ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಮಧುಸೂದನ್‌ಗೆ ವರ್ಗಾವಣೆ

0

ಮಂಗಳೂರು ಐ.ಸಿ.ಟಿ.ಯ ಕೆ.ಕೆ.ಜಯಪ್ರಕಾಶ್ ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿಯಾಗಿ ಕರ್ತವ್ಯಕ್ಕೆ ಹಾಜರು

ನೆಲ್ಯಾಡಿ: ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿಯಾಗಿದ್ದ ಮಧುಸೂದನ್ ಎ.,ರವರಿಗೆ ವರ್ಗಾವಣೆಯಾಗಿದ್ದು ತೆರವಾದ ಸ್ಥಾನಕ್ಕೆ ಮಂಗಳೂರು ವಿಭಾಗದ ಲೀಗಲ್ ಹಾಗೂ ಐ.ಸಿ.ಟಿಯಲ್ಲಿ ವಲಯ ಅರಣ್ಯಾಽಕಾರಿಯಾಗಿದ್ದ ಕೆ.ಕೆ.ಜಯಪ್ರಕಾಶ್ ಎಂಬವರು ಆಗಮಿಸಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ಕೆ.ಕೆ.ಜಯಪ್ರಕಾಶ್‌ರವರು ಕಡಬ ತಾಲೂಕಿನ ಗೋಳಿತ್ತೊಟ್ಟು ಗ್ರಾಮದ ಕಲ್ಲಡ್ಕ ನಿವಾಸಿ ಕುಶಾಲಪ್ಪ ಗೌಡ ಹಾಗೂ ದೇವಮ್ಮ ದಂಪತಿಯ ಪುತ್ರ. ಮೂಡಬಿದ್ರೆ ಆಳ್ವಾಸ್ ಕಾಲೇಜಿನಲ್ಲಿ ಬಿ.ಎಸ್ಸಿ ಪದವಿ ಮುಗಿಸಿ ೨೦೦೬ರಲ್ಲಿ ಅರಣ್ಯ ಇಲಾಖೆಯ ಕಾರ್ಕಳ ವಿಭಾಗದ ನಾರಾವಿ ವನ್ಯಜೀವಿ ವಿಭಾಗದಲ್ಲಿ ಉಪವಲಯ ಅರಣ್ಯಾಧಿಕಾರಿಯಾಗಿ ಸೇವೆ ಆರಂಭಿಸಿದ್ದರು. ಆ ಬಳಿಕ 2011ರಿಂದ 2015ರ ತನಕ ಮೂಡಬಿದ್ರೆ ವಲಯ, 2015ರಿಂದ 2021ರ ತನಕ ಉಡುಪಿ ಅರಣ್ಯ ಸಂಚಾರಿದಳದಲ್ಲಿ ಉಪವಲಯ ಅರಣ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. 2021 ಫೆಬ್ರವರಿಯಲ್ಲಿ ವಲಯ ಅರಣ್ಯಾಧಿಕಾರಿಯಾಗಿ ಮುಂಭಡ್ತಿಪಡೆದುಕೊಂಡು ಮಂಗಳೂರಿನಲ್ಲಿ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ವಿಭಾಗಕ್ಕೆ ವರ್ಗಾವಣೆಗೊಂಡಿದ್ದರು. ಇಲ್ಲಿ ಕಳೆದ ಒಂದೂವರೇ ವರ್ಷದಿಂದ ಕರ್ತವ್ಯ ನಿರ್ವಹಿಸುತ್ತಿದ್ದ ಕೆ.ಕೆ.ಜಯಪ್ರಕಾಶ್‌ರವರು ಇದೀಗ ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿಯಾಗಿ ವರ್ಗಾವಣೆಗೊಂಡು ಆಗಮಿಸಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ಉಪ್ಪಿನಂಗಡಿಯಿಂದ ವರ್ಗಾವಣೆಯಾಗಿರುವ ಮಧುಸೂದನ್‌ರವರಿಗೆ ಸದ್ಯಕ್ಕೆ ಯಾವುದೇ ಜಾಗ ತೋರಿಸಿಲ್ಲ ಎಂದು ತಿಳಿದುಬಂದಿದೆ. 2019ರ ಜುಲೈನಲ್ಲಿ ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿಯಾಗಿ ಆಗಮಿಸಿದ್ದ ಮಧುಸೂದನ್‌ರವರು ಉತ್ತಮ ಅಧಿಕಾರಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು. ರಕ್ಷಿತಾರಣ್ಯದಿಂದ ಹಲವು ಮರ ಕಳವು ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ಇವರು ಯಶಸ್ವಿಯಾಗಿದ್ದರು.

ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ಪುತ್ತೂರು ಘಟಕದ ವಲಯ ಅರಣ್ಯಾಧಿಕಾರಿಯಾಗಿದ್ದ ಸೈಯ್ಯದ್ ನದಿಮ್‌ರವರಿಗೆ ಮೈಸೂರು ವಿಭಾಗದ ಟಿ. ನರಸೀಪುರ ವಲಯ ಅರಣ್ಯಾಽಕಾರಿಯಾಗಿ ವರ್ಗಾವಣೆ ಆದೇಶ ಆಗಿರುತ್ತದೆ.

LEAVE A REPLY

Please enter your comment!
Please enter your name here