ಸಮಾಜದ ಅಗತ್ಯತೆಗಳಿಗೆ ಸ್ಪಂದಿಸುವ ಮನೋಗುಣವಿರಲಿ-ಜೆರೋಮಿಯಸ್ ಪಾಯಿಸ್
ಪುತ್ತೂರು: ಯಾವುದೇ ಅಪೇಕ್ಷೆ ಮಾಡದೆ ಸಮಾಜದಲ್ಲಿ ಸಮಾಜಮುಖಿ ಕಾರ್ಯ ಮಾಡುತ್ತಿರುವ ಕ್ಲಬ್ ಅದು ರೋಟರಿ ಕ್ಲಬ್ ಆಗಿದೆ. ಪ್ರತಿಯೋರ್ವ ಪ್ರಜ್ಞಾವಂತ ನಾಗರಿಕ ಸಮಾಜದಲ್ಲಿನ ಅಗತ್ಯತೆ ಮತ್ತು ನ್ಯೂನತೆಗಳನ್ನು ಕಂಡುಕೊಂಡು ಸ್ಪಂದಿಸುವ ಮನೋಗುಣ ಹೊಂದಿದಾಗ ಸಮಾಜ ನಮ್ಮನ್ನು ಗುರುತಿಸಬಲ್ಲುದು ಜೊತೆಗೆ ನಮ್ಮಲ್ಲಿ ನಾಯಕತ್ವ ಗುಣವೂ ಬೆಳೆಯಬಲ್ಲದು ಎಂದು ರೋಟರಿ ಕ್ಲಬ್ ಪುತ್ತೂರು ಸಿಟಿ ಮಾಜಿ ಅಧ್ಯಕ್ಷ ಹಾಗೂ ನಿವೃತ್ತ ಶಿಕ್ಷಕ ಜೆರೋಮಿಯಸ್ ಪಾಯಿಸ್‌ರವರು ಹೇಳಿದರು.
ಅ.19 ರಂದು ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಯಲ್ಲೊಂದಾದ ಸಂತ ಫಿಲೋಮಿನಾ ಪ್ರೌಢಶಾಲೆಯಲ್ಲಿ ರೋಟರಿ ಕ್ಲಬ್ ಪುತ್ತೂರು ಸಿಟಿಯ ಪ್ರಾಯೋಜಿತ ಸಂಸ್ಥೆಯಾದ ಇಂಟರ್‍ಯಾಕ್ಟ್ ಕ್ಲಬ್‌ನ ಪದ ಪ್ರದಾನ ಮಾರಂಭದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು. ಸ್ವ-ಹಿತ ಮೀರಿದ ಸೇವೆಯೊಂದಿಗೆ ಅಂತರ್ರಾಷ್ಟ್ರೀಯ ಸೇವಾ ಸಂಸ್ಥೆ ಎನಿಸಿದ ರೋಟರಿಯು ಸಮಾಜಕ್ಕೆ ತನ್ನಿಂದಾದಷ್ಟು ಕೊಡುಗೆ ನೀಡುತ್ತಾ ಬಂದಿದೆ. ಸುಮಾರು 12 ರಿಂದ 18ರ ವಯಸ್ಸಿನ ವಿದ್ಯಾರ್ಥಿಗಳಿಗೆ ಇಂಟರ್‍ಯಾಕ್ಟ್ ಕ್ಲಬ್‌ನಲ್ಲಿ ತೊಡಗಿಸಿಕೊಂಡು ಸಮಾಜದ ಏಳಿಗೆಗಾಗಿ ಕೆಲಸ ಮಾಡುವ ಅಪೂರ್ವ ಅವಕಾಶ ಇದ್ದು, ಇದರ ಸಂಪೂರ್ಣ ಸದ್ಭಳಕೆಯಾದಾಗ ತಾನೋರ್ವ ಇಂಟರ್‍ಯಾಕ್ಟ್ ಕ್ಲಬ್ ಸದಸ್ಯ ಎನ್ನುವುದಕ್ಕೆ ಸಾರ್ಥಕವೆನಿಸುತ್ತದೆ ಎಂದರು.
ರೋಟರಿ ಕ್ಲಬ್ ಪುತ್ತೂರು ಸಿಟಿ ಅಧ್ಯಕ್ಷ ಪ್ರಶಾಂತ್ ಶೆಣೈರವರು ನೂತನ ಪದಾಧಿಕಾರಿಗಳಿಗೆ ಸ್ವಾಗತಿಸಿ, ಪ್ರಮಾಣವಚನ ಬೋಧಿಸಿ ಮಾತನಾಡಿ, ವಿಶ್ವವೇ ಪೋಲಿಯೋ ಮುಕ್ತವಾಗಬೇಕು ಎಂಬ ಧ್ಯೇಯದೊಂದಿಗೆ ಕಾರ್ಯೋನ್ಮುಖವಾದ ಈ ರೋಟರಿ ಸಂಸ್ಥೆ ಬಹುತೇಕ ಇದನ್ನು ಸಾಧಿಸಿ ಬಿಟ್ಟಿದೆ ಮತ್ತು ಭಾರತ ದೇಶವು `ಪೋಲಿಯೋ ಫ್ರೀ ಇಂಡಿಯಾ’ ಆಗಿ ಮಾರ್ಪಟ್ಟಿರುವುದು ಅಕ್ಷರಸಃ ಸತ್ಯ. ಪ್ರಸ್ತುತ ವರ್ಷದ ರೋಟರಿ ಜಿಲ್ಲಾ ಪ್ರಾಜೆಕ್ಟ್ ಎನಿಸಿದ ವನಸಿರಿ, ಜಲಸಿರಿ, ಆರೋಗ್ಯ ಸಿರಿ ಮತ್ತು ವಿದ್ಯಾ ಸಿರಿ ಯೋಜನೆಗಳ ಮೂಲಕ ಸಮಾಜಮುಖಿ ಕಾರ್ಯಗಳನ್ನು ಮಾಡುವ ಮೂಲಕ ಮನೆ ಮಾತಾಗುವುದು ಮುಖ್ಯವಾಗಿದೆ ಎಂದು ಹೇಳಿ ಕ್ಲಬ್‌ನ ಉದ್ಧೇಶ ಮತ್ತು ಗುರಿಯ ಬಗ್ಗೆ ಪ್ರಚುರಪಡಿಸಿದರು.
ಅಧ್ಯಕ್ಷತೆ ವಹಿಸಿದ ಶಾಲಾ ಮುಖ್ಯ ಶಿಕ್ಷಕಿ ಕಾರ್ಮಿನ್ ಪಾಯಿಸ್ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಜನೆಯ ಸಮಯದಲ್ಲಿ ಸಮಾಜದಲ್ಲಿನ ಆಗು-ಹೋಗುಗಳ ಬಗ್ಗೆ ಗಮನವನ್ನು ಕೇಂದ್ರೀಕರಿಸುತ್ತಾ, ಸಮಾಜಮುಖಿ ಕಾರ್ಯಗಳಲ್ಲೂ ತೊಡಗಿಸಿಕೊಂಡಾಗ ಸಮಾಜವು ಆರೋಗ್ಯವಂತ ಸಮಾಜವಾಗುವುದರಲ್ಲಿ ಸಂದೇಹವಿಲ್ಲ. ಅಂತರ್ರಾಷ್ಟ್ರೀಯ ಸೇವಾ ಸಂಸ್ಥೆ ಎನಿಸಿಕೊಂಡ ರೋಟರಿಯು ಇಡೀ ವಿಶ್ವದಲ್ಲೇ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುತ್ತಾ ಸರ್ವತ್ರ ಶ್ಲಾಘನೆಗೆ ಒಳಗಾಗಿದೆ ಎಂದರು.
ರೋಟರಿ ಸಿಟಿ ನಿಯೋಜಿತ ಅಧ್ಯಕ್ಷೆ ಗ್ರೇಸಿ ಗೊನ್ಸಾಲ್ವಿಸ್, ವಲಯ ಸೇನಾನಿ ಪ್ರಮೋದ್ ಮಲ್ಲಾರ, ಜಿಲ್ಲಾ ಪ್ರತಿನಿಧಿಯಾಗಿ ತನ್ವಿ ಶೆಣೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ರೋಟರಿ ಸಿಟಿ ಸದಸ್ಯರಾದ ಲಾರೆನ್ಸ್ ಗೊನ್ಸಾಲ್ವಿಸ್, ಜ್ಯೋ ಡಿ’ಸೋಜ, ಡಾ.ಶಶಿಧರ್ ಕಜೆ, ಶ್ರೀಲತಾ ಶೆಣೈ, ಆನ್ ಅಕ್ಷತಾ ಶೆಣೈ, ಇಂಟರ್‍ಯಾಕ್ಟ್ ಕ್ಲಬ್ ಸ್ಟಾಪ್ ಸಂಯೋಜಕರಾದ ನರೇಶ್ ಲೋಬೊ, ರೋಶನ್ ಸಿಕ್ವೇರಾ, ರೇಶ್ಮಾ ರೆಬೆಲ್ಲೋ, ರೋಟರಿ ಸಿಟಿ ಇಂಟರ್‍ಯಾಕ್ಟ್ ಚೇರ್‌ಮ್ಯಾನ್ ಆಗಿ ಧರಣಪ್ಪ ಗೌಡರವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಇಂಟರ್‍ಯಾಕ್ಟ್ ನೂತನ ಕಾರ್ಯದರ್ಶಿ ಪೂರ್ವಿ ಎಂ.ಎಸ್ ವಂದಿಸಿದರು. ಹತ್ತನೇ ತರಗತಿಯ ಫಾತಿಮತ್ ಝಾಹಿರಾ ಕಾರ್ಯಕ್ರಮ ನಿರೂಪಿಸಿದರು.
ಅಧ್ಯಕ್ಷ:ನಿಕ್ಷೇಪ್‌ಕೃಷ್ಣ, ಕಾರ್ಯದರ್ಶಿ:ಪೂರ್ವಿ ಎಂ.ಎಸ್
ಶಾಲಾ ನಾಯಕನಾಗಿರುವ ನಿಕ್ಷೇಪ್ ಕೃಷ್ಣರವರು ಇಂಟರ್‍ಯಾಕ್ಟ್ ಕ್ಲಬ್‌ನ ನೂತನ ಅಧ್ಯಕ್ಷರಾಗಿ ನೇಮಕಗೊಂಡರು. ಕಾರ್ಯದರ್ಶಿಯಾಗಿ ಕು|ಪೂರ್ವಿ ಎಂ.ಎಸ್, ಉಪಾಧ್ಯಕ್ಷರಾಗಿ ಬಿ.ನಾಗೇಂದ್ರ ಪೈ, ಜೊತೆ ಕಾರ್ಯದರ್ಶಿಯಾಗಿ ರಚನಾ ಪಿಂಟೊ, ಕೋಶಾಧಿಕಾರಿಯಾಗಿ ಆಪ್ಕೇಶ್ ಶೆಟ್ಟಿ, ಸಾರ್ಜಂಟ್ ಎಟ್ ಆರ್ಮ್ಸ್ ಆಗಿ ಕೌಶಲ್ ಗೌಡ, ಕ್ಲಬ್ ಸರ್ವಿಸ್ ನಿರ್ದೇಶಕರಾಗಿ ಎಂ.ದೀಪ ನಾಯಕ್, ಕಮ್ಯೂನಿಟಿ ಸರ್ವಿಸ್ ನಿರ್ದೇಶಕರಾಗಿ ಕೃಷ್ಣಪ್ರಸಾದ್ ಎ.ಟಿ, ಇನ್‌ಸ್ಟಿಟ್ಯೂಷನಲ್ ಸರ್ವಿಸ್ ನಿರ್ದೇಶಕರಾಗಿ ಸುರಕ್ಷಾ ಎಂ.ರೈ, ಇಂಟರ್‌ನ್ಯಾಷನಲ್ ಸರ್ವಿಸ್ ನಿರ್ದೇಶಕರಾಗಿ ನಿಧಿಶಾ ರೈರವರು ಆಯ್ಕೆಯಾಗಿರುತ್ತಾರೆ. ನೂತನ ಪದಾಧಿಕಾರಿಗಳಾಗಿ ಆಯ್ಕೆಗೊಂಡ ವಿದ್ಯಾರ್ಥಿಗಳಿಗೆ ರೋಟರಿ ಸಿಟಿ ಅಧ್ಯಕ್ಷ ಹಾಗೂ ಪದಾಧಿಕಾರಿಗಳು ರೋಟರಿ ಪಿನ್ ತೊಡಿಸಿ ಯಶಸ್ಸನ್ನು ಕೋರಿದರು.