ಮಂಗಳೂರು:ದೈವ ನರ್ತಕರಿಗೆ ಮಾಸಾಶನ ನೀಡಲು ರಾಜ್ಯ ಸರಕಾರ ನಿರ್ಧರಿಸಿದ್ದು 60 ವರ್ಷ ದಾಟಿದ ದೈವ ನರ್ತಕರಿಗೆ ಪ್ರತಿ ತಿಂಗಳು 2 ಸಾವಿರ ರೂ.ನೀಡಲು ನಿರ್ಧರಿಸಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ, ದ.ಕ.ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ವಿ.ಸುನಿಲ್ ಕುಮಾರ್ ಹೇಳಿದ್ದಾರೆ. ಈ ಕುರಿತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆದೇಶ ಹೊರಡಿಸಿದೆ.
ಕರಾವಳಿ ಭಾಗದ ದೈವ, ಭೂತಾರಾಧನೆ ಬಗ್ಗೆ ಕಥೆ ಹೊಂದಿರುವ ‘ಕಾಂತಾರ’ ಚಿತ್ರ ಎಲ್ಲೆಡೆ ಸದ್ದು ಮಾಡುತ್ತಿರುವ ನಡುವೆಯೇ ಇದೀಗ ಕರಾವಳಿ ಭಾಗದಲ್ಲಿ ದೈವ ನರ್ತನ ಮಾಡುವವರಿಗೆ ಕರ್ನಾಟಕ ಸರ್ಕಾರ ದೀಪಾವಳಿ ಹಬ್ಬದ ಸಮಯದಲ್ಲಿ ಶುಭಸುದ್ದಿ ನೀಡಿದೆ.
‘ಕಾಂತಾರ’ ಸಿನಿಮಾವನ್ನು ನೋಡಿದ ಅನೇಕರು ದೈವ ನರ್ತನೆ ಮಾಡುವ ಸಮುದಾಯದವರ ಅಭಿವೃದ್ಧಿಗೆ ಸರ್ಕಾರ ಒಳ್ಳೆಯ ಯೋಜನೆಗಳನ್ನು ತರಬೇಕು,ಅವರಿಗಾಗಿ ಮಾಸಾಶನ ನೀಡಬೇಕು ಎಂದು ಹೇಳುತ್ತಿದ್ದರು.ಇದೀಗ ಸರಕಾರ ದೈವ ನರ್ತಕರಿಗೆ ಮಾಸಾಶನ ನೀಡಲು ನಿರ್ಧರಿಸಿದೆ.
ಕರ್ನಾಟಕ ಸಂಸ್ಕೃತಿ, ಆಚರಣೆಗಳ ನೆಲೆಬೀಡು, ಅದರಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ದೈವಾರಾಧನೆಯು ಸಹ ಒಂದು. ದೈವಾರಾಧನೆಯಲ್ಲಿ ದೈವ ನರ್ತನ ಮಾಡುವ ನರ್ತಕರ ಹಿತದೃಷ್ಟಿಯನ್ನು ಗಮನಿಸಿ, 60 ವರ್ಷ ತುಂಬಿದ ದೈವ ನರ್ತಕರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಮಾಹೆಯಾನ ೨ ಸಾವಿರ ರೂ.ಮಾಸಾಶನ ನೀಡಲು ನಿರ್ಧರಿಸಲಾಗಿದೆ ಎಂದು ಸಚಿವ ವಿ.ಸುನಿಲ್ ಕುಮಾರ್ ಹೇಳಿದ್ದಾರೆ.
ಕರ್ನಾಟಕ ಸಂಸ್ಕೃತಿ, ಆಚರಣೆಗಳ ನೆಲೆಬೀಡು, ಅದರಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ದೈವಾರಾಧನೆಯು ಸಹ ಒಂದು. ದೈವಾರಾಧನೆಯಲ್ಲಿ ದೈವ ನರ್ತನ ಮಾಡುವ ನರ್ತಕರ ಹಿತದೃಷ್ಟಿಯನ್ನು ಗಮನಿಸಿ, 60 ವರ್ಷ ತುಂಬಿದ ದೈವ ನರ್ತಕರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಮಾಹೆಯಾನ 2 ಸಾವಿರ ರೂ.ಮಾಸಾಶನ ನೀಡಲು ನಿರ್ಧರಿಸಲಾಗಿದೆ ಎಂದು ಸಚಿವ ವಿ.ಸುನಿಲ್ ಕುಮಾರ್ ಹೇಳಿದ್ದಾರೆ.