ಪುತ್ತೂರು: ಪುತ್ತೂರು ಭಾಗದ ಮಹಿಳೆಯರಿಗೆ ಸೌಂದರ್ಯ ಕ್ಷೇತ್ರದಲ್ಲಿ ಹೈಟೆಕ್ ಸಿಟಿಯಲ್ಲಿ ಸಿಗುವಂತಹ ಸೌಲಭ್ಯಗಳು ದೊರೆಯಬೇಕೆನ್ನುವ ನೆಲೆಯಲ್ಲಿ ಹೊಸತೊಂದು ತಾಣ ಪುತ್ತೂರು ನಗರಭಾಗದಲ್ಲಿ ತಲೆಯೆತ್ತಿದೆ. ಗುಣಮಟ್ಟದ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ರೋಸ್‌ಮ್ಯಾಕ್ ಪ್ರೊಫೆಷನಲ್ ಲೇಡೀಸ್ ಬ್ಯೂಟಿ ಪಾರ್ಲರ್ ಅ.23ರಂದು ಬೊಳುವಾರಿನ ಜಿ.ಎಲ್. ಟ್ರೇಡ್ ಸೆಂಟರ್‌ನಲ್ಲಿರುವ ಪೂರ್ಣಚಂದ್ರ ಹೆಲ್ತ್ ಕೇರ್ ಬಳಿ ಶುಭಾರಂಭಗೊಳ್ಳಲಿದೆ.
ಸಂಸ್ಥೆಯನ್ನು ಜಿ.ಎಲ್.ಟ್ರೇಡ್ ಸೆಂಟರ್‌ನ ಮಾಲಕರಾದ ಜಿ.ಎಲ್. ಬಲರಾಮ ಆಚಾರ್ಯ ಅವರು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಖ್ಯಾತ ವಕೀಲ ಮಹೇಶ್ ಕಜೆ, ಕಹಳೆ ನ್ಯೂಸ್‌ನ ಶ್ಯಾಮ್ ಸುದರ್ಶನ್ ಹೊಸಮೂಲೆ, ಕೋಡಿಂಬಾಡಿ ಕೃಷ್ಣಕೃಪಾ ಇಂಡಸ್ಟ್ರೀಸ್‌ನ ಮಾಲಕಿ ಸಹನಾ ಭವಿನ್ ಅವರು ಭಾಗವಹಿಸಲಿದ್ದಾರೆ.
ರೋಸ್‌ಮ್ಯಾಕ್ ಲೇಡೀಸ್ ಬ್ಯೂಟಿ ಪಾರ್ಲರ್‌ನ ಮಾಲಕರಾದ ಮೊಹಮ್ಮದ್ ಶಾಹೀದ್ ಅವರು ಮುಂಬೈನಲ್ಲಿ ಬ್ಯೂಟಿ ಪಾರ್ಲರ್ ಕ್ಷೇತ್ರದಲ್ಲಿ ಅನುಭವ ಹೊಂದಿದವರು. 2002ರಲ್ಲಿ ಪುತ್ತೂರಿಗೆ ಆಗಮಿಸಿ ಪುತ್ತೂರಿನ ಬೊಳುವಾರಿನಲ್ಲಿ ಬ್ಯೂಟಿ ಪಾಯಿಂಟ್ ಎನ್ನುವ ಜೆಂಟ್ಸ್ ಹೈಟೆಕ್ ಬ್ಯೂಟಿಪಾರ್ಲರ್‌ನ್ನು ಪುತ್ತೂರಿಗೆ ಪರಿಚಯಿಸಿದ್ದರು. ಸೌಂದರ್ಯವರ್ಧಕ ಕ್ಷೇತ್ರಕ್ಕೆ ಸಂಬಂಧಪಟ್ಟ ಗುಣಮಟ್ಟದ ಸೇವೆಗಳನ್ನು ಒದಗಿಸಲು ಸಂಸ್ಥೆಯು ಸನ್ನದ್ಧವಾಗಿದೆ. ಪ್ರತಿಷ್ಠಿತ ಕಾಸ್ಮೆಟಿಕ್ಸ್ ಬ್ರ್ಯಾಂಡ್ `ಮ್ಯಾಕ್’ನ ಪ್ರಾಡಕ್ಟ್ ಗಳನ್ನೇ ಬಳಸಿಕೊಂಡು ಸೇವೆ ಒದಗಿಸಲಾಗುತ್ತದೆ.
ಸಂಸ್ಥೆಯು ಸಂಪೂರ್ಣ ಹವಾನಿಯಂತ್ರಿತವಾಗಿದ್ದು, ಅತ್ಯಾಧುನಿಕ ಸೌಕರ್ಯಗಳನ್ನು, ಉಪಕರಣಗಳನ್ನು ಹೊಂದಿದೆ. ಅನುಭವಿ ಸಿಬ್ಬಂದಿಗಳು ಸೇವೆ ಒದಗಿಸಲಿದ್ದು, ಗುಣಮಟ್ಟ, ಗ್ರಾಹಕರ ಸುರಕ್ಷತೆಯ ನಿಟ್ಟಿನಲ್ಲಿ ವಿಶೇಷ ನಿಗಾ ವಹಿಸಲಿದೆ. ವಿಶಾಲವಾದ 2000 ಸ್ಕ್ವೇರ್ ಫೀಟ್ ವಿಸ್ತೀರ್ಣ ಹೊಂದಿರುವ ಸಂಸ್ಥೆಯಲ್ಲಿ ಸ್ಕಿನ್ ಟ್ರೀಟ್‌ಮೆಂಟ್, ಹೇರ್ ಟ್ರೀಟ್‌ಮೆಂಟ್, ಹೇರ್ ಕಟ್ಟಿಂಗ್, ಹೇರ್ ಕಲರ್ ಮತ್ತು ಮದುಮಗಳಮೇಕಪ್ ಸೇವೆಗಳು ಲಭ್ಯವಿದೆ. ಶುಭಾರಂಭದ ಪ್ರಯುಕ್ತ ಬ್ರೈಡಲ್ ಮೇಕ್‌ಅಪ್‌ನ ಜೊತೆಗೆ ನಾಲ್ವರಿಗೆ ಉಚಿತವಾಗಿ ಮೇಕ್‌ಅಪ್ ಸೇವೆ ಲಭಿಸಲಿದೆ. ಮನೆಗೆ ತೆರಳಿ ಮೇಕ್‌ಅಪ್ ಮಾಡಿಕೊಡುವ ಸೌಲಭ್ಯವೂ ಇದೆ. ಹೆಚ್ಚಿನ ಮಾಹಿತಿಗಾಗಿ ಮೊ.ಸಂ.: 8123788744ನ್ನು ಸಂಪರ್ಕಿಸಬಹುದಾಗಿದೆ.