ಪುತ್ತೂರು : ಹಾಲು ಉತ್ಪಾದಕರ ಸಹಕಾರ ಸಂಘ ಈಶ್ವರಮಂಗಲ ಹಾಗೂ ತಾಲೂಕು ಪಂಚಾಯತ್ ಪುತ್ತೂರು ಇದರ ಸಹಯೋಗದಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಮಾಹಿತಿ ಕಾರ್ಯಗಾರ ಅ.18 ರಂದು ಈಶ್ವರಮಂಗಲ ಹಾಲು ಉತ್ಪಾದಕರ ಸೇವಾ ಸಂಘ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ನೆ. ಮುಡ್ನೂರು ಗ್ರಾ.ಪಂ ಅಧ್ಯಕ್ಷ ರಮೇಶ್ ರೈ ಸಾಂತ್ಯ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ , ಸಣ್ಣ ಹಾಗೂ ಅತೀ ಸಣ್ಣ ರೈತರಿಗೆ ತಮ್ಮ ಸ್ವಂತ ಜಮೀನಿನಲ್ಲಿ ದುಡಿಮೆ ಮಾಡಿ ಕೃಷಿ ಅಭಿವೃದ್ಧಿಯೊಂದಿಗೆ ತಮ್ಮ ಅಭಿವೃದ್ಧಿ ಹೊಂದುವಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಮಹತ್ವವಾಗಿದೆ.ಉದ್ಯೋಗ ಚೀಟಿ ಮಾಡದೆ ಇರುವ ಫಲಾನುಭವಿಗಳು ಗ್ರಾ.ಪಂ ನಲ್ಲಿ ಬಂದು ಉದ್ಯೋಗ ಚೀಟಿ ನೊಂದವಣಿ ಮಾಡಿಕೊಳ್ಳಲು ಅವಕಾಶ ಇದೆ. 60-40 ಯೋಜನೆಯ ಮೂಲಕ ಗ್ರಾಮದ ಅಭಿವೃದ್ಧಿ ಎಷ್ಟು ಅನುದಾನ ತರಲು ಸಾಧ್ಯವಿದೆಯೋ ಅಷ್ಟು ಅನುದಾನ ತರುವಲ್ಲಿ ಪ್ರಯತ್ನ ಮಾಡಿ ಗ್ರಾಮದ ಅಭಿವೃದ್ಧಿಗೆ ಕೈಜೋಡಿಸೋಣ ಎಂದು ಹೇಳಿ ಶುಭ ಹಾರೈಸಿದರು.
ಪುತ್ತೂರು ತಾ.ಪಂ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಸಹಾಯಕ ನಿರ್ದೇಶಕಿ ಶೈಲಜಾ ಪ್ರಕಾಶ್ ಭಟ್ ಮಹಾತ್ಮ ಗಾಂಧಿ ರಾ.ಗ್ರಾ.ಉ.ಖಾತರಿ ಯೋಜನೆ ಬಗ್ಗೆ ಸಮಗ್ರ ಮಾಹಿತಿ ನೀಡಿ ಮಾತನಾಡಿ ರೈತರು ದೇಶದ ಬೆನ್ನೆಲುಬು, ಜನರಿಗೆ ಸಮಗ್ರ ಮಾಹಿತಿ ಕೊರತೆಯಿಂದ ಸರಕಾರದ ವಿವಿಧ ಸೌಲಭ್ಯಗಳನ್ನು ಪಡೆಯುವಲ್ಲಿ ವಂಚಿತರಾಗಿದ್ದಾರೆ ಅದ್ದರಿಂದ ಸರಕಾರದ ಯೋಜನೆಗಳು ಯಶಸ್ವಿಯಾಗಳು ಸಾಧ್ಯವಾಗಿಲ್ಲ. ಉದ್ಯೋಗ ಖಾತರಿ ಯೋಜನೆಯಡಿ ವೈಯಕ್ತಿಕ ಹಾಗೂ ಸಾರ್ವಜನಿಕ ಕಾಮಗಾರಿಗೆ ಅವಕಾಶ ವಿದೆ. ವೈಯಕ್ತಿಕ ಕಾಮಗಾರಿ ಮೂಲಕ ತಮ್ಮ ಜಮೀನಿನಲ್ಲಿ ದುಡಿಮೆ ಮಾಡಿ ಕೃಷಿ ಅಭಿವೃದ್ಧಿ ಪಡಿಸಿ ತಮ್ಮ ಅಭಿವೃದ್ಧಿ ಅವಕಾಶ ಕಲ್ಪಿಸಲಾಗಿದೆ. ಒಂದು ಕುಟುಂಬಕ್ಕೆ ವರ್ಷಕ್ಕೆ 2.5 ಲಕ್ಷ ರೂ ಅನುದಾನ ಪಡೆಯಲು ಅವಕಾಶ ಇದೆ. ಕಳೆದ ವರ್ಷ ಕೂಲಿ ಮೊತ್ತ ದಿನೊಂದಕ್ಕೆ 259 ಇತ್ತು ಅದನ್ನು 309 ಕ್ಕೆ ಹೆಚ್ಚಳ ಮಾಡಲಾಗಿದೆ. ಕೇಂದ್ರ ಸರ್ಕಾರದ ಶೇಕಾಡ 75 ಹಾಗೂ ರಾಜ್ಯ ಸರ್ಕಾರದ ಶೇಕಡಾ 25 ಅನುದಾನವನ್ನು ಬಜೆಟ್‌ನಲ್ಲಿ ಜೋಡಣೆ ಮಾಡುವ ನಿಟ್ಟಿನಲ್ಲಿ ಪ್ರತಿ ವರ್ಷ ಅ.2 ರಂದು ಕ್ರಿಯಾ ಯೋಜನೆ ತಯಾರಿಸಿ ಸರ್ಕಾರಕ್ಕೆ ಕಳುಹಿಸಬೇಕಾಗುತ್ತದೆ ಆದರೆ ಈ ಬಾರಿ ಸಲ್ಪ ಅವಧಿ ವಿಸ್ತರಣೆ ಮಾಡಿದ್ದಾರೆ.
ವಲಸಿಗರನ್ನು ತಡೆಗಟ್ಟುವ ನಿಟ್ಟಿನಲ್ಲಿ 60-40 ಯೋಜನೆಯಡಿ ಕೂಲಿಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗಿದೆ. ನೈಸರ್ಗಿಕ ಸಂಪನ್ಮೂಲಗಳ ಕ್ರೂಢಿಕರಣಕ್ಕೆ ಶೇಕಡಾ 65 ಮತ್ತು 10 ಶೇಕಡಾ ರಸ್ತೆ ಅಭಿವೃದ್ಧಿಗೆ ಅವಕಾಶ ಕಲ್ಪಿಸಲಾಗಿದೆ ಎಂದ ಅವರು ಶಾಲಾ ಸಮಗ್ರ ಅಭಿವೃದ್ಧಿ ನಿಟ್ಟಿನಲ್ಲಿ ಆಟದ ಮೈದಾನ, ಅವರಣ ಗೋಡೆ ರಚನೆ, ಇತ್ಯಾದಿ ಅವಕಾಶ ನೀಡಲಾಗಿದೆ .ಗ್ರಾಮದ ಎಲ್ಲರೂ ಉದ್ಯೋಗ ಚೀಟಿ ನೊಂದಣಿ ಮಾಡಿಕೊಂಡು ಉದ್ಯೋಗ ಖಾತರಿ ಯೋಜನೆ ಸೌಲಭ್ಯಗಳನ್ನು ಪಡೆದು ತಮ್ಮ ಅಭಿವೃದ್ಧಿ ಜೊತೆಗೆ ಗ್ರಾಮದ ಹಾಗೂ ದೇಶದ ಅಭಿವೃದ್ಧಿ ಹೊಂದಲಿ ಎಂದು ಶುಭ ಹಾರೈಸಿದರು.
ನೆಟ್ಟಣಿಗೆ.ಮೂಡ್ನೂರು ಗ್ರಾ.ಪಂ ಪಿಡಿಒ ಸಂದೇಶ್ ಮಾತನಾಡಿ ಉದ್ಯೋಗ ಖಾತರಿ ಯೋಜನೆ ಮೂಲಕ ಗ್ರಾಮಸ್ಥರು ಪ್ರತಿ ಮನೆಯಲ್ಲೂ ಬಚ್ಚಲು ಗುಂಡಿ ರಚನೆ ಮಾಡಿಕೊಂಡು ಸ್ವಚ್ಛತೆ ಕಾಪಾಡುವಂತೆ ತಿಳಿಸಿದ ಅವರು ಮೆನಾಲ ನರ್ಸರಿಯಲ್ಲಿ ವಿವಿಧ ಬಗೆಯ ಹಣ್ಣಿನ ಗಿಡಗಳನ್ನು ಸಂಜೀವಿನಿ ಒಕ್ಕೂಟ ಸದಸ್ಯರು ಬೆಳೆಸುತ್ತಿದ್ದಾರೆ ಅಲ್ಲಿಂದ ಗಿಡಗಳನ್ನು ಖರೀದಿಸಿ ಬಿಲ್ಲನ್ನು ಗ್ರಾ.ಪಂ ಗೆ ಪಾವತಿಸಿದಲ್ಲಿ ಮೆಟೀರಿಯಲ್ಸ್ ಬಿಲ್ ಪಂಚಾಯತ್ ನಿಂದ ಫಲಾನುಭವಿಗಳಿಗೆ ಪಾವತಿ ಮಾಡಲಾಗುವುದು ಎಂದು ಹೇಳಿದರು.
ಸಭೆಯು ಈಶ್ವರಮಂಗಲ ಹಾಲು ಉತ್ಪಾದಕರ ಸೇವಾ ಸಂಘದ ಅಧ್ಯಕ್ಷ ವಿಶ್ವನಾಥ ಗೌಡ ಅಡೀಲು ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ವೇದಿಕೆಯಲ್ಲಿ ಬಡಗನ್ನೂರು ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ ಕೆ, ಉಪಾಧ್ಯಕ್ಷ ಸಂತೋಷ್ ಆಳ್ವ ಗಿರಿಮನೆ, ಪುತ್ತೂರು ತಾ.ಪಂ ತಾಂತ್ರಿಕ ಸಂಯೋಜಕರಾದ ಆಕಾಂಕ್ಷೆ , ವಿನೋದ್, ಪುತ್ತೂರು ತಾ.ಪಂ ಐಟಿಸಿ ಸಂಯೋಜಕ ಭರತ್ ರಾಜ್, ಉಪಸ್ಥಿತರಿದ್ದರು.
ಸಭೆಯಲ್ಲಿ ಈಶ್ವರಮಂಗಲ ಹಾಲು ಉತ್ಪಾದಕರ ಸೇವಾ ಸಂಘದ ಉಪಾಧ್ಯಕ್ಷ ದಿನೇಶ್ ಕೆ, ನಿರ್ದೇಶಕರಾದ ಶಿವರಾಮ್ ಶರ್ಮ, ರಾಧಾಕೃಷ್ಣ ರೈ ಡಿ ಪಿ, ಪ್ರದೀಪ್ ಕುಮಾರ್ ರೈ, ನೀಲಾವತಿ, ಕೃಷ್ಣ ನಾಯ್ಕ ,ಜಗನ್ಮೋಹನ್ ಶೆಟ್ಟಿ, ಸಾರ್ವಾಣಿ, ಎಸ್ ಎಸ್ ಕೆದಿಲಯ, ಶ್ರೀ ಕ್ಷೇತ್ರ ಧ .ಗ್ರಾ ಯೋಜನೆಯ ಸೇವಾ ಪ್ರತಿನಿಧಿಗಳಾದ ಸುಂದರ ಜಿ ,ವಿದ್ಯಾ, ಹಾಗು ಹಾಲು ಉತ್ಪಾದಕರ ಸಂಘದ ಸದಸ್ಯರು ಮತ್ತು ಬಡಗನ್ನೂರು ಹಾಗೂ ನೆಟ್ಟಣಿಗೆ ಮೂಡ್ನೂರು ಗ್ರಾಮಸ್ಥರು ಉಪಸ್ಥಿತರಿದ್ದರು.
ಹಾಲು ಉತ್ಪಾದಕ ಸಂಘದ ಕಾರ್ಯದರ್ಶಿ ಗುರು ಪ್ರಸಾದ್ ಯಂ ಸ್ವಾಗತಿಸಿ ವಂದಿಸಿದರು. ನಿರ್ದೇಶಕ ಶಿವರಾಮ ಶರ್ಮ ಕಾರ್ಯಕ್ರಮ ನಿರೂಪಿಸಿದರು.