ಪುತ್ತೂರು: ಮಾರುತಿ ಕಾರುಗಳ ಅಧಿಕೃತ ವಿತರಕರಾಗಿರುವ ನೆಕ್ಸಾ ಮಾಂಡೋವಿಯವರಿಂದ ಎರಡು ದಿನಗಳ ಕಾಲ ಉಪ್ಪಿನಂಗಡಿ ಎಚ್.ಎಂ ಅಡಿಟೋರಿಯಂ ಮುಂಭಾಗದಲ್ಲಿ ನಡೆಯಲಿರುವ ಗ್ರಾಮೀಣ ಮಹೋತ್ಸವ ಅ.15ರಂದು ಪ್ರಾರಂಭಗೊಂಡಿತು. ಇದೇ ಸಂದರ್ಭದಲ್ಲಿ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಒಳಗೊಂಡಿರುವ ಹೊಸ ಗ್ರ್ಯಾಂಡ್ ವಿಟಾರ ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಯಿತು.
ಬ್ಯಾಂಕ್ ಆಫ್ ಬರೋಡಾದ ಉಪ್ಪಿನಂಗಡಿ ಶಾಖಾ ವ್ಯವಸ್ಥಾಪಕ ವಿಶ್ರುತ್, ಮಾಂಡೋವಿ ಮೋಟಾರ್ಸ್ ಉಪ್ಪಿನಂಗಡಿ ಶಾಖಾ ವ್ಯವಸ್ಥಾಪಕ ಚಂದ್ರಶೇಖರ್, ಅಲ್ವಿನ್ , ಉಪ್ಪಿನಂಗಡಿ ಶ್ರೀರಾಮ್ ಮೆಡಿಕಲ್ ಮ್ಹಾಲಕ ಶಿವಪ್ರಸಾದ್ ದೀಪ ಬೆಳಗಿಸಿ ಚಾಲನೆ ನೀಡಿದರು.
ಗ್ರ್ಯಾಂಡ್ ವಿಟಾರ ಮಾರುಕಟ್ಟೆಗೆ;
ಗ್ರಾಮೀಣ ಮಹೋತ್ಸವದಲ್ಲಿ ಆಕರ್ಷಕ ಶೈಲಿಯ ಹಾಗೂ ಅತ್ಯಾಧುನಿಕ ತಂತ್ರಜ್ಞಾನಗಳೊಂದಿಗೆ ನಿರ್ಮಾಣಗೊಂಡಿರುವ ಮಾರುತಿ ಗ್ರ್ಯಾಂಡ್ ವಿಟಾರ ಕಾರನ್ನು ಉಪ್ಪಿನಂಗಡಿ ಪೊಲೀಸ್ ಠಾಣಾ ಉಪ ನಿರೀಕ್ಷಕ ರಾಜೇಶ್ ಕೆ.ವಿ. ಬಿಡುಗಡೆಗೊಳಿಸಿದರು.
ರುದ್ರಪ್ಪ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ನೆಕ್ಸಾ ಮಾಂಡೋವಿ ಸಿಬಂದಿಗಳಾದ ಸರ್ವೇಶ್ ರಾಜ್, ದೀಕ್ಷಿತ್ ಬಿಲ್ಲವ, ರಕ್ಷಿತ್ ಪೂಜಾರಿ, ಸೇಲ್ಸ್ ಮ್ಯಾನೇಜರ್ ಸುಕೇತ್ ಉಪಸ್ಥಿತರಿದ್ದರು.
ಗ್ರಾಮೀಣ ಮಹೋತ್ಸವದಲ್ಲಿ ಮಾರುತಿ ಇಗ್ನಿಸ್ ಕಾರು ಖರೀದಿ ಮೇಲೆ ಗ್ರಾಹಕರು 47,000 ರೂಪಾಯಿಗಳ ಉಳಿತಾಯ ಪಡೆದುಕೊಳ್ಳಬಹುದು. ಜೊತೆಗೆ ಎಕ್ಸ್ ಚೇಂಜ್ ಮಾಡುವ ಹಳೆಯ ವಾಹಗಳಿಗೆ ಉತ್ತಮ ಬೋನಸ್, ಸುಲಭ ಸಾಲ ಸೌಲಭ್ಯ ಹಾಗೂ ಇನ್ನಿತರ ಸೌಲಭ್ಯಗಳು ದೊರೆಯಲಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.