ಆಲಂಕಾರು ನಗ್ರಿ ಎಂಬಲ್ಲಿ ವಿದ್ಯುತ್ ಲೈನ್ ತಾಗಿ ನವಿಲುಗಳೆರಡು ಸಾವು

0

ಆಲಂಕಾರು: ಆಲಂಕಾರು‌ ಗ್ರಾಮದ ನಗ್ರಿ ಎಂಬಲ್ಲಿ ಗಂಡು ಮತ್ತು ಹೆಣ್ಣು ನವಿಲುಗಳೆರಡು ಸಾವನ್ನಪ್ಪಿದ ಘಟನೆ ನಡೆದಿದೆ. ಹಾರಾಡುವ ಸಂಧರ್ಭದಲ್ಲಿ ವಿದ್ಯುತ್ ಲೈನ್ ತಾಗಿ ಸಾವನ್ನಪ್ಪಿರಬಹುದೆಂದು ಶಂಕಿಸಲಾಗಿದೆ .ಈ ಬಗ್ಗೆ ಸ್ಥಳಿಯರು ನವಿಲುಗಳೆರಡು ಸಾವನ್ನಪ್ಪಿದ ಘಟನೆಯನ್ನು ಸಂಬಂಧ ಪಟ್ಟ ಇಲಾಖೆಯ ಗಮನಕ್ಕೆ ತಂದಿರುತ್ತಾರೆ. ಈ ಎರಡು ನವಿಲುಗಳು  ‌ನಗ್ರಿ ಅಸುಪಾಸಿನಲ್ಲಿ ಸುತ್ತಾಡಿಕೊಂಡು  ಕೆಲವು ಮನೆಗಳಲ್ಲಿ ಹಾಕುವ ಆಹಾರವನ್ನು ತಿನ್ನುತ್ತಾ  ಅಲ್ಲಿಯೇ ಸುತ್ತಾಡಿಕೊಂಡು ಜನತೆಗೆ ಮುದ ನೀಡುತ್ತಿತ್ತು.

LEAVE A REPLY

Please enter your comment!
Please enter your name here