ಅ. 25: ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಸೂರ್ಯ ಗ್ರಹಣ ಶಾಂತಿ‌ ಹವನ

0

ಬೆಟ್ಟಂಪಾಡಿ: ಸೂರ್ಯಗ್ರಹಣದ ಫಲಾಫಲವಿರುವ ನಕ್ಷತ್ರ ಮತ್ತು ರಾಶಿಯವರಿಗೆ ಸೂರ್ಯ ಗ್ರಹಣ ಶಾಂತಿ ಹವನ ಅ. 25 ರಂದು ಸಂಜೆ ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ನಡೆಯಲಿದೆ.‌ ಸಂಜೆ 5.07 ರಿಂದ 6.29 ರ ತನಕ ಶಾಂತಿ ಹವನ ನಡೆಯಲಿದೆ. ಸ್ವಾತಿ, ಚಿತ್ರಾ, ವಿಶಾಖಾ, ಆರ್ದ್ರಾ, ಶತಭಿಷೆ ನಕ್ಷತ್ರದವರು ಮತ್ತು ತುಲಾ, ವೃಶ್ಚಿಕ, ಮೀನ, ಕರ್ಕಟಕ, ಮೇಷ, ಮಿಥುನ, ಕುಂಭ, ಕನ್ಯಾ ರಾಶಿಯವರಿಗೆ ಸೂರ್ಯಗ್ರಹಣ ಫಲಾಫಲವಿರುವುದರಿಂದ ಆ‌ ನಕ್ಷತ್ರ ಮತ್ತು ರಾಶಿಯವರು ಶಾಂತಿ ಹವನ
ಮಾಡಿಸಿಕೊಳ್ಳಬಹುದಾಗಿದೆ. ಸಂಕಲ್ಪ ಕಾಣಿಕೆ ರೂ. 100 ಪಾವತಿಸಿ ಸಂಕಲ್ಪಕ್ಕಾಗಿ ಹವನಕ್ಕೆ ಮುಂಚಿತವಾಗಿ ಪಾಲ್ಗೊಳ್ಳುವಂತೆ ದೇವಳದ ಅನುವಂಶಿಕ ಆಡಳಿತ ಮೊಕ್ತೇಸರ ವಿನೋದ್ ಕುಮಾರ್ ಬಲ್ಲಾಳ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here