ಏಳ್ಮುಡಿಯಲ್ಲಿ ವೃದ್ಧೆಗೆ ಕಾರು ಡಿಕ್ಕಿ – ಕಾರಿಗೆ ಸ್ಕೂಟರ್ ಡಿಕ್ಕಿ

0

ಪುತ್ತೂರು: ವೃದ್ದೆಯೊಬ್ಬರಿಗೆ ಕಾರೊಂದು ಡಿಕ್ಕಿಯಾದ ಮತ್ತು ಕಾರಿನ ಹಿಂಬದಿಗೆ ಸ್ಕೂಟರ್‌ವೊಂದು ಡಿಕ್ಕಿಯಾದ ಘಟನೆ ಅ.೨೩ರಂದು ಏಳ್ಮುಡಿಯಲ್ಲಿ ನಡೆದಿದೆ. ಅಪಘಾತಕ್ಕೆ ವೃದ್ದೆಯ ತಲೆಗೆ ತೀವ್ರ ಗಾಯವಾಗಿದೆ.


ವೃದ್ಧೆ ಏಳ್ಮುಡಿಯಲ್ಲಿ ರಸ್ತೆ ದಾಟುತ್ತಿದ್ದ ಸಂದರ್ಭ ಕಾರು ಅವರಿಗೆ ಡಿಕ್ಕಿಯಾಗಿದೆ. ಕಾರನ್ನು ಹಠತ್ ನಿಲ್ಲಿಸಿದ ಪರಿಣಾಮ ಕಾರಿನ ಹಿಂಬದಿಯಿಂದ ಸ್ಕೂಟರ್ ಕಾರಿಗೆ ಡಿಕ್ಕಿಯಾಗಿದೆ. ಅಪಘಾತದಿಂದ ಗಾಯಗೊಂಡ ವೃದ್ಧೆಯನ್ನು ಪುತ್ತೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

LEAVE A REPLY

Please enter your comment!
Please enter your name here