ ಸಲ್ಲಿಸಿದರು.
ಸರೋಜಾರವರ ಪತಿ, ಭಾರತೀಯ ರಿಸರ್ವ್ ಬ್ಯಾಂಕಿನ ಮಾಜಿ ನಿರ್ದೇಶಕ ಮತ್ತು ಬೆಂಗಳೂರು ಸುಂದರರಾಮ್ ಶೆಟ್ಟಿ ನಗರ ಸೌಹಾರ್ದ ಸಹಕಾರಿಯ ಅಧ್ಯಕ್ಷ ಅಗರಿ ನವೀನ್ ಭಂಡಾರಿ, ಪುತ್ರಿ ಅನುಷ್ಕಾ ಭಂಡಾರಿ, ಇಂಗ್ಲೆಂಡ್‌ನಲ್ಲಿ ನ್ಯೂರೋ ಸರ್ಜನ್ ಆಗಿರುವ ಅಳಿಯ ವೀಕ್ಷಿತ್ ಶೆಟ್ಟಿ ಮತ್ತು ಏಳಿಂಜೆ ಕೋಲೆಟ್ಟು ಮತ್ತು ತಾಳಿಪಡ್ಪು ಕುಟುಂಬಸ್ಥರು, ಹಿತೈಷಿಗಳು, ಜನಪ್ರತಿನಿಧಿಗಳು, ಅಧಿಕಾರಿ ವರ್ಗದವರು, ಸಾಮಾಜಿಕ, ಧಾರ್ಮಿಕ, ರಾಜಕೀಯ ಮುಖಂಡರುಗಳು ಸೇರಿದಂತೆ ಒಂದು ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಿದರು. ಸಾಮಾಜಿಕ ಮುಖಂಡ ಪುರುಷೋತ್ತಮ್ ಭಂಡಾರಿರವರು ಕಾರ್‍ಯಕ್ರಮ ನಿರೂಪಿಸಿದರು.