ಮುಕ್ವೆ ರಸ್ತೆ ಬದಿಯಲ್ಲಿ ತ್ಯಾಜ್ಯ ಎಸೆಯುತ್ತಿದ್ದ ವ್ಯಕ್ತಿಯನ್ನು ಪತ್ತೆ ಹಚ್ಚಿ ದಂಡ ವಿಧಿಸಿದ ನರಿಮೊಗರು ಗ್ರಾಮ ಪಂಚಾಯತ್

0

ಪುತ್ತೂರು: ನರಿಮೊಗರು ಗ್ರಾಮದ ಮುಕ್ವೆಯಲ್ಲಿ ರಸ್ತೆ ಬದಿಯಲ್ಲಿ ತ್ಯಾಜ್ಯ ಎಸೆಯುತ್ತಿದ್ದ ವ್ಯಕ್ತಿಯೋರ್ವರನ್ನು ನರಿಮೊಗರು ಗ್ರಾ.ಪಂ. ಪತ್ತೆ ಹಚ್ಚಿ ಅದೇ ವ್ಯಕ್ತಿಯಿಂದ ತ್ಯಾಜ್ಯವನ್ನು ಹೆಕ್ಕಿಸಿ ಬಳಿಕ ದಂಡ ವಿಧಿಸಿದ ಘಟನೆ ಅ. 19ರಂದು ನಡೆದಿದೆ.

ಮುಕ್ವೆ ರಸ್ತೆ ಬದಿಯಲ್ಲಿ ತ್ಯಾಜ್ಯ ಎಸೆಯುತ್ತಿದ್ದ ಹಸ್ನೆನ್ ಎಂಬವರನ್ನು ಗ್ರಾಪಂ ಸದಸ್ಯ ಕೇಶವ ಅವರು ಪತ್ತೆ ಹಚ್ಚಿ ನರಿಮೊಗರು ಗ್ರಾ.ಪಂ ಪಿಡಿಓ ಅವರಿಗೆ ಮಾಹಿತಿ ನೀಡಿದ್ದರು. ಕೂಡಲೆ ಸ್ಥಳಕ್ಕೆ ಆಗಮಿಸಿದ ಪಿಡಿಓ ರವಿಚಂದ್ರ ಯು ಅವರು ಎಸೆದ ತ್ಯಾಜ್ಯವನ್ನು ಶುಚಿಗೊಳಿಸಿ ದಂಡ ಕಟ್ಟುವಂತೆ ತಿಳಿಸಿದಾಗ ಹಸ್ನೆನ್ ಅವರು ಉಡಾಫೆಯಾಗಿ ವರ್ತಿಸಿದ್ದಾರೆ.

ಈ ವೇಳೆ ಪಿಡಿಒ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದು ಸ್ಥಳಕ್ಕೆ ಎಎಸ್‌ಐ ಕೃಷ್ಣಪ್ಪ ಮತ್ತು ಸಿಬ್ಬಂದಿಗಳು ಆಗಮಿಸಿ ತ್ಯಾಜ್ಯ ಎಸೆದ ವ್ಯಕ್ತಿಯನ್ನು ವಿಚಾರಿಸಿ ಬಳಿಕ ಅದೇ ವ್ಯಕ್ತಿಯಲ್ಲಿ ತ್ಯಾಜ್ಯವನ್ನು ಸ್ಥಳದಿಂದ ತೆರವುಗೊಳಿಸಿದ್ದಾರೆ.

ನಂತರ ಪಿಡಿಒ ಅವರು ತ್ಯಾಜ್ಯ ಎಸೆದ ವ್ಯಕ್ತಿಗೆ ರೂ.2,000 ದಂಡ ವಿಧಿಸಿದರು. ಕಾರ್ಯಾಚರಣೆಯಲ್ಲಿ ಗ್ರಾ.ಪಂನ ಇನ್ನೋರ್ವ ಸದಸ್ಯ ಗಣೇಶ್ ಮುಕ್ವೆ ಮತ್ತು ಗ್ರಾಮಸ್ಥರು ಸಹಕರಿಸಿದ್ದರು.

ಮುಂದಿನ ದಿನಗಳಲ್ಲಿ ತ್ಯಾಜ್ಯ ಎಸೆಯುವವರ ವಿರುದ್ಧ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ನರಿಮೊಗರು ಗ್ರಾ.ಪಂ ಪಿಡಿಓ ರವಿಚಂದ್ರ ಯು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here