ಉಪ್ಪಿನಂಗಡಿ: ಕರ್ನಾಟಕ ರಾಜ್ಯ ಸರ್ಕಾರಿ ಎನ್.ಎಂ.ಒ.ಪಿ.ಎಸ್. ಮತ್ತು ಎನ್.ಪಿ.ಎಸ್. ನೌಕರ ಸಂಘದಿಂದ ಪಿಂಚಣಿಗೆ ಆಗ್ರಹಿಸಿ ಹಮ್ಮಿಕೊಳ್ಳಲಾಗಿರುವ “ಒಪಿಎಸ್. ಸಂಕಲ್ಪ ಯಾತ್ರೆ” ಜಾಥಾ ಅ.17 ರಂದು ಉಪ್ಪಿನಂಗಡಿಗೆ ಆಗಮಿಸಿದ್ದು, ಈ ಭಾಗದ ಸಂಘದ ಸದಸ್ಯರು ಜಾಥಾವನ್ನು ಬರಮಾಡಿಕೊಂಡು ಸ್ವಾಗತಿಸಿದರು.
ಬೆಳ್ತಂಗಡಿ ಕಡೆಯಿಂದ ಬಂದ ಜಾಥಾವನ್ನು ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ಬಳಿಯಲ್ಲಿ ಸ್ವಾಗತಿಸಿಲಾಯಿತು. ರಾಜ್ಯ ಸಂಘದ ಅಧ್ಯಕ್ಷ ಶಾಂತಾರಾಮ ಜಾಥಾ ಉದ್ದೇಶದ ಬಗ್ಗೆ ತಿಳಿಸಿ ನಮ್ಮ ಹಕ್ಕಿಗಾಗಿ ನಿರಂತರವಾಗಿ ಹೋರಾಟ ನಡೆಯಲಿದ್ದು, ಹೋರಾಟಕ್ಕೆ ತಾಲೂಕುವಾರು ತಮ್ಮ ಹೆಸರು ನೋಂದಾಯಿಸಿಕೊಂಡು ಹೋರಾಟವನ್ನು ಯಶಸ್ಸುಗೊಳಿಸುವಂತೆ ಕರೆ ನೀಡಿದರು.
ಜಾಥಾದಲ್ಲಿ ಸಂಘದ ರಾಜ್ಯ ಘಟಕದ ಹಿರಿಯ ಉಪಾಧ್ಯಕ್ಷ ಸಿದ್ದಪ್ಪ ಸಂಗಣ್ಣನವರ, ಪ್ರಧಾನ ಕಾರ್ಯದರ್ಶಿ ನಾಗನ ಗೌಡ ಎಂ.ಎ., ಉಪಾಧ್ಯಕ್ಷ ಚಂದ್ರಕಾಂತ ತಳವಾರ, ರಂಗನಾಥ ಜಿ., ಕಾರ್ಯದರ್ಶಿ ಪ್ರವೀಣ್ ಕುಮಾರ್ ಸಿ.ಎಸ್., ದ.ಕ. ಜಿಲ್ಲಾ ಸಂಘದ ಅಧ್ಯಕ್ಷ, ಉಪ್ಪಿನಂಗಡಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಇಬ್ರಾಹಿಂ, ಕಾರ್ಯದರ್ಶಿ ಆದರ್ಶ ಕಟ್ಟಿನಮಕ್ಕಿ, ಉಪಸ್ಥಿತರಿದ್ದರು.
ಉಪ್ಪಿನಂಗಡಿಯಲ್ಲಿ ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿಲ್ಫ್ರೆಡ್ ಲಾರೆನ್ಸ್ ರೋಡ್ರಿಗಸ್, ಕಾರ್ಯದರ್ಶಿ ದಿನೇಶ್ ಎಂ., 34-ನೆಕ್ಕಿಲಾಡಿ ಪ್ರಭಾರ ಪಿಡಿಒ. ಸತೀಶ್ ಬಂಗೇರ, ಬಜತ್ತೂರು ಗ್ರಾಮ ಪಂಚಾಯಿತಿ ಪಿಡಿಒ. ಪ್ರವೀಣ್, ಕಾರ್ಯದರ್ಶಿ ಗಿರಿಯಪ್ಪ, ಹಿರೇಬಂಡಾಡಿ ಕಾರ್ಯದರ್ಶಿ ಪರಮೇಶ್ವರ, ರಾಮಕುಂಜ ಗ್ರಾಮ ಪಂಚಾಯಿತಿ ಪಿಡಿಒ. ಜೆರಾಲ್ಡ್ ಮಸ್ಕರೇನಸ್, ಕೊಯಿಲದ ಕಾರ್ಯದರ್ಶಿ ಪಮ್ಮು, ನೆಲ್ಯಾಡಿಯ ಮಂಜುಳಾ, ವಿಮಲ್, ಬಲ್ಪದ ನಾರಾಯಣ, ಉಪ್ಪಿನಂಗಡಿಯ ನಿವೃತ್ತ ಕಾರ್ಯದರ್ಶಿ ಮರಿಯಮ್ಮ ಮತ್ತಿತರರು ಉಪಸ್ಥಿತರಿದ್ದರು.