ಶಶಿಧರ ನೆಕ್ಕಿಲಾಡಿಗೆ ಜೆಸಿಐಯ ಸಮಾಜಸೇವಾ ರತ್ನ ಪ್ರಶಸ್ತಿ

0

ಪುತ್ತೂರು: ಜೇಸಿಐ ಉಪ್ಪಿನಂಗಡಿ ಘಟಕದ 42ನೇ ಅಧ್ಯಕ್ಷರಾಗಿ 2020ರ ಸಾಲಿನಲ್ಲಿ ಕಾರ್ಯ ನಿರ್ವಹಿಸಿದ್ದ ಶಶಿಧರ ನೆಕ್ಕಿಲಾಡಿಯವರು ಜೆಸಿಐಯ ‘ಸಮಾಜಸೇವಾ ರತ್ನ’ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
34 ನೆಕ್ಕಿಲಾಡಿ ಗ್ರಾಮದ ಅಂಬೆಲ ನಿವಾಸಿಯಾಗಿರುವ ಶಶಿಧರ್ ಅವರು 2014ರಲ್ಲಿ ಉಪ್ಪಿನಂಗಡಿ ಘಟಕ ಸದಸ್ಯರಾಗಿ ಜೇಸಿಐ ಆಂದೋಲನಕ್ಕೆ ಸೇರಿದ್ದರು.
2016ರಲ್ಲಿ ಘಟಕದ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಪುತ್ತೂರಿನ ಸುದ್ದಿ ಬಿಡುಗಡೆ ಪತ್ರಿಕೆ ಮತ್ತು ಹೊಸದಿಗಂತ ಪತ್ರಿಕೆಯಲ್ಲಿ ಕರ್ತವ್ಯ ನಿರ್ವಹಿಸಿದ್ದ ಇವರು 2020ರಲ್ಲಿ ಜೆಸಿಐ ಘಟಕದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಕೊರೋನ ಲಾಕ್ಡೌನ್ ಸಮಯದಲ್ಲಿ ಹಲವು ಬಡವರ ಮನೆಗಳಿಗೆ ಆಹಾರ ಕಿಟ್ ವಿತರಣೆ, ಕೋವಿಡ್ ಲಸಿಕೆ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮ ಆಯೋಜಿಸಿದ್ದರು. ಕೋವಿಡ್ ಕಾರಣದಿಂದ ಜನರ ಓಡಾಟ ಸ್ಥಗಿತಗೊಂಡ ಸಂದರ್ಭದಲ್ಲಿ ಆನ್ಲೈನ್ ತರಗತಿಗಳಿಗೆ , ತರಬೇತಿಗಳಿಗೆ ಸಭೆಗಳಿಗೆ ವೇದಿಕೆ ಸಿದ್ಧಗೊಂಡಾಗ ಶಶಿಧರ್ ನೆಕ್ಕಿಲಾಡಿಯವರು ಘಟಕದ ಕಾರ್ಯಕ್ರಮಗಳನ್ನು ಆನ್ಲೈನ್ ಗಳಿಗೆ ಸಜ್ಜುಗೊಳಿಸಿದ ಪ್ರಯತ್ನ ಮಾಡಿದ್ದರಲ್ಲದೆ ಕೋವಿಡ್ ಕಾರ್ಯಕರ್ತರಿಗೆ ಸನ್ಮಾನ, ಅಂಗನವಾಡಿ ಕೇಂದ್ರಕ್ಕೆ ಮಕ್ಕಳ ತೂಗುಯ್ಯಾಲೆಯ ಕೊಡುಗೆ, ಶಾಲೆಗಳಿಗೆ ವಿವಿಧ ಉಪಕರಣಗಳ ಕೊಡುಗೆ, ಸಮಾಜದಲ್ಲಿ ಸೇವೆ ಸಲ್ಲಿಸಿದ ಸಾಧಕರಿಗೆ ಸನ್ಮಾನ ಮುಂತಾದ ಹಲವು ಕಾರ್ಯಕ್ರಮ ಆಯೋಜಿಸಿ ಪ್ರಶಸ್ತಿಗೆ ಭಾಜನರಾಗಿದ್ದರು.
ಯುವಜನತೆಗೆ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಕೊಕ್ಕಡದಲ್ಲಿ ಕಪಿಲ ಜೇಸಿಐ ಘಟಕ ಸ್ಥಾಪಿಸಿದ್ದರು. ಪ್ರಸ್ತುತ ನಮ್ಮ ಕುಡ್ಲ ಟಿವಿ ಚಾನೆಲ್ ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಶಿಧರ್ ಅವರಿಗೆ ಅ.16ರಂದು ನಡೆಯುವ ವಲಯ 15ರ ವ್ಯವಹಾರ ಸಮ್ಮೇಳನ ‘ಸಂಚಲನ’ ಸಾಧಕರ ಸಮಾಗಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.

LEAVE A REPLY

Please enter your comment!
Please enter your name here